೭೧
ಕಂ ||ಪರಮ ಪ್ರೇಮಂ ಜನ್ಮಾಂ
ತರದಿಂದೊಡವಂದುದೆನಿಸಿ ಗೆಡೆ ಬೆಚ್ಚವೊಲ
ಚ್ಚರಿಯಾಗೆ ರಾಮ ಲಕ್ಷ್ಮೀ
ಧರರೊಳಮಾದತ್ತು ಭರತಶತ್ರುಘ್ನರೊಳಂ||೧೪೩||
ಅಮಳ್ಗಳಿವರೆಂಬಿನಂ ತಮ
ಗಮಳ್ವೆಸರಮರ್ದೆಸೆಯೆ,ತಾಯ ತಂದೆಯ ಚಿತ್ತ||
ಕ್ಕಮರ್ದಿನ ಮಳಿಯಂ ಕರೆದರ್
ಕುಮಾರಕರ್ ಮೂರ್ತಿಗೊಂಡ ಪುರುಷಾರ್ಥದವೋಲ್||೧೪೪||
ಮ ||ಸುರಧೇನು ಸ್ತನಭಾರದಂತೆ ಪುರುಷಾರ್ಥ೦ ಮೂರ್ತಿಗೊಂಡಂತೆ ನಾ|
ಲ್ವರುಮೊಂದಾಗಿರೆ ನಂದನರ್ ದಶರಥಂ ನಾಲ್ಕುಂ ಸಮುದ್ರಂಬರಂ||
ಧರೆಯಂ ಕೂಡೆ ನಿಮಿರ್ಚಿ ನಾಲ್ದೆಸೆಯೊಳಂ ನಾಲ್ಕುಂ ಜಯಸ್ತಂಭಮಂ|
ಚರಿತಾರ್ಥರ್ ನಿಲಿಸಲ್ ಸಮರ್ಥರಿವರೆಂದುತ್ಸಾಹಮಂ ತಾಳ್ದಿದಂ||೧೪೫||
ಮತ್ತಂ ನಿಜ ತನೂಭವರ ನಿರ್ಜಿತ ಮನೋಜಾಕಾರಮುಮಂ, ೧ತಿಳ ಮಸೂರಿ
ಕಾದಿ ಶುಭ ವ್ಯಂಜನರಂಜಿತ ಪ್ರಶಸ್ತಾವಯವಂಗಳುಮಂ, ಹಲ ಕುಲಿಶ ಶಂಖ ಚಕ್ರ ಲಾಂಛನಂಗಳಪ್ಪ ಕರ ಚರಣಂಗಳುಮಂ ನೋಡಿ 'ಸಕಲ ಸಾಮ್ರಾಜ್ಯಶ್ರೀಯನಪ್ಪು
ಕೆಯ್ದಂತೆ ಸಂತೋಷದಂತಮನೆಯ್ದಿ--
ಕ೦।। ಸವಿವವಸರಮಿದು ವಿದ್ಯಾ
ಯುವತಿಯ ವದನಾರವಿಂದ ಮಧುವನೆನುತ್ತುಂ||
ವಿವಿಧ ಕಳಾಚಾರ್ಯರನಾ
ರ್ಯವರ್ಯರಂ ಗುರು ನಿಯೋಗದೊಳ್ ಯೋಜಿಸಿದಂ||೧೪೬||
ಶುಭದಿನ ಮುಹೂರ್ತದೊಳ್ ಪು
ಣ್ಯಭಾಗಿಗಳ್ ಕಲಿಸೆ ಗುರುಗಳೊಡವಂದುದೊ ಪೂ||
ರ್ವ ಭವೋಪಾರ್ಜಿತ ವಿದ್ಯಾ
ವಿಭವಮೆನಲ್ ಸಕಲಶಾಸ್ತ್ರ ಪರಿಣತರಾದರ್||೧೪೭||
ರೋಮಾಂಚಮನೊಡರಿಸೆಯುಂ
ರಾಮನ ಲಕ್ಷ್ಮಣನ ಭರತ ಶತ್ರುಘ್ನರ ವಿ
ದ್ಯಾ ಮಹಿಮೆ ಚತುಷ್ಪಷ್ಟಿಕ
ಲಾ ಮಹಿತರ ಮನದೊಳೀರ್ಷ್ಯೆಯಂ ಪುಟ್ಟಿಸುಗುಂ||೧೪೮||
೧. ಮುಡಿಳ. ಘ. ; ತೀಳಿಳ, ಚ.