409 ರಾಮಚಂದ್ರ ಚರಿತ ಪುರಾಣಂ ಶ್ವರರುಂ ಬಳಸಿ ಬರೆ ವಿವಿಧವಾಹನ ವಿಚಿತ್ರಾತಪತ್ರ ಪಾಳಿ ಕೇತನಂಬೆರಸುತ್ತರಾಭಿ ಮುಖಮಿಂದ್ರನಮೇಲೆ ನಿಚ್ಚ ವಯಣದಿಂ ಬರುತ್ತುಂ ರೈವತ ನದೀ ತೀರದೊಳ್ ಬೀಡು ಬಿಟ್ಟಾತೊರೆಯ ಸೈಕತಸ್ಥಳದೊಳ್ ರತ್ನಮಂಟಪವನೆತ್ತಿಸಿ ಸಿಂಹಾಸನದ ಮೇಲೆ ಮಣಿಮಯ ಜಿನಪ್ರತಿ ಮಯಂ ನಿಲಿಸಿ ಪೂಜಿಸುವ ಸಮಯದೊಳ್ ಕಂ ! ತೀವಿ ಬರೆ ಭೋಂಕನಾ ನದಿ ರಾವಣನತಿ ಸಂಭ್ರಮಾಕುಲಂ ನೆಗೆದು ನಭ || ಕ್ಯಾವುದು ಕಾರಣದಿಂದೀ ರೈವತ ನದಿ ಬಂದುದೆಂದು ವಿಸ್ಮಿತನಾದಂ {! ೧೮೦ || ಆಗಿ ಕಾಲವಲ್ಲದ ಕಾಲದೊಳ್ ತೊಜತೆ ಬಂದ ಕಾರಣನನಾರಯ್ಯುದೆಂದು ದೂತನನಟ್ಟುವುದುಮಾತನದೆಲ್ಲವನಅದು ಬ೦ದು ಮಾಹಿಷ್ಮತೀ ಪುರಾಧೀಶ್ವರಂ ಸಹಸ್ರಬಾಹುವೀ ತೊಜಿಯಂ ಜಂತ್ರಂಗಳಿಂ ಕಟ್ಟಿ ನಿಜಾ೦ತಃಪುರಸಹಿತಂ ನೀರಾಟ ವಾಡಿ ಜಂತ್ರಂಗಳಂ ಕಳೆಯೆ ಪೊನಲ್ ಕವಿತಂದುದೆಂದು ಬಿನ್ನವಿಸಿ ಕಂ| ತ್ರಿಜಗದ್ಧೂಷಣ ಮಾದ್ಯ ಧ್ವಜವಂ ಮುಳಿದೇಶಿ ರಾವಣಂ ನಡೆದಸು ! Lಜಿನಿಯನೋಡಿಸಿ ರಿಪು ಸಾ ಮಜದೊಡನೆ ಸಹಸ್ರಬಾಹುವಂ ಸೆ ಅತಿಗೆಯ೦ || ೧೮೧ || ಅಂತಾತನಂ ಸೆಜಿಗೆಯು ನಿಜ ವಿಜಯಶಿಬಿರಕ್ಕೆ ತರ್ಪುದುಮಲ್ಲಿಗಾತನ ತಂದೆವಿರಪ್ಪ ಶತಬಾಹುಗಳೆಂಬ ಜ೦ಘ ಚಾರಣ ಧರವಾತ್ಸಲ್ಯದಿಂ ಬರ್ಪುದುಂ ದಶಮುಖನಿದಿರೆಟ್ಟು ಭಕ್ತಿಭರದಿಂ ವಂದಿಸಿ ಮಣಿಮಯಾಸನದೊಳಿರಿಸಿ ಕೈಗಳಂ ಮುಗಿದು ಬೆಸನಾವುದೆಂಬುದುಂ ನೀ೦ ಸೆಜತಗೆಯ ಸಮಗ್ರಷ್ಟಿಯಪ್ಪ ಸಹಸ್ರ ಬಾಹುವಂ ಬಿಡುವುದೆನೆ ಮಹಾಪ್ರಸಾದವೆಂದಾತನಂ ಬರಿಸುವುದುಮಾತಂ ಬಂದು ದಿವ್ಯ ಮುನಿಗೆ ಪೊಡೆವಟ್ಟು ಕುಳ್ಳಿ ರ್ಪುದುಂ ಕರಗ್ರಹಣ ಪುರಸ್ಸರ೦ ವಿನಯ ವಚನಂ ಗಳಂ ನುಡಿದು ನಿನ್ನ ರಾಜ್ಯದೊಳ್ ನಿಲ್ವುದೆನೆ ನಾಂ ತಪೋರಾಜ್ಯಮನಲ್ಲದೆ ರಾಜ್ಯ ಮನೊಲ್ಲೆನೆಂದು ಕಂ| ನಿಜಸುತನಪ್ಪ ಸುಬಾಹುಗೆ ನಿಜರಾಜ್ಯಮನಿತ್ತು ದೀಕ್ಷೆಯಂ ಕೈಕೊಂಡಂ 1 ನಿಜ ಜನಕರಪ್ಪ ಶತಬಾ ಹು ಜಂಘಚಾರಣರ ಕೈಯೊಳಾ ಧರಣೀಶಂ || ೧೮೨ ||
ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೯೪
ಗೋಚರ