ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೦

ರಾಮಚಂದ್ರಚರಿತಪುರಾಣಂ

ಪ್ರಾಕಾರ ಕಮನೀಯಮುಮಂಬರ ತಳ ಚುಂಬಿ ಚಂಚದ್ಧ್ವಜರಾಜಿ ವಿರಾಜಮಾನ
ಮುಮನೇಕ ಮಣಿಭವನ ಭಾಸುರಮುಮೆನಿಸಿ ಜನಮನೋಹರಂ ಸ್ವಯಂವರ
ಭೂಮಿ ನಯನಾಭಿರಾಮಮಾದುದಲ್ಲಿ----
      ಕಂ|| ಪಳುಕಿನ ಚೌಖಂಡಂಗಳ
            ಕೆಳಗಣ ಚೆಂಬೊನ್ನ ಮತ್ತವಾರಣದೊಳ್ ಕ||
            ಣ್ಗೊಳಿಸಿದರನೇಕ ದೇಶಂ
            ಗಳ ರಾಜತನೂಜರೋಳಿಯಿಂದಿರ್ಕೆಲದೊಳ್||೩೭||

       ಆಗಳಲ್ಲಿ---
ಮ || ನಯನಾಕರ್ಷಣವಿದ್ಯೆ ಗಂಡುವರಿಜಂ ಕೈಕೊಂಡುದೋ ಗಂಡಗಾ|
        ಡಿಯನೀತಂಗೆ ಮನೋಜನೊಪ್ಪಿಸಿದನೋ ಪೆಳೆಂಬಿನಂ ಬಣ್ಣಿಸಲ್||
        ಬಯಸಲ್ತಕ್ಕ ಬೆಡಂಗು ಕಣ್ಗೊಳಿಸೆ ತನ್ನಂ ಕಂಡಣಂ ಕನ್ನೆಯಾ|
        ಸೆಯನಾ ರಾಜಕುಮಾರಕರ್ತೊಜಿವಿನಂ ಪೊಕ್ಕಂ ಸಭಾಸದ್ಮಮಂ||೩೮||

ಚ || ತೊಡವುಗಳೆಡ್ಡ ಮಾದನಿತರಿ೦ ತನಗಕ್ಕುಮೆ ಗಾಡಿ|ಗಾಡಿ ಮೆ|
       ಯೊಡವೆನೆ ಮಾಸಿ ರೂಪುಗರೆದಿರ್ದೊಡಮಾತನ ರೂಪಿದೊಂದು ಕ||
       ಣ್ದೊಡವೆನೆ ಬೇರದೊಂದು ಬಗೆಗಿಕ್ಕಿದ ಟಿಕ್ಕೆನೆ ವಶ್ಯದೊಂದು ತ
       ಣ್ಜೊಡರೆನೆ, ನೋಳ್ಪಿ ನೋಟಕರ ಕಣ್ಗೊಳಗಾದುದು ಕಣ್ಣಪಾಪೆವೋಲ್||೩೯||

       ಅಂತು ದಶರಥಂ ಸ್ವಯಂವರ ಸಭಾಸದನಮಂ ಪೊಕ್ಕು ತಾನುಂ ಜನಕನು
ಮೊ೦ದು ಕಡೆಯ ಪಟ್ಟ ಕಾಂಚನಮಂಚೋಪಾಂತದೊಳ್ ನಿಂದು ನೋಡುತ್ತುಮಿರೆ--

       ಕಂ||ಏರಿ ಮಣಿವೆಸದ ಸಿವಿಗೆಯ
            ನೇರಿಸಿ ಕುಡುವಿಲ್ಲನೊಡನೆ ಬರೆ ಕಂದರ್ಪಂ||
            ನೀರೆ ಮುಗಿಲ್ವೊರೆಯೊಳ್ ಮೆ
            ಯೋರುವ ಶಶಿಕಳೆಯ ಗಾಡಿಯಂ ಗೆಲೆವಂದಳ್||೪೦||
 
            ಯುವತೀರತ್ನದ ಕೆಲದೊಳ್
            ಧವಳ ವಿಲೋಚನ ಮರೀಚಿ ತಿಂಗಳ ಬೆಳಗಂ||
            ಕವರ್ದು ಕೊಳೆ ಕುಂಚದಡಪದ
            ಡವಕೆಯ ಕನ್ನಡಿಯ ಕನ್ನೆಯರ್ಕಣ್ಗೆಸೆದರ್|||೪೧||

ಎಳವೆರೆ ಪೊನ್ನ ಪುತ್ತಳಿಗೆ ರನ್ನದ ದೀವಿಗೆ ತನ್ನ ಪುಷ್ಪ ಕೋ|
ಮಳ ತನು ಬೇರೆ ಬೀರೆ ನಯನೋತ್ಸವಮಂ ನಿಜಲೋಚನಂಗಳು||