ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

24

ಪ೦ಪ ರಾಮಾಯಣದ ಕಥೆ

ಇತ್ತ, ರಾವಣನು ಖರದೂಷಣರು ಹೇಳಿ ಕಳುಹಿಸಿದ ಸುದ್ದಿಯನ್ನು ಕೇಳಿ, ಶಂಭುಕನ ಸಾವಿಗೆ ವ್ಯಸನಪಟ್ಟು ಕಿಡಿಕಿಡಿಯಾಗಿ, ಶಂಭುಕನನ್ನು ಕೊಂದ ವನನ್ನು ಕೂಡಲೆ ಸಂಹರಿಸುವೆನೆಂದು ವಿಮಾನಾರೂಢನಾಗಿ ದಂಡಕಾರಣ್ಯಕ್ಕೆ ಬಂದು ಬಲಭದ್ರನ ಪಕ್ಕದಲ್ಲಿದ್ದ ಸೀತಾದೇವಿಯನ್ನು ಕಂಡು ಮೋಹಪರವಶನಾಗಿ, ತನ್ನ ಯಶಸ್ಸು ಮಲಿನವಾಗುವುದೆಂಬ ಲಕ್ಷವೂ ಇಲ್ಲದೆ, ಸೀತೆಯನ್ನು ಮೋಸದಿಂದ ಕೊಂಡು ಹೋಗಬೇಕೆಂದಾಲೋಚಿಸಿ ತನ್ನ ಅವಲೋಕಿನೀ ವಿದ್ಯೆಯನ್ನು ಸ್ಮರಿಸಲು, ದೇವತೆಯು ಕೂಡಲೆ ಪ್ರತ್ಯಕ್ಷವಾಗಿ ಅಪ್ಪಣೆಯೇನೆಂದು ಕೇಳಿದಳು. ಅದಕ್ಕೆ ಅವರಾರೆಂದು ಕೇಳಿ ಅವರ ವಿಷಯವನ್ನರಿತು ಸೀತೆಯನ್ನು ರಾಮನಿಂದ ಆಗ ಲಿಸುವ ಉಪಾಯವೇನೆಂದು ಕೇಳಲು, ದೇವತೆಯು ಭಯಪಟ್ಟು ಕಾರಣ ಪುರುಷ ರಾದ ಈ ಮಹಾತ್ಮರಲ್ಲಿ ವಿರೋಧ ಮಾಡುವುದು ಸರಿಯಲ್ಲವೆಂದೂ ಸಕಲ ಲೋಕದ ಅಧರ್ಮನಿರತರನ್ನು ದಂಡಿಸುವ ತಾನು ಇಂತಹ ಕೆಲಸಕ್ಕೆ ನುಗ್ಗುವುದು ತಕ್ಕದ್ದಲ್ಲವೆಂದೂ ಹದಿನಾಲ್ಕು ಸಾವಿರ ಮುಖ್ಯ ನಾಯಕರೊಡನೆಯ ಅಸಂಖ್ಯಾತ ಬಲದಿಂದಲೂ ಬಂದಿರುವ ಖರದೂಷಣರನ್ನು ಲಕ್ಷ್ಯಮಾಡದೆ ಲಕ್ಷಣನು ಕಾದು ತಿರುವಲ್ಲಿ ರಾಮನು ವಿನೋದದಿ೦ದಿರುವನೆಂದೂ ಅಂಥವರಲ್ಲಿ ದ್ವೇಷ ಮಾಡುವುದು ತಪ್ಪೆಂದೂ ನುಡಿಯಲು ರಾವಣನು ಬಹಳ ಕೋಪಗೊಂಡು “ ನಾನೊ೦ದನ್ನು ಕೇಳಿದರೆ ನೀನೊಂದನ್ನು ಏಕೆ ಹೇಳುವೆ ? ಹುಚ್ಚಳೆ! ಮನುಷ್ಯ ಮಾತ್ರದವರು ಲಂಕಾ ಪತಿಯ ಎದುರಿಗೆ ನಿಲ್ಲುವರೆ ? ” ಎಂದು ಗರ್ಜಿಸಿ ಹೇಳಿದನು. ಅದಕ್ಕೆ ದೇವತೆಯು ಸಿಟ್ಟಾಗಿ, ಸೀತೆಯನ್ನು ಕದ್ದುಕೊಂಡು ಹೋದರೆ ದಶರಥನ ಮಕ್ಕ ಳಿಂದ ಇವನಿಗೆ ಸಾವು ಉಂಟಾಗಬೇಕೆಂದು ಪುರಾಕೃತ ಕರ್ಮವಿರುವುದನ್ನು ತಪ್ಪಿಸುವುದು ಸಾಧ್ಯವಲ್ಲವೆಂದು ತಿಳಿದು, ಶತ್ರು ಬಲವನ್ನು ಗೆಲ್ಲಲು ಕಷ್ಟವಾದರೆ ಸಿಂಹನಾದವನ್ನು ಮಾಡುವೆನೆಂದೂ, ಆಗ ತನಗೆ ಬೆಂಬಲವಾಗಿ ಬರುವುದೆಂದೂ ವಾಸುದೇವನು ಬಲದೇವನಿಗೆ ಹೇಳಿ ಬಂದಿರುವ ವಿಷಯವನ್ನು ದೇವತೆಯು ರಾವಣ ನಿಗೆ ತಿಳಿಸಿದಳು. ಆಗ, ರಣಭೂಮಿಗೆ ಹೋಗಿ ಲಕ್ಷ್ಮಣನಿಗೆ ತಿಳಿಯದಂತೆ ಸಿಂಹ ನಾದವನ್ನು ಮಾಡೆಂದು ರಾವಣನು ದೇವತೆಗೆ ಒಯಸಿಸಲು, ದೇವತೆಯು ಹಾಗೆಯೇ ಮಾಡಿದಳು. ರಾಮನು ಅದನ್ನು ಕೇಳಿ ಲಕ್ಷ್ಮಣನಿಗೆ ಯುದ್ದವು ವಿಷಮವಾಗಿರಬಹುದೇ ಎಂಬ ವಿಸ್ಮಯದಿಂದ ಜಾನಕಿಗೆ ಜಟಾಯುವನ್ನು ಕಾವ ಲಿಟ್ಟು ರಣರಂಗಕ್ಕೆ ತೆರಳಿದನು.
ಇತ್ತ, ರಾವಣನು ಕೂಡಲೆ ಅ೦ತರಿಕ್ಷದಿ೦ದ ಸೀತೆಯಿರುವ ಸ್ಥಳಕ್ಕಿಳಿದು ಆಕೆಯನ್ನು ಹಿಡಿದು ತನ್ನ ವಿಮಾನದಲ್ಲಿಟ್ಟು ಕೊಂಡು ಹೊರಡುತ್ತಿರುವಲ್ಲಿ ಕಾವ ಲಿದ್ದ ಜಟಾಯುವು ರೌದ್ರಾಕಾರನಾಗಿ ರಾವಣನ ಮೇಲೆ ಯುದ ಕೈ ಬರಲು, ರಾವಣನು ನಸುನಕ್ಕು ಅವನನ್ನು ಕೈಯಿಂದ ಹೊಡೆಯಲು ಜಟಾಯುವಿನ ರೆಕ್ಕೆಗಳೆರಡೂ ಮುರಿದು ಅವನು ಕೆಳಕ್ಕೆ ಬಿದ್ದು ಸೀತಾಪಹರಣಕ್ಕಾಗಿ ಬಹಳ