ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮೦ ರಾಮಚಂದ್ರ ಚರಿತಪುರಾಣಂ ಬಲಿ ಶಿಖಿಗಳೆಂಬಿರ೦ತೇವಾಸಿಗಳಾದರವರ್ ವಿದ್ಯಾಮರಮೆ ತಮಗೆ ವೈರಕಾರಣ ಮಾಗೆ ವರ್ತಿಸುತ್ತಿರ್ದು ಮತ್ತೊಂದು ದೆವಸಂ ಧೇನುವಿಕ್ರಯ ನಿಮಿತ್ತ ಮೋರೆ ರ್ವರನಿದು ಸತ್ತು ಕಂ || ಕಲುಷಮತಿ ಶಬರನಾದಂ ಬಲಿ ಶಿಖಿಯುಂ ವೃಷಭನಾಗಿ ಶಬರಂ ತನ್ನಂ || ಕೋಲೆ ಮೂಷಕನಾದಂ ಕ೦೨ ದು ಲುಬ್ಬಕಂ ಬದ್ಧರೋಷದಿಂ ಬೆಕ್ಕಾದಂ 11 ೯೬ 11 ಅಂತು ಪರಸ್ಪರೋಪಘಾತ ಪರಿಣತಿಯಿಂ ಕಂ || ಅನುಭವಿಸಿ ಹಲವು ಕಾಲಮ ನನಂತ ಭವದೊಳ್ ದುರಂತ ದುಷ್ಕತ ಫಲಮಂ ! ಜಿನದೇವ ದಿತ೦ಗಾದರ್ ತನೂಜರವರೊರ್ಮೆ ವಾರಣಾಸೀಪುರದೊಳ್ || ೯೭ || ಅನಂತರಂ ವ್ಯ೦ತರಗತಿಯೊಳ್ ಸುರೂಪ ಸುಂದರವೆಸರಂ ಪಡೆದಲ್ಲಿಂ ಬ೦ದು ಸೋಮಪುರದೊಳ್ ಕುಲಂಧರ ಪುಷ್ಯಭೂತಿಗಳೆ೦ಬರಾಗಿ ಜನಿಯಿಸಿ ಜಾಯಾ ನಿಮಿತ್ತಂ ವೈರ ವೈರಸ್ಯ ಮನಸ್ಕರಾಗಿ ಸಲುತ್ತು ಮೊರ್ಮೆ ಪುಣ್ಯವಶದಿನಗಣ್ಯ ಪುಣ್ಯ ಧನರಂ ತಪೋಧನರಂ ಕ೦ಡುಪಶಾಂತ ಸ್ವಾಂತರಾಗಿ ತೊಳೆದು ಸತ್ತು ಸನತ್ತು ಮಾರಕಲ್ಪ ದುಷಪಾತ ಕಲ್ಪದೊಳ್ ಪುಟ್ಟಿ ನಾಕಲೋಕ ಸುಖಮನನುಭವಿಸಿ ಬಂದು ಧಾತಕೀ ಷಂಡದವರೆವಿದೇಹದ ವಿಜಯಾವತೀವಿಷಯದ ವಿಜಯಪುರದೊಳ್ ಒಡ ವುಟ್ಟಿದ ಊರಧರನುಮನರಧರನುಮೆಂಬರಾದರಾ ಪುರಮನಾಳ್ವ ಸಹಸ್ರಶೀರ್ಷ ನೆಂಬನೊಂದು ದಿವಸಮಾನೆವೇಂಟೆಗಡವಿಯಂ ಪೊಕ್ಕು ಪರಸ್ಪರೋಪದ್ರವಕಾರಿ ಗಳಪ್ಪ ಕ್ರೂರಮೃಗಂಗಳುಪಶಮಭಾವದಿ೦ದಿರೆ ಕಂಡು ಕೌತುಕಂಬಟ್ಟು ತೊಅ ಲುತ್ತು ಮಲ್ಲಿ ವಿನಯಂಧರ ಕೇವಲಿಗಳಂ ಕಂಡು ತಚ್ಚರಣ ಸಮಕ್ಷದೊಳ್ ದೀಕ್ಷೆ ಯಂ ಕೊಂಡು ಮೋಕ್ಷಕ್ಕೆ ಪೋದನಿತ್ತಲಾ ಕೂರಧರನುಮಮರಧರನುಮಾ ಕೇವಲಿಗಳ ಪಾದಪಾರ್ಶ್ವದೊಳ್ ತಪಂಗೆಯು ಶರೀರಮಂ ತೊರೆದು ಶತಾರಕಲ್ಪ ದೊಳನಲ್ಲ ಸುಖಮನನುಭವಿಸಿ ಬಂದಾ ಬಲಿಯುಂ ಶಿಖಿಯುಂ ಸಹಸ್ರಲೋಚನನುಂ ತೋಯದವಾಹನನುವಾದರೆಂದು ಬೆಸಸಿ - - - - - - - - - - - - - - 1. ಪರಿಣಾಮ ಪರಿಣತಿಯ೦, ಕ, ಘ, ಚ,