ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ರಾಮಚಂದ್ರ ಚರಿತಪುರಾಣಂ || ೬೩ || ಅದಂ ಪ್ರಭಾಮಂಡಲಂ ಬಾರಿಸಿ ರಘುವೀರನ ಬೆಸನಿಲ್ಲದೆಮಗೆ ನಿಮ್ಮ ನುಯ್ದು ದುಚಿತಮಲ್ಕು ನಿಮಗೆ ಲಂಕ ದೂರಮಪ್ಪುದಂ ಬೇಗಂ ಬರಲ್ಯಾರದೆನೆ ಭರತನಿನ್ನೆಮಗೆ ಕಜ್ಜ ಮಾವುದೆನೆ ಗಂಧೋದಕಮಂ ತರಿಸಿ ಕೊಟ್ಟೋಡದನುಯ್ದು ಲಕ್ಷ್ಮಣನ ಶಸ್ತ್ರ ಪೀಡೆಯಂ ಕಳೆವಮ್ನೆ ಭರತನಿಂತೆಂದಂ ಕಂ || ಸುರಭಿ ಜಲದಿಂದನಾ ತರುಣಿಯನೊಡಗೊಂಡು ಪೋಪುದಾಕೆಗೆ ಲಕ್ಷ್ಮಿ || ಧರನೆ ವರನೆಂಬುದಂ ಶುಭ ಚರಿತ‌ ಮುನ್ನೆನಗೆ ದಿವ್ಯಮುನಿಪರ್ ಪೇರ್ 1 ಎಂತುಂ ಸ್ತ್ರೀರತ್ನಕ್ಕಾ ತಂ ತಕ್ಕಂ ಮಿಕ್ಕ'ರನಧಿಕಾರಿಗಳಿಂದ | ತ್ಯಂತ ಹಿತರಂ ಪ್ರಧಾನರ ನಂತವರೊಡಗೂಡಿ ಕೂಸನೆರೆದಟ್ಟು ವುದುಂ | ೬೪ | ಮನ್ನಿಸಿ ಭರತನ ಮಾತಂ ತನ್ನ ತನೂಭನೆ ವಿಶಲ್ಯ ಸೌಂದರಿವೆರಸಿ || ಇನ್ನೂರ್ವರ್ ಕನ್ನೆಯರಂ ಚೆನ್ನೆಯರಂ ದ್ರೋಣಮೇಘನತ್ಯುತ್ಸವದಿಂ 11 ೬೫ 11, ಆ ಕನ್ಯಾರತ್ನಂಗಳಂ ಪ್ರಭಾಮಂಡಲಂ ವಿಮಾನಾರೂಢಯರ್ಮಾಡಿ ನಕ್ಷತ್ರ ವೀಧಿಯಿಂ ಕ್ಷಣಮಾತ್ರದೊಳೆ ರಣಭೂಮಿಯ ನೆಯ್ದ ವಿಮಾನಂಗಳಿನವನೀತ ಕವತರಿಸಿ ಬರ್ಸಲ್ಲಿ ವಿಶಲ್ಯ ಸೌಂದರಿ ಲಕ್ಷ್ಮಣನನೆನಿತೆನಿತು ಸಾರೆ ವೋಕುಮನಿತ ನಿತು ಶಕ್ತಿ ಶಕ್ತಿಗೆಟ್ಟು ನ !! ಗಗನಾಭೋಗಮನಾವಗಂ ಬೆಳಗುತುಂ ಜ್ವಾಲಾ ಸಹಸ್ರ೦ಗಳಿ೦ || ದುಗುಳುತ್ತುಂ ಕಿಡಿಯಂ ಜನಾರ್ದನನ ವಕ್ಷೇಭಾಗಮಂ ಬಿಟ್ಟು ಮೇ || ಗೊಗೆವಾಗ ಪವನಾತ್ಮಜಂ ಪಿಡಿಯೆ ದಿವ್ಯಸ್ತ್ರೀಯ ರೂಪಾಗಿ ಕೈ ಮುಗಿದೆನ್ನಂ ಬಿಡಿ ಮೆಂದು ತಲ್ಲಳಿಸಿ ಶಂಕಾತಂಕಮಂ ತಾಳ್ಳಿದಳ್ || ೬ || ಅಂತು ನಡನಡುಗುತ್ತು ಮಾಂ ನಿಜೆಯೆಯೆಂಬ ಪ್ರಜ್ಞ ವಿದ್ಯೆಯಿಂ ಕಿ. ಯಳೆಂ ಬಾಲಿಭಟ್ಟಾರಕರ್ ಕಾರಣಮಾಗೆ ರಾವಣಂ ಕೈಲಾಸಮನೆ ಬಲಕ್ಕೆ ವೀಣೆಯಂ ಬಾಜಿಸಿ ಜಿನ ಗುಣಸ್ತವನಂಗಳಂ ಹರ್ಷಚಿತ್ತದಿಂ ಪಾಡುತ್ತು ಮಿರೆ ಧರಣೀಂದ್ರಂಗಾಸನ ಕ೦ಪಮಾಗೆ ಬಂದು 1. ಅ೦ತು೦ ಗ ಘ ; ಉ೦ತು. ಖ 2. ರಧಿಕರಾರ೦ದ೦ದ. ಚ