ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನನಮಾಶ್ಚಾಸಂ

೨೪೫

ಕಂ॥ಸೌಮಿತ್ರಿಯ ಕೋಪಾಗ್ನಿಶಿ
ಖಾ ಮಾಲೆಗೆ ಸುಗಿದು ಖರನ ವಿಜಯಶ್ರೀ ಸಂ॥
ಗ್ರಾಮದೊಳಾಶ್ರಯಿಸಿದಳಾ
ರಾಮಾನುಜ ಭುಜ ಕೃಪಾಣ ಧಾರಾ ಗ್ರಹಮಂ॥ ೧೨೯॥
ಆನಂತರಂ--
ಕಂ॥ಅಗ್ರಜನ ಮರಣ ದು:ಖದೊ
ಳಾಗ್ರಹದಿಂ ಮೇಲೆ ವಾಯ್ದ ದೂಷಣನಂ ನೀ॥
ರಾಗ್ರೇಸರನಸಿಯಿಂದ
ಗ್ರ ಗ್ರಾಸಂ ಮಾಡಿದಂ ಜವಂಗಾಹವದೊಳ್॥ ೧೩೦ ॥
ಆ ಸಮಯದೊಳ್. -
ಕಂ॥ಸಮನಿಸಿದತ್ತು ಜಯಶ್ರೀ
ರಮಣಿಗೆ ಪರಿಣಯನಮತ್ಸುದುಂ ಲಕ್ಷ್ಮಣನೊಳ್ ॥
ಸುಮನೋವರ್ಷ ಸಮನ್ವಿತ
ಮಮರಾನಕ ನಿನದಮಮರ ಜಯಜಯ ನಿನದಂ॥೧೩೧॥

ಅಂತು ಗೆಲ್ಲಂಗೊಂಡು ಕೈದುವಿಕ್ಕಿ ಶರಣೆಂದು ಬಂದ ನಿರೋಧಿ ವಾಹಿನಿಯಂ
ವಿರಾಧಿತಂಗೆ ಬೆಸಕೆಯ್ದು ಬಾಟ್ರಂತುಮನರನವರ ಪೂರ್ವ ವೃತ್ತಿಯೊಳ್ ನಿಲಿಸು
ವಂತುಂ ನಿಯಮಿಸಿ ಬರುತ್ತುಂ.
ಚ ॥ಮದಜಲ ಧಾರೆಯಿಲ್ಲದ ದಿಶಾಗಜದಂತೆ ಸುಧಾಂಶುಲೇಖೆ ಯಿ |
ಲ್ಲದ ನಭದಂತೆ ಕಲ್ಪಲತೆಯಿಲ್ಲದ ನಂದನದಂತೆ ವೇಲೆಯಿ
ಲ್ಲದ ಕಡಲಂತೆ ಕೇಸರಿಣಿಯಿಲ್ಲದ ಕೇಸರಿಯಂತೆ ಸೀತೆಯಿ |
ಲ್ಲದ ರಘುವಂಶರಾಮನಿರೆ ನೋಡಿದನಾಕುಲನಾಗಿ ಲಕ್ಷ್ಮಣಂ॥೧೩೨॥

ಅಂತು ಮನದೊಳಲ್ಲಾಡುತ್ತುಮೆಯ್ದೆವಂದು ಚರಣಾರವಿಂದ ರಜೋಲಲಾಮ
ಲಕ್ಷಿತ ಲಲಾಟನಪ್ಪುದುಮತಿವಿಷಮ ರಣಾಂಗಣದೊಳವ್ರಣ ಕಾಯನುಮಜೇಯನು
ಮೆನಿಸಿ ವಿಜಯಶ್ರೀಯೊಡಗೂಡಿದುದರ್ಕೆ ಮನದೊಳೆ ಮೆಚ್ಚಿ ಮುಹುರ್ಮುಹು
ರಾಶೀರ್ವಾದ ಮುಖರ ಮುಖನಾದ ರಾಮದೇವನಂ ಲಕ್ಷ್ಮಣಂ ಮದಂಬಿಕೆಯಂ
ಕಂಡೆನಿಲ್ಲೆತ್ತಲಿರ್ದನಳೆಂಬುದುಮಾಂ ನಿನ್ನಲ್ಲಿಗೆ ಬಂದ ಸಿಂದೆ ಸಿಂಹ ಶರಭಾದಿ ರೌದ್ರ
ವನನಚರಂಗಳುಯ್ದು ವೆಂದಜೌಯೆನಾವನಾನುಮೊರ್ವಂ ಮಾಯಾವಿ ಕಳ್ಪುಯ್ಪನೆಂ
ದಜೀಯೆನಿನ್ನೆವರಮರಣ್ಯದೊಳ್ ತೊಬಲ್ದೆಲ್ಲಿಯುವುಅಸಿ ಕಂಡೆನಿಲ್ಲೆಂದು ನೊಂದು
ನುಡಿವುದುಮದರ್ಕೆ ಲಕ್ಷ್ಮಣಂ ವಿಷಣ್ಣ ಹೃದಯನುದ್ದೀಪಿತ ಕೋಪಶಿಖಿ ಶಿಖಾ
ಕಲಾಸನಿಂತೆಂದಂ--