ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೫

ತೃತಿಯಾಶ್ವಾಸಂ



     ಕಂ|| ನೀರೊಳಗಿರ್ದು೦ ಪೊರ್ದದು
           ನೀರಂ ನೀರೇಜಮೆಂಬವೋಲಬಲಾ ಶೃ೦||
           ಗಾರರಸ ಮಗ್ನನಾಗಿಯು
           ಮಾರಳವೆನೆ ತಳೆದನರಸನಿಂದ್ರಿಯ ಜಯಮ೦||೧೨||

ಮ||ಸ್ರ|| ಕುಳಭೂಭೃತ್ಕೂಟದೊಳ್ ಮಾಣಿಕದೆಳವಿಸಿಲೆಂತಂತೆ ದಿಕ್ಕುಂಭಿ ಕುಂಭ|
     ಸ್ಥಳದೊಳ್ಸಿಂದೂರಮೆಂತ೦ತಮರನದಿಯೊಳಾರಕ್ತ ನೀರೇಜ ಪತ್ರಾ||
     ವಳಿಯೆಂತಂತಬ್ಧಿಯೊಳ್ವಿದ್ರುಮ ಸಮುದಯಮೆಂತಂತೆ ಪರ್ವಿತ್ತು ರಾಗಾ|
     ವಿಳಮಪ್ಪಂತುರ್ವಿಯೆಲ್ಲಂ ದಶರಥ ವಸುಧಾಧೀಶ ತೇಜಃಪ್ರಕಾಶಂ||೧೩||

ಉ|| ಖಂಡಿಸಿ ವೈರಿವಂಶವನಮಂ ಕಡಿದುದ್ದತ ಶಾಖೆಯಂ,ಭುಜಾ|
     ದಂಡ ಕೃಪಾಣದಿಂ ಸಮರಿ ಕಂಟಕಮಂ ಸಮೆದಾತಪತ್ರದಿಂ||
     ಚಂಡಕರ ಪ್ರತಾಪಮಖಿಲೋರ್ವರೆಗಿಲ್ಲೆನೆ ತಣ್ಪು ಮಾಡಿದಂ|
     ದಂಡಧರೋತ್ತಮಂ ದಶರಥಂ ಸಫಲೀಕೃತ ಸನ್ಮನೋರಥಂ||೧೪||

ಚ|| ಅನಿಮಿಷ ಗಾಯಕರ್ದಶರಥ ಕ್ಷಿತಿನಾಯಕನಂಕಮಾಲೆಯ೦|
     ತನತನಗೊಲ್ದು ಪಾಡುವೆಡೆಯೊಳ್ಪುಳಕ೦ ಪೊರಪೊಣ್ಮೆ ಸೋಲ್ತು ಕೇ||
     ಧ್ವನಿಮಿಷ ನಾಯಕಂ ತನಗೆ ಚಾಮರಮಿಕ್ಕುವ ದೇವಕಾಮಿನೀ|
     ಜನ ಮಣಿಕಂಕಣ ಧ್ವನಿಗೋನಲ್ದ ವರ೦ ಕಿಸುಗಣ್ಚಿ ನೋಡುವಂ||೧೫||

ಉ|| ನೋಡಿರೆ ಕಿನ್ನರರ್ದಶರಥ ಕ್ಷಿತಿನಾಥನ ಬೀರದೇಳ್ಗೆಯಂ|
     ಪಾಡ್ಯಮರುಳ್ದು ಕೇಳ್ವ ಪದದೊಳ್ಕಿವಿಸಾರ್ದು ಜಿನುಂಗೆ ಸೌರಭ||
     ಕಾಡುವ ತುಂಬಿಗಳ್ದಿ ವಿಜನಾಥನವರ್ಕೆ ಕನುಲ್ದು ಮಾಣದೀ|
     ಡಾಡುವನಾ ನಮೇರು ಕುಸುಮಸ್ಯಬಕ್ರಂಗಳ ಕರ್ಣಪೂರಮಂ||೧೬||

     ಕಂ|| ಬಾಳ ಬಿಸಿಲಿನನ ತೇಜಮ
           ನೇಳಿಸೆ ನೆಲನಂ ಪಯೋಧಿಪರ್ಯಂತಂ ಬಾಯ್
           ಕೇಳಿಸಿ ದಶರಥನೊಳ್ಪಂ
           ಪಾಳಿಸಿ ಸುಖದಿ೦ದಮರಸುಗೆಯ್ಯುತ್ತಿರ್ದ೦||೧೭||

     ಆ ನಿಖಿಲರಾಜ ಕಿರೀಟಕೀಲಿತ ಹರಿನೀಲ ಮದಾಳಿಮಾಲಾ ಪರಿಚು೦ಬಿತ ಚರಣಾರವಿಂದನೊಂದು ದಿವಸಮಾಪ್ತಪರಿಜನಂಬೆರಸು ಕರುಮಾಡದೆರಡನೆಯ ನೆಲೆ


1. ಮುಗುಳು, ಕ. ಖ. ಗ, ಘ.