ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೬ ರಾಮಚಂದ್ರಚರಿತಪುರಾಣಂ ಅಂತು ಸುಖದಿನಿರ್ದೋ೦ದು ದಿವಸಂ ಭೂಷಣಂ ಶ್ರೀಧರ ಭಟ್ಟಾರಕರಂ ವಂದಿಸ ಲೆಂದು ಪೋಪ ದೇವರ್ಕಳನಾಕಾಶದೊಳ್ ಕಂಡು ಜಾತಿಸ್ಮರನಾಗಿ ಭಟ್ಟಾರಕರಂ* ಬಂದಿಸಲೆಂದು ಮಾಡದಿಂದಿಳಿದು ಬರುತ್ತುಂ ಸರ್ಪದಷ್ಟನಾಗಿ ಸತ್ತು ಮಹೇಂದ್ರ ಕಲ್ಪಕ್ಕೆ ಪೋಗಿ ಮಗುಟ್ಟು ಬಂದು ಪುಷ್ಕರ ದ್ವೀಪದ ಚಂದ್ರಾದಿತ್ಯ ಪುರಮನಾಳ್ವ ಪ್ರಕಾಶಯಶಂಗಮುದಿತೆಗಂ ಜಗದ್ಯುತಿವೆಸರ ಸುತನಾಗಿ ರಾಜ್ಯಂಗೆಯ್ಯುತ್ತು ೦ ಕಂ ಜಿನ ಗದಿತ ಮಾರ್ಗದಿಂ ಜಿನ ಮುನಿಗನ್ನಮನಿತ್ತು ದೇವ ಕುರು ಭೂತಲ ಸಂ | ಜನಿತಂ ತತ್ಸುಖದೊಳ್ ತ ಇನೆ ತಣಿದೀಶಾನ ಕಲ್ಪದೊಳ್ ಜನಿಯಿಸಿದಂ || ೪೩ || ಕಿಡದ 'ಪರಮಾತ್ಮ ಸುಖಮಂ ಕುಡುವ ಮಹಾಮಹಿಮೆವಡೆದ ಸಾಧು ಪದಂಗಳ | ಕಿಡುವ ಸುರಲೋಕ ಸುಖಮಂ ಕುಡುವುದದೇ ಗಹನವೆನಿಸಿ ಕಲ್ಪಜನಾದಂ || ೪೪ || ಅ೦ತೀಶಾನಕಲ್ಪದೊಳನಲ್ಲ ಸುಖಮನನುಭವಿಸಿ ಬಂದು ಜಂಬೂದ್ವೀಪದ ಪರವಿದೇಹದ ನಂದ್ಯಾವರ್ತ ಪುರನನಾಳ್ವ ಚಲನೆಂಬ ಚಕ್ರವರ್ತಿಗಮಾತನ ಮಹಾ ದೇವಿ ಬಾಲಹರಿಣಿಗಮಭಿರಾಮನೆಂಬ ಮಗನಾಗಿ ಕ೦ 11 ಅಜಿದಾತಂ ಸಂಸಾರದ ತೆಜನಂ ತೊಜಿರೆಯ ಬಗೆಯೆ ಬಲ್ಲಾಳನದಿಂ ತುಮಿಗೆ ಗಣೇಲ್ವೆ೦ಡಿರ್ ಸೆರೆವಿಡಿದ‌ ಸುತ್ತಿ ಮುತ್ತಿ ಮೂಸಾಸಿರ್ವರ್ || ೪೫ || ಅಂತು ತನ್ನಂ ತಮ್ಮಯ್ಯನಪ್ಪ ಚಕ್ರವರ್ತಿಯ ಬೆಸದಿಂ ಬಳಸಿಕೊಂಡಿರ್ದ ಕನ್ನೆಯರಂ ಪುಣೆಯಾಗೆ ಬಗೆದು 'ಕಂ || ಜಿನ ಧಮ್ಮದ ಪೆರ್ಮೆಯೆ ನಿಲೆ ಮನದೊಳ್ ಬಾಲೆಯರ್ಗೆ ಧರಮಂ ಪೇಳುತ್ತು೦ || ಮನೆಯೋಳ್ ಮುನಿಯವೊಲಿರ್ದ೦ ತನಗಳವಡೆ ಋಷಿ ಗುಣಂಗಳೆನಿತೊಳವನಿತುಂ || ೪ || 1. ಕುಲ, ಗ, 2, ಪವರ್ಗದ, ಗ, ಘ.