೬೯
ಯ ವಿಲಾಸಮನಿಕ್ಕಿ ಮೆಟ್ಟೆಯುಮಾಕೆಗಳ ಮುಖರಸದೊಳ್ಮುಡಿ ಮುಳ್ಕಾಡುವ
ಕಪೋಲ ಯುಗಳಂ ತಿಳಿಗೊಳದೊಳಗಣ ಬಿಳಿಯ ತಾವರೆಯೆಸಳಂ ಸರಸವಾಡೆಯು
ಮಾಕೆಗಳ ಪೆರೆನೊಸಲ೦ ಮೆಟ್ಟಿ ನಿಮಿರ್ದ ತೋರಗುರುಳ ತೊಂಗಲೆಳವೆರಿಯನಂ ಧಕಾರಮಾವರಿಸಿದಂತೆ ತೋರೆಯುಂ, ಅನಂತರಮವರ್ಗೆ ವುಂಸವನ ಸೀಮಂತೋ ನ್ನಯನಾದಿಸಕಲ ಮಂಗಳವ೦ ದಶರಥನರನಾಥಮಾಳ್ಪುದುಮನುಕ್ರಮದಿಂ ಶುಭ ದಿನಮುಹೂರ್ತದೊಳ್ ಸುಮಿತ್ರೆ ಲಕ್ಷ್ಮಣಂ, ಕೈಕೆ ಭರತನಂ, ಸುಪ್ರಭೆ ಶತ್ರು
ಪ್ರನಂ ಪಡೆವುದುಂ--
ಕಂ|| ಪಸರಿಸೆ ಪೂವಲಿಗಳ್ ಬಾ
ಜಿಸೆ ಬದ್ದವಣಂಗಳೊಡನೆ ಮಿಳ್ಳಿ ಸೆ ಗುಡಿಗಳ್
ದೆಸೆಬಿದ್ದವಾಡೆ ತರುಣಿಯ
ರೊಸಗೆಯಮೇಲೊಸಗೆಯಾದುದಂದರಮನೆಯೊಳ್||೧೩೪||
ಆಸಮಯದೊಳ್ ದಶರಥಂ ಸುತಮುಖದರ್ಶನೋತ್ಸುಕಂ ಕತಿಪಯಾಪ್ತ
ಪರಿಜನ ಪರಿವೃತಂ ಸುಮಿತ್ರಾದೇವಿಯ ಸೂತಿಕಾಸದನಮಂ ಪೊಕ್ಕು--
ಮ|| ಸಿರಿ ಸಿಂಹಕ್ಕಭಿಷೇಕಮಂ ಪಡೆವುದಂ ರತ್ನಾಕರಂ ಸುತ್ತಿದು|
ರ್ವರೆಯಂ ಭಾಸುರಚಕ್ರಮಂ ಕನಸಿನೊಳ್ ಪೊಂಬೆಟ್ಟವೇರಿರ್ದುದಂ||
ಹರಿಣೀನೇತ್ರೆ ಸುಮಿತ್ರೆ ಕಂಡುದರಿನಾಳ್ಗುಂ ಬೆಳ್ಳಿವೆಟ್ಟಂಬರಂ|
ಭರತಕ್ಷೇತಮನೆಂದು ಕಣ್ ತಣಿವಿನಂ ಸೌಮಿತ್ರಿಯಂ ನೋಡಿದಂ||೧೩೫||
ಕಂ|| ಬಾಲಾರ್ಕ ಮರೀಚಿಯೆನಲ್
ಬಾಲಕನ ಶರೀರಕಾಂತಿ ಪಸರಿಸೆ ಹರ್ಷೋ||
ನ್ಮೀಲನದಿಂ ದಶರಥ ನರ
ಪಾಲಕ ಮುಖಕಮಳಮೇಂ ಮನಂಗೊಳಿಸಿದುದೋ||೧೩೬||
ಅನಂತರಂ ಭರತಶತ್ರುಘ್ನರ ಜನ್ಮೋತ್ಸವ ಮಂಗಳಮನಾಚರಿಸಿ--
ಮ|| ಮನುವಂಶಾಂಬರಭಾನು ಕಲ್ಪತರು ಕೈವಂದಂತೆ ರೈ ವೃಷ್ಟಿ ಪ |
ಆನೆ ಕೊಂಡಂತೆ ಸುರೇಂದ್ರಧೇನು ಕರೆದಂತಾ ಇನ್ನು ಕೂರ್ತಿತ್ತು ಸ ॥ ಮ್ಮನದಿಂದಿತ್ತು ಸುಕೃಜ್ಜನಂ .ಪರಿಜನಂ ವಿದ್ವ ಸಿರಿತೀ ಮೆನಲ್ | ತನಯ ಮೂವರ ಜಾತಕರಮುಮನತ್ಯುತ್ಸಾಹಓ ಮಾಡಿದ೦ | ೧೩೭
1. ತೊಟ್ಟ ಸಿ ಕೊ೦ಡ೦ತ, ಗ, ಫ. ; <ಚ್ಚನೆ ಕೊದಂತೆ ಕ ಖ