೩೧೪ ರಾಮಚಂದ್ರ ಚರಿತಪುರಾಣಂ ಅಂತು ಹನುಮನನುವರದೊಳಾ೦ತ ಬಲಮಂ ಕೃತಾಂತನಂತೆ ತನಿಸಿ ರಾಜೀವ ಪುಂಡರೀಕ ಪ್ರಮುಖ ನಿಜಕುಮಾರರ್ ನೂರ್ವರುಮಂ ಪಿಡಿದು ಕಟ್ಟುವು ದುಂ ವರುಣಂ ಕ೦ಡತಿ ಕುಪಿತನಾಗಿ ಕ೦ !! ನೆನೆಯದೆ ಕಲುಷವಶಂ ನ ಚಿನ ವಿದೆಗಳಂ ಕಡಂಗಿ ಕಾದುವ ಪದದೊಳ್ || ದನುಜೇ೦ದ್ರಂ ಪಿಡಿದಂ ನರು ಣನನಾನಂ ರಾವಣಂಗೆ ಕೂರ್ಪ೦ ತೋರ್ಪ೦ || ೧೯ || ಅ೦ತಾತನಂ ಪಿಡಿದು ಕುಂಭಕರ್ಣ೦ಗೆ ಸೆಳೆಯನೊಪ್ಪಿಸಿ ಭುವನೋನ್ಮಾದ ಮೆ೦ಬುದ್ಯಾನವನದೊಳ್ ಬೀಡಂಬಿಟ್ರೋಲಗಂಗೊಟ್ಟ ರ್ದು ವರುಣನಂ ಬರಿಸಿ ಕಂ || ಕಲಿ ಸಾವಂ ಪಿಡಿವಡೆವಂ ಕಲಹದೊಳಿದು ಭಂಗಮಲ್ಲು ನೀ೦ ಮುನ್ನಿನವೋ೮ | ನೆಲಸಿರ್ಪುದು ನಿಜರಾಜ್ಯದೊ ಛಲವಿಂದೆಂದೊಸೆದು ವರುಣನಂ ಮನ್ನಿಸಿದಂ !! ೨೨೦ || ಅ೦ತು ಮನ್ನಿಸಿ ಕರಗ್ರಹಣಂಗೆಯು ಕಾರುಣ್ಯವನಜ ಪುವುದುಂ ವರುಣಂ ಹನುಮನ ಸೆರಗಿಲ್ಲದ ಬಲ್ಲಾಳ್ತನಮಂ ಪೊಗಟು ಸತ್ಯವತಿ ಯೆ೦ಬ ತನ್ನ ಮಗಳಂ ರಾವಣಂಗೆ ಮಹಾವಿಭವದಿನಿತ್ತು ತನ್ನ ಪೊಅಲ್ವೆ ಪೋದನಿತ್ತ ರಾವಣ ಲಂಕೆಗೆ ವಂದು ಚಂದ್ರನಖಿಯ ಮಗಳ ಪ್ರಸಂಗ ಪುಷ್ಪ ಯಂ ಶ್ರೀಶೈಲಂಗೆ ಪರಿಣಯನೋತ್ಸ ವದಿನಿತ್ತು ಕರ್ಣಕುಂಡಲ ಪುರನನಾತಂಗೆ ರಾಜ್ಯಾಭಿಷೇಕಂಗೆಯು ಕುಡುವುದು ಮಲ್ಲಿಯೆ ಸಹಸ್ರಾಂತಃಪುರ ಪುರಂದ್ರಿಯರ್ಗೆ ವಲ್ಲಭನಾಗಿ ಸುಗ್ರೀವಂಗಂ ಸುತಾರೆ ಗಂ ಪುಟ್ಟಿದ ಪದ್ಮರಾಗೆಯಂ ಮದುವೆ೦ದು ಸುಖದಿಸಿರ್ದನಿತ್ತಲ್.... ಕ೦ | ಭರತ ಖಂಡಮಂ ದಶ ತಿರನಾಳಂ ಚಕ್ರರತ್ನಮಸಿರತ್ನಂಗಿ | ದೊರೆಕೊಂಡುವಖಿಳ ವಿದ್ಯಾ ಧರ ವಲ್ಲಭರೆಲ್ಲರುಂ ಸದಾನತರಾದರ್ || ೨೨೧ || ಶಾ || ಆ ಧೋದ್ದ ತನಪ್ಪ ರಾವಣನೊಭಾವಂ ಕಾದುವಂ ಯುದ್ದದೊಳ್ | ಶಕ್ರಂಗಂ ತ್ರಿಜಗದ್ವಿಭೂಷಣ ಗಜಂ ಕೊಂದಿಕ್ಕಲೇಂ ಸಾಲದೇ || ಚಕ್ರಕ್ಕಂ ಪರಚಕ್ರವುಂಟೆ ಸಕಲೋರ್ನಿಚಕ್ರದೊಳಗೆ ವಿದ್ವಿಷ | ಚಕ್ರಂ ತೋರ್ಕುಮೆ ಚಂದ್ರಹಾಸದಿದಿರೊ ಮಾಜಾಂತು ವಿಕ್ರಾಂತಮಂ 1 ೨೨೨ |
ಪುಟ:ರಾಮಚಂದ್ರ ಚರಿತ ಪುರಾಣಂ.djvu/೪೦೪
ಗೋಚರ