ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

8

ಪಂಪರಾಮಾಯಣದ ಕಥೆ

ತಂದ ತೆರನನ್ನು ತಿಳಿಸಿದನು. ಇದನ್ನು ಕೇಳಿ ಇಂದುಗತಿಯು ಸಂತೋಷಪಟ್ಟು, ಮಂಗಳವಾದ್ಯಧ್ವನಿಯು ನಾಲ್ಕು ದಿಕ್ಕನ್ನೂ ತುಂಬುತ್ತಿರಲು, ಪರಿವಾರ ಸಮೇತ ನಾಗಿ ಪೂಜಾಪರಿಕರದೊಡನೆ ಜಿನಮಂದಿರವನ್ನು ಹೊಕ್ಕು ದರ್ಶನ ಸ್ತುತಿಗೈದು ಜಿನೇಶ್ವರನನ್ನಾರಾಧಿಸಿ ಅಭ್ಯಾಗತನಾದ ಜನಕನನ್ನು ಸ್ವಾಗತ ಸಂಭಾಷಣಗಳಿಂದ ಮನ್ನಿಸಿ ತನ್ನ ಮಗನಿಗೆ ಅನುರೂಪಳಾದ ಸೀತೆಯನ್ನು ಮದುವೆಮಾಡಿಕೊಟ್ಟು ತನ್ನೊಡನೆ ಬಾಂಧವ್ಯವನ್ನು ಬೆಳೆಯಿಸಬೇಕೆಂದು ಕೇಳಿದನು. ಅದಕ್ಕೆ ಜನ ಕನು ಕನೈಯನ್ನು ಇಂದುಗತಿಯ ಮಗನಿಗೆ ತಾನು ಸಂತೋಷದಿಂದ ಕೊಡ ಬಹುದಾದರೂ ಸೀತೆಯನ್ನು ಆಗಲೇ ಪರಾಕ್ರಮಶಾಲಿಯಾದ ರಾಮನಿಗೆ ಕೊಟ್ಟಿರುವೆನಾದುದರಿಂದ ತನ್ನ ಮಾತನ್ನು ಹಿಂದಕ್ಕೆ ತೆಗೆದುಕೊಂಡಲ್ಲಿ ಲೋಕವು ಮೆಚ್ಚದೆಂದು ಉತ್ತರಕೊಟ್ಟನು. ಇದಕ್ಕೆ ಇಂದುಗತಿಯ ಇತರ ಖಚರರೂ ಜನಕನನ್ನು ದೂರಿ, ಖೇಚರಾಧಿಪತಿಯು ಮಗಳನ್ನು ಕೇಳುತ್ತಿರುವಲ್ಲಿ ಸಾಮಾನ್ಯ ಭೂಚರನಿಗೆ ಕೊಡುವುದುಂಟೇ ಎಂದು ಮೂದಲಿಸಲು, ಜನಕನು ಮುನಿದು ಆತ್ಮಪ್ರಶಂಸೆಯ ಪರನಿಂದೆಯೂ ತಕ್ಕುದಲ್ಲವೆಂದು ಹೇಳಿ, ಅತ್ಯಂತ ಪರಾಕ್ರಮ ಶಾಲಿಗಳಾದ ರಾಮಲಕ್ಷ್ಮಣರು ಬಲಾಡ್ಯತರಲ್ಲವೆ ? ಅವರ ಸಮಾನರು ಮತ್ತಾ ರಿರುವರು ? ಎಂದು ಕೇಳಲು, ಇಂದುಗತಿಯು ಕೋಪಗೊಂಡು ರಾಮನು ಅ೦ತಹ ಬಲಶಾಲಿಯಾಗಿದ್ದಲ್ಲಿ ವಜ್ರಾವರ್ತ ಚಾಪವನ್ನು ಏರಿಸಿದ ಪಕ್ಷಕ್ಕೆ ವೈದೇಹಿ ಯನ್ನು ಅವನಿಗೇ ಕೊಡೆಂದೂ ಇಲ್ಲದಿದ್ದರೆ ತನ್ನ ಮಗನಿಗೆ ಕೊಡೆಂದೂ ಹೇಳಲು, ರಾಮನ ಪರಾಕ್ರಮವನ್ನು ಬಲ್ಲ ಜನಕನು ಅದಕ್ಕೊಪ್ಪಿದನು.
ಅನಂತರ ಜನಕನನ್ನು ವಿಚಿತ್ರವಾದಿಗಳಿ೦ದಲ೦ಕರಿಸಿ ವಿದ್ಯಾಧರ ಕುಲಕ್ಕೆ ಮೊದಲಿಗರಾದ ನಮಿ ವಿನಮಿಗಳಿಗೆ ನಾಗರಾಜನಿತ್ತ ವಜ್ರಾವರ್ತ ಸಾಗ ರಾವರ್ತಗಳೆಂಬ ಬಿಲ್ಲುಗಳನ್ನು ತರಿಸಿಕೊಟ್ಟು ಅವಕ್ಕೆ ಚಂದ್ರವರ್ಧನನೆಂಬ ಮಹ ತರನನ್ನು ಕಾವಲಾಗಿ ನಿಯಮಿಸಿ ವಿಯಚ್ಚರ ಸೇನೆಯೊಡನೆ ಜನಕನನ್ನು ಮಿಥಿಲಾಪುರಕ್ಕೆ ಕಳುಹಿಸಿದನು. ಮಿಥಿಲೆಯ ಜನರು ತಮ್ಮ ದೊರೆಯು ಹಿಂದಿ ರುಗಿ ಬರುವುದನ್ನು ಕಂಡು ಅತ್ಯಂತ ಸಂತೋಷಪಟ್ಟರು. ಜನಕನು ಪಟ್ಟಣ ವನ್ನು ಸೇರಿದ ಕೂಡಲೆ ಚಂದ್ರವರ್ಧನಾದಿಗಳನ್ನು ಉಚಿತ ಮರ್ಯಾದೆಗಳಿ೦ದ ಸತ್ಕರಿಸಿ ಬಿಲ್ಲುಗಳನ್ನಿಡುವುದಕ್ಕೆ ತಕ್ಕ ಸ್ಥಳವನ್ನೇರ್ಪಡಿಸಿದನು.
ಜನಕನು ಆ ದಿನ ರಾತ್ರಿ ಶಯ್ಯಾಗೃಹದಲ್ಲಿ ತನ್ನರಸಿಗೆ ತಾನು ಹೋಗಿ ಬ೦ದ ವೃತ್ತಾಂತವನ್ನು ಸವಿಸ್ತಾರವಾಗಿ ತಿಳಿಸಲು ಆಕೆಯು ಬಹಳ ಭಯಪಟ್ಟು ಬಿಲ್ಲುಗಳ ನೆಪದಿಂದ ತನ್ನ ಮಗಳನ್ನು ಖೇಚರರು ಹೊತ್ತು ಕೊಂಡು ಹೋಗುವ ರೆಂದು ಅಳತೊಡಗಿದಳು. ರಾಮಲಕ್ಷ್ಮಣರು ಕಾರಣ ಪುರುಷರೆಂದೂ ಆ ಬಿಲ್ಲುಗಳನ್ನು ಬಗ್ಗಿಸಲು ಅವರೇ ತಕ್ಕ ಸಮರ್ಥರೆಂದೂ ಆಕೆಗೆ ತಿಳಿಸಿ ಜನಕನು ಆಕೆಯನ್ನು