ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೮ ರಾಮಚಂದ್ರ ಚರಿತಪುರಾಣಂ ಮತ್ತಿತ್ತ ಮೃದುಮತಿಗಳುಗೋಗ್ರ ತಪಂಗೆಯ್ದ ತಿ ಕೃಪಿತ ಕಾಯರಾಲೋಕ ನಗರಕ್ಕೆ ಚರಿಗೆಗೆ ಪೋದೊಡಾ ಪೊಅಲನಾಳ್ವರಸಂ ಮೊದಲಾಗೆ ಪಲಬರುವಾ ಚಾರಣರೆಗೆ ರುಷಿಯರ್ ನಾಲ್ಕು ತಿ೦ಗಳೂರಂ ಕೈಯಿಕ್ಕಿ ನಿಂದರಿವರ ತಪದ ಪೆರ್ಮೆಗೆ ದೇವರ್ಕಳ್ ಪೂಜಿಸಿ ಪೋದರ್ ಗಡಮೆಂದು ಪೊಗದಲ್ಲಿ ತಮ್ಮಂ ಪೂಜಿಸಿ ಕೊಂಡಾಡೆ ಮಾಯೆಯಿಂ ಪೂಜಿಸಿದ ಪೂಜೆಗೆ ಮುಯ್ಯಾಂತು ಕಂ || ಅಬಿಪಿಲ್ಲದ ಜಿನ ಧರದೊ ೪೦ಪಿಂದಾಹಾರ ಕಾಂಕ್ಷೆಯಿಂ ಮಾಯೆಯ ಬೆ೦ || ಬಲಸಂದು ತಪಂಗೆಯೊಡ ಲುವಿನೊಳಭಿರಾಮನಿರ್ದ ದಿವಮಂ ಪೊಕ್ಕಂ || ೫೦ || ಅ೦ತು ಪುಗುವುದುಂ ಮೃದುಮತಿಯನಭಿರಾಮ ಚರಾಮರಂ ಕ೦ಡತಿ ಸ್ನೇಹಿತನಾಗಿ ಸುಖದಿನಿರ್ದು ಕಂ || ದಿನದಿ೦ ಪರಮಾಯುಷ್ಯಂ ತನೆ ಮಾಯಾತಸದ ಫಲದೆ ಮೃದುಮತಿ ಚರನಾ || ದಿವಿಜಂ ಕುಂಜರಗಿರಿ ಸಾ ನು ವನ ನಿಕುಂಜಕ್ಕೆ ಎಂದು ಕುಂಜರನಾದ || ೫ || ಅನಂತರಮಭಿರಾಮಚರಂ ಬ್ರಹೋತ್ತರ ಕಲ್ಪದಿಂ ಬಂದು ದಶರಥ ಮಹೀ ನಾಥಂಗಂ ಕೈಕಾಮಹಾದೇವಿಗಾ ಭರತನೆಂಬ ಮಗನಾದನೀತನಂ ತ್ರಿಜಗ ಮ್ಯೂಷಣ ಗಜ೦ ಕಂಡು ಜಾತಿಸ್ಮರಂ ಸಂಸಾರ ಭೀರುವಾದುದ೪೦ ಬ್ರತ೦ಗೊಂಡು ಸುಗತಿವುಗಲಿರ್ದುದೆಂದು | ೫೨ ೧ ಕಂ| ಆನೆಯ ಭರತನ ಭವ ಸಂ ತಾನಂಗಳನ ಆಸೆ ದೇಶಭೂಷಣ ದಿವ್ಯ || ಜ್ಞಾನಿಗಳಾಲಿಸಿ ವಿಸ್ಮಿತ ಮಾನಸರಾದರ್ ಬಲಾಚ್ಯುತ ಪ್ರಮುಖ ರ್ಕಳ್ ಆ ಸಮಯದೊಳ್ ಉ || ಹಸ್ತಿಯ ತನ್ನ ಮುನ್ನಿನ ಭವಾವಳಿಯೆಲ್ಲಮನೆಯ್ದೆ ಪೇಆತಿ ಲೋ | ಕ ಸ್ತುತ ದೇಶಭೂಷಣ ಮಹಾಮುನಿಪುಂಗವರಾ ಜವಂಜವ || ತ್ರಸ್ತಮನಂ ತಪಶ್ಚರಣ ಲೋಭರತಂ ಭರತಂ ಭವಾಬ್ಬಿ ಯಂ | ದುಸ್ತರಮಂ ಸಮುತ್ತರಿಸಲುಷ್ಟುಕ ವೃತ್ತಿಯನುಂಟುಮಾಡಿದಂ || ೨೩ ||