೭೩
ಕಂ|| ಏಳಿಸಿದುವು ಲಕ್ಷ್ಮಣನ ವಿ
ಶಾಳ ವಿಲೋಚನ ಯುಗಂಗಳಂಗ ಪ್ರಭೆಯಿಂ||
ಮೇಳಿಸಿ ನಗೆಯಂ ಪಾಳಿಸಿ
ಕಾಳಿಂದಿಯೊಳಲರ್ದ ಪುಂಡರೀಕ ಶ್ರೀಯಂ||೧೫೫||
ಹರಿನೀಲ ರತ್ನಮಂ ಕ೦
ಡರಿಸಿದ ಕಣ್ದೆರವಿ೧ಗೆಯ್ದೆ ಜೀವಂಬೊಯ೦||
ತಿರೆತೋರ್ಪ ಗಂಡಗಾಡಿಗೆ
ಪುರುಷೋತ್ತಮನೆಂದು ಕೊಂಡು ಕೊನೆದುದು ಲೋಕಂ||೧೫೬||
ಚ|| ಮನಮನಲರ್ಚಿದತ್ತು ಪುರುಷೋತ್ತಮನುಚ್ಚ ಲಲಾಟ ಲೇಖೆ ಕೃ
ಷ್ಣನ ಕುರುಳೋಳಿ| ವಿಷ್ಣುವಿನ ಪೇರುರಮಾಯತಿವೆತ್ತ ವಾರಿಜಾ|
ಕ್ಷನ ಧವಳೇಕ್ಷಣ೦ ಪುರುಷಸಿಂಹನ ಸಿ೦ಹ ಕಟೀತಟಂ ಜನಾ|
ರ್ದನನ ಭುಜಂಗ ಭೀಮ ಭುಜಮಂಬುಜನಾಭನ ನಾಭಿಮಂಡಲಂ||೧೫೭||
ಪೊಳೆಯೆ ನಖಾಂಶುಮಂಡಲ ಫಣಾಮಣಿ,ಪಂಚಫಣಾಸಿತಾಹಿಗಳ್
ಬಳೆದಪುವೀಂಟಲೆಂದು ದಶಕಂಠನ ಬಲ್ಲುಸಿರಂತದೀಯ ನಿ||
ರ್ಮಳತರ ಕೀರ್ತಿ ದುಗ್ಧರಸಪಾನಮನಂಬಿನೆಗಂ ಪೊದಳ್ದು ಕೋ|
ಮಳಿಕೆಯನಾಳ್ದು ನೀಳ್ದು ಬಗೆಗೊಂಡುವು ಕೃಷ್ಣನ ಬಾಹುಶಾಖೆಗಳ್||೧೫೮||
ಉ|| ಹಾರ ಮರೀಚಿಯಂ ಮರಕತಚ್ಛವಿಯಂ ಗೆಲೆ ದೇಹದೀಪ್ತೀ ನೀ
ಹಾರ ಮರೀಚಿಯಂ, ಕುಸುಮ ಸಾಯಕನಂ ಗೆಲೆ ಗಂಡಗಾಡಿ
ಠೀರವ ನಾದಮಂ, ಜಲಧರಧ್ವನಿಯಂ ಗೆಲೆ ಬೇರೆಬೇರೆ ಗಂ|
ಭೀರರವ೦ ಬಲಾಚ್ಯುತರದೇನೆಸೆದಿರ್ದರೊ ರಾಮಲಕ್ಷಣರ್
ಮ|| ರಣದೊಳ್ ರಾವಣನಂ ಜವಂಗೆ ಪೊಸತಿಕ್ಕಲ್,ತಾರಶೈಲಕ್ಕೆ ತೆಂ
ಕಣದಂ ಕಂಕಣದಂತೆ ಕೈಗೆವರಿಸಲ್ ಭೂಚಕ್ರಮಂ ಚಕ್ರಮಂ||
ರಣದೊಳ್ ಸಾಧಿಸಲೆಂದು ಪುಟ್ಟಿದವರೇ೦ ಸಾಮಾನ್ಯರೇ ರಾಮ ಲ
ಕ್ಷ್ಮಣರಪ್ರಾಕೃತವಿಕ್ರಮರ್ ತ್ರಿಭುವನ ಪ್ರಖ್ಯಾತ ಕೀರ್ತಿಧ್ವಜರ್||೧೬೦||
ಅ೦ತು ರಾಮ ಲಕ್ಷ್ಮಣ ಭರತ ಶತ್ರುಘ್ನರೆಂಬ ನಾಲ್ವರ್ ತನೂಭವರುಂ ನಾಲ್ಕುಂ ರತ್ನಶಿಲಾಸ್ತಂಭ೦ಗಳಂತೆ ರಘುಕುಲ ಸಮುದ್ಧರಣ ಸಮರ್ಥರಾಗೆ ದಶರಥಂ ಪರಿಪೂರ್ಣ ಮನೋರಥನಾಗಿ--
೧. ಗೆಯ್ದು, ಕ. ಖ. ಗೆಯ್ದ. ಚ.