ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಚಂದ್ರಚರಿತಪುರಾಣಂ ಅಂತು ಚಂದ್ರಹಾಸಮಂ ಸಾಧಿಸಿ ವಿದ್ಯೆಯಿಂ ಸ್ವಯಂಪ್ರಭವೆಂಬ ಪೋಲಿಲಂ ಮಾಡಿ ನಿಜ ಪರಿಜನಂಬರನು ಬಂಧುಜನಮಂ ಬರಿಸಿ ಕಂ # ಪಲವು೦ವಿದ್ಯೆಯೊಳಂ ಭುಜ ಬಲದೊಳಖಾ ದೊರೆಯರಾರುಮಿಲ್ಲೆನಿಸಿ ಸುಹೃ || ತುಲಮಂ ಪಾಲಿಸುವಸು ತುಲಮಂ ಸಾಧಿಸುವ ಮನದಳುರ್ಕೆಯಿನಿರ್ದ೦ | ೧೪೯ || ಅಂತಿರ್ಪುದುಮಿತ್ತ ಸುರಸಂಗೀತಕಪುರ ಪ್ರಧಾನ ಮಯಂ ತನ್ನ ಮಗಳಪ್ಪ ಮಂಡೋದರಿಯಂ ನೈಮಿತ್ತಿಕಾದೇಶದಿಂ ವಿಮಾನಮನೇಲಿಸಿಕೊಂಡು ಚರ ನಿರೂ ಪಿತಮಪ್ಪ ಸ್ವಯಂಪ್ರಭ ನಗರಕ್ಕೆ ವಂದು ದಶವದನಂಗೆ ಮಹಾವಿಭೂತಿಯಿಂ ಮದುವೆಯಂ ಮಾಟ್ಟು ದುಮನಂತರಂ ಮಯ ಮಾರೀಚಾದಿಗಳಂ ಮನ್ನಿಸಿ ಕಳಿಸಿ ಬಲ್ಯಂ ತನ್ನ ವಿದ್ಯೆಗಳಂ ನಿಗುರ್ವಿಸಿ ನೋಡಿ ಹರ್ಷದೊಳ್ ಕೂಡಿ ಭೌಮ ವಿಹಾರಕ್ಕೆ ಪೋಗುತ್ತುಂ ಮೇಘಶೃಂಗವೆಂಬ ನಗ ನಿತ೦ಬದ೦ಬುಜ ಷಂಡದೊಳ್ ಪದ್ಮಯುಂ ವಿದ್ಯುತ್ಸಭೆಯುಮಶೋಕಲತೆಯುಂ ಮೊದಲಾದ ಅಸಾಸಿರ್ವರ್ ಕನ್ನೆ ಯರ್ ನೀರಾಟಮುನಾಡುವುದು ಕಂಡು ಮನಂಗೊಂಡಾಕೆಗಳ೦ ಗಾಂಧರ್ವ ವಿವಾಹದಿಂ ಸ್ವೀಕರಿಸಲ್ಬಗೆವುದುಂ ಕನ್ನೆಯರಿನಾ ವಾರ್ತೆಯನವರಯ್ಯನಪ್ಪ ಸುರ ಸುಂದರಂ ಕೇಳು ಕನಕಮಾಲಂಬೆರಸು ಮೇಲೆತ್ತಿಒರ್ಪುದುಂ ಕಾದಿ ನಾಗಪಾಶದಿಂ ಕಟ್ಟ ಕೊಲಲೊಲ್ಲದೆ ಬಿಟ್ಟು ಕಳೆದುದರ್ಕೆ ಮೆಚ್ಚಿ ಕಂ || ಅನಿಬರ್ ಕನ್ನೆಯರುಮನಾ ಜನಪತಿ ಪರಿಣಯನ ವಿಭವದಿಂದೀಯೆ ದಶಾ | ನನನೊಸೆದು ಮದುವೆನಿಂದಾ ನಗರಮಂ ಬಂದು ಪೊಕ್ಕನತ್ಯುತ್ಸವದಿಂ 1 ೧೫೦ || ಅಂತು ಸ್ವಯಂಪ್ರಭ ನಗರಕ್ಕೆ ವಂದು ಕುಂಭಪುರದ ಮಹೋದರಂಗಂ ಸುರೂಪೆಗಂ ಪುಟ್ಟಿದ ವಿದ್ಯುದ್ವೇಗೆಯಂ ಭಾನುಕರ್ಣಂಗೆ ಮದುವೆಮಾಲ್ಪುದು ಮಾತನಾಕೆಗತಿ ಸ್ನೇಹಿತನಾಗಿ ಕುಂಭಪುರದ ಮಾತುಗಳನಾಗಳುಂ ಮೆಚ್ಚಿ ಕೇಳುತ್ತು ಮಿರ್ದೊ ತಾತಂಗೆ ಕುಂಭಕರ್ಣಾಭಿಧಾನವಾಯ್ತು ಮತ್ತಂ ಜ್ಯೋತಿಃಪ್ರಭ ಪುರವ ನಾಳ್ವ ಶುದ್ದ ಕಮಲಂಗಮಾನಂದಮಾಲೆಗಂ ಪುಟ್ಟಿದ ರಾಜೀವಸರಸೆಯೆಂಬ ಕನೆ ಯಂ ವಿಭೀಷಣಂಗೆ ಮದುವೆಮಾಡಿ ಸುಖದಿನಿರೆ ಕಂ | ಮಂಡೋದರಿ ಪಡೆದಳ್ ಮು ೩ಂದಗಿಯಂ ಬಳಕೆ ಮೇಘವಾಹನನಂ ಶ | "