ಪುಟ:ರಾಮಚಂದ್ರ ಚರಿತ ಪುರಾಣಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೧

ತೃತಿಯಾಶ್ವಾಸಂ



       ತ್ಪಳ ದಳ ದಾಮಮಂ ಕೆದರೆಕಣ್ಗೆಸೆದಳ್| ನವರತ್ನಮಾಲೆ ಕೆಂ|
       ದಳದೊಳನಂಗಪಾಶಮೆನೆ ಕೈಕೆ ಮನೋಜನ ಬಯ್ತ ಬಯ್ಕೆವೋಲ್||೪೨||

         ಆ ಸಮಯದೊಳಖಿಳ ರಾಜಕುಲದುಭಯ ವಿಶುದ್ಧಿಯುಮನನ್ವಯ ಪ್ರಸಿದ್ಧಿ ಯುಮನರಿಪಿ---

        ಕಂ|| ಕಂಚುಕಿ ಪರಿವಿಡಿಯಿಂ ನೃಪ
              ಸಂಚಯಮಂ ತೋರೆನಿಂದುದಿಲ್ಲವಳ ತಟ||
              ಶೃಂಚಲ ನಯನಯುಗಂ ನಿಜ
              ದಿಂ ಚಳವೊಂದೆಡೆಯೊಳೆಂತುಮೇಂ ನಿಂದಪುದೇ||೪೩||

ಉ|| ಆ ನೆರೆದಿರ್ದ ರಾಜಸುತರಂ ಪರಿದೆಯ್ದಿ ಬಳಿಲ್ದು ವಿಶ್ರಮ|
     ಸ್ಥಾನಮನಾ ಮಹೀಭುಜನ ಮೆಯ್ಸಿರಿಯಂ ಸೆರೆಗೆಯ್ಯೆ ತತ್ಸರೋ||
     ಜಾನನೆ ತನ್ನ ಲೋಲ ನಯನ್ಲೋತ್ಪಲಮಾಲೆ ನೃಪಂಗೆ ಮಾಲೆಯಂ।
     ತಾನೊಸೆದಿಕ್ಕಿದಳ್ಳಿಖಿಲ ರಾಜಕುಲಂ ಮನಮಿಕ್ಕುವನ್ನೆಗಂ||೪೪||

     ಕ೦|| ಆ ರಾಜನ್ಯಕಮಿರೆ ಕ
           ನ್ಯಾರತ್ನಂ ರೂಪುಗರೆದೊಡಂ ನಿಜಪುಣ್ಯ||
           ಪ್ರೇರಣೆಯಿಂ ಕೈಸಾರ್ದ
           ತ್ತಾ ರಘುವೀರ೦ಗೆ ಪುಣ್ಯದೊಳ್ ಪುರುಡುಂಟೇ||೪೫||

ಉ|| ಎತ್ತಿದುವಾತಪತ್ರಶತಮಿಕ್ಕಿದುವಾಗಳೆ ಹೇಮಚಾಮರಂ|
      ಮುತ್ತಿನ ಸೇಸೆಯಂ ತಳಿದರಂಗನೆಯರ್ ಗಗನಾಂತರಾಳಮಂ||
      ಮುತ್ತಿದುದುತ್ಸವಾನಕ ರವಂ ದ್ವಿಜಮಂಗಳ ಮಂತ್ರ ನಾದಮು|
      ಣ್ಮಿತ್ತಿನಿತುಂ ವಿಭೂತಿ ಪತಿಗಾದುದು ಬಾಲಿಕೆ ಸೂಡೆ ಮಾಲೆಯಂ||೪೬||

ಅಂತಾತಂಗೆ ಕನ್ನೆ ಕೈಸಾರ್ವುದುಂ---

ಉ||ಬಾಲಿಕೆ ಮುಗ್ಧೆ ತಕ್ಕುದರಿಯಳ್ ಪಲರಂ ಪೆರಗಿಕ್ಕಿ ಸೂಡಿದಳ್
    ಮಾಲೆಯನಾಕೆಯಂ ಕಳೆದುಕೊಳ್ವುದು ದೇಸಿಗನಂ ತಗಳ್ವುದೀ||
    ಕಾಲವಿಳಂಬಮೇವುದೆನುತುಂ ರಣಬಾಲಕರಾ ಸಮಸ್ತ ಭೂ|
    ಪಾಲಕ ಬಾಲಕರ್ ಕದನಕೇಳಿಗೆ ಮಚ್ಚರದಿಂದೊಡರ್ಚಿದರ್||೪೭||


೧. ಬಾಲಕಿ. ಕ. ಖ. ಗ. ಘ. ಚ.