ಪ೦ಚದಶಾಶ್ವಾಸಂ ೪೯ ಕಂ !! ಬಾರದ ಭವಮೊಂದಿತ್ತೆನೆ ನಾರಕ ತಿರಹ್ಮನುಷ್ಯ ಗತಿಯೊಳ್ ಬ೦ದೆ೦ || ಸಾರದೆ ಜಿನ ಚರಣಮನಿ ನಾರಾಧಿಸಿ ಪಡೆವೆನಮೃತ ಸುಖ ಸಂಪದಮಂ 1) ೫೪ || ಎಂದು ತಅಸ೦ದು ಭರತಂ ಸಹಸ್ರತ್ರಯ ರಾಜಪುತ್ರ ಸಹಿತಂ ತಪಸ್ಥ ನಾದಂ ಕೈಕೆಯುಂ ಮುನ್ನೂರ್ವರ್ ಸ್ತ್ರೀಯರ್ವೆರಸು ಪೋಗಿ ಸೃಥುಮತಿ ಗಂತಿಯರ ಪಕ್ಕದೆ ಸದ್ಯಕ್ಕೆ ಪೂರ್ವಕಂ ತಪಂಗೊಂಡಳಾ ತ್ರಿಜಗದ್ದೂಷಣ ಗಜಂ ಸಮ್ಯಕ್ಕೆ ಪೂರ್ವಕಮಣುವ್ರತಮನಲ್ಲಿಯೆ ಕೈಕೊಂಡು ಪಲವು ನೋ೦ಪಿಗಳಂ ನೋಂತು ಸಂನ್ಯಸನದಿಂ ಮುಡಿಪಿ ಬ್ರಹ್ಮರಕಲ್ಪಗತವಾಯ್ತು ಭರತಮುನಿಗಳುಂ ಚತು ರಂಗುಲ ಚಾರಣ ಋದ್ಧಿ ಪ್ರಾಪ್ತರಾಗಿ ವಿಹಾರಿಸಿ ಕೇವಲಜ್ಞಾನ ಪ್ರಾಪ್ತರಾಗಿ ಮೋಕ್ಷಕ್ಕೆ ಪೋದರಿತ್ತಲ್ ಸಿದ್ದಾರ್ಥನುಂ ರತಿವರ್ಧನನುಂ ಮೊದಲಾಗೆ ಭರತನೊಡನೆ ತಪ೦ ಗೊಂಡ ಮೂಸಾಸಿರ್ವರುಂ ತಂತಮಗೆ ತಕ್ಕ ಸ್ಥಾನದೊಳ್ ಪುಟ್ಟ ಸುಖದಿನಿರ್ಪುದು ಮಿತ್ತ ಕೈಕಾಗಣಿನಿಯರುಮನಶನದೆ ತಪದೊಳ್ ನೆಗಟ್ಟು ಜೀವಿತಾಂತ್ಯದೊಳ್ ಸೌಧ ಕಲ್ಪದೊಳ್ ಪುಟ್ಟದರ್-- ಕ೦ ! ಪರಿಪಾಲಿಸಿ ಧರೆಯಂ ಖೇ ಚರ ಭೂಚರ ಭೂಪರಾಳ್ವೆ ಸಂ ಗೆ ನಿರ೦ || ತರ ಸುಖದಿತ್ತಲಮರೇ ಶ್ವರ ವಿಭವಂ ಬಡೆದು ರಾಮಲಕ್ಷ್ಮಣರಿರ್ದರ್ | ೫೫ ) ಅಂತು ಸುಖದಿನಿರ್ದೊ೦ದು ದಿವಸಂ ರಾಘವಂ ಶತ್ರುಘ್ನಂಗೆ ಸಾಕೇತ ಪುರಾ ರ್ಧಮನಕ್ಕೆ ಪೌದನಪುರಾರ್ಧಮನಕ್ಕೆ ಪುಂಡರೀಕಿಣೀಪುರಮನಕ್ಕೆ ರಾಜಗೃಹಪುರ ಮನಕ್ಕೆ ನಿನ್ನ ಮೆಚ್ಚಿದುದಂ ಬೇಡಿಕೊಳ್ಳೆ೦ಬುದುಮಿದಾವುದುಮನೊಲ್ಲೆನುತ್ತರ ಮಧುರೆಯಂ ದಯೆಗೆಯ್ಕೆ ಮೆಂದು ಬಿನ್ನವಿಸೆ ರಾಮದೇವರೆಂದರುತ್ತರಮಧುರೆಯ ನಾಳ್ವ ಮಧುವಿಂಗಮರೇಂದ್ರನಿತ್ತ ಶೂಲಾಯುಧಂ ಮಜವಕ್ಕದ ಮೇಲೆ ಬಿಟ್ಟಿಕ್ಕಿ ದೊಡೆ ಸಾಸಿರ್ವರಂ ಕೊಂದು ಮಗು೦ತಿ ಕೈಗೆನರ್ಪುದದಲ್ಲದೆಯುಮಾತನ ತನೂ ಭವಂ ಲವಣಾರ್ಣವನೆಂಬವಂ ರಾವಣನಳಿಯನನನನಾರುಂ ಗೆಲಲ್ ಬಾರದು ನೀ ನಾಪೋಲಿಯೊಳೆಂತಿರ್ದಪೆಯೆನೆ ಶತ್ರುಘ್ನನಾಗ್ರಹದಿನದನೆ ಬೇಡಿಕೊಳ್ಳು ದುಂ ಲಕ್ಷ್ಮಿ ಧರಂ ತನ್ನ ವಜ್ರಕವಚಮುಮಂ ಸಾಗರಾವರ್ತ ಶರಾಸನಮುಮನ ಮುಖ ಶಿಲೀಮುಖಮುಮಂ ಕೊಟ್ಟು ಕ೦೨ ಪುವುದುಂ ಮಹಾಬಲ ಸಮೇತನಾಗಿ ಪುಣ್ಯ ಭಾಗೆಯೆಂಬ ತೋಜನೆಯನೆಲ್ಲೂ ತನ್ನದೀತೀರದೊಳ್ ಬೀಡಂ ಬಿಟ್ಟಿರ್ಪುದುಂ ಗುಪ್ತ ಚರನೊರ್ವನತಿ ತ್ವರಿತಗತಿಯಿಂ ಬಂದು ದೂರಾವನತ ಮಸ್ತಕಂ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫೯
ಗೋಚರ