ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೂಪಶಾಶ್ವಾಸಂ ೪೮೩ ನಿಮಗುಸಿರಲ್ ತಕ್ಕುದಲೆ೦ದು ಕರಂ ಪ್ರಾರ್ಥಿಸಿ ದೇವರೆನಗೆ ಕಾರುಣ್ಯ೦ಗೆಯೊಡಿ ದೊಂದಂ ಕ್ಷಮಿಯಿಸುವುದೆಂದೊಡೆಮಾಕ್ಷೆಯಂ ಮಾಜಿದಿರಿನ್ನು ಮಿದರ್ಕೆ ನೀನೇನು ಮಂ ನುಡಿಯದಿರೆಂದು ಲಕ್ಷ್ಮಣನಂ ಮಾರ್ನುಡಿಯದಂತು ಮಾಡಿ ಜನಪದದ ಪಬಿಗೇವಯಿಸಿ ನೀವಾ ಪರಮೇಶ್ವರಿಯ ಗರ್ಭದೊಳಿರ್ದ೦ದು ತೋಜಿದು ಕೃತಾಂತ ವಕ್ತನೆಂಬ ತನ್ನ ಪಡೆವಳನಂ ಕರೆದು ಪೋಗಿ ಅರಣ್ಯದೊಳೀಡಾಡಿ ಬಾಯೆಂದು ಸೇದುಮಾತಂ ತಂದೀಡಾಡಿ ಪೋಪುದುಂ ವಜ್ರಜಂಘ೦ ಕಂಡನುಬಂಧ ಸ್ನೇಹ ದಿಂದೊಡಗೊಂಡು ಬಂದು ಸೀತಾದೇವಿಗೆ ಬೆಸಕೆಯುತಿರ್ಪುದುಂ ನೀಮುಂ ಪುಟ್ಟದಿ ರೆಂಬುದನರಿದು ಬಂದೆವಾವದುಕಾರಣದಿನವರ್ ನಿಮ್ಮ ತಂದೆವಿರಪ್ಪುದಂದವರ ಪರಾಕ್ರಮ ಸೌಂದರಮಂ ಪೋಲ್ಡರಾಗಿಮೆಂದು ಪರಸಿದೆವೆಂಬುದುಮದಂ ಕೇಳು ಕದನಕೇಳಿ ನಿರಂಕುಶನಂಕುಶನಿಂತೆಂದಂ ಕಂ || ತಕ್ಕರ ಮಾತಂ ಕೇಳದೆ ತಕ್ಕೂರ್ಮೆಯನುಟಿದು ತೊರೆದು ಗುಣವತಿಯಂ ಪಾ | ಪಕ್ಕಂಜದ ಜಡ ಮತಿಯಂ ತಕ್ಕುದೆ ಪೊಗಳಿ ರಾಮನಂ ನಿರ್ಗುಣನಂ || ೮ || ಎಂದಯೋಧ್ಯಾನಗರವಿಲ್ಲಿಗೆನಿತುಂಟೆಂಬುದುಂ ನಾರದಂ ನೂರಯ್ಯತ್ತು ಯೋಜನ ಮೆನೆ ಕೇಳ್ತಾ ಕಣದೊಳೆ ಸಮಸ್ತ ಬಲ೦ಬೆರಸೆ ನಡೆದು ಕತಿಪಯ ದಿನ ಕೈಯೋಧ್ಯೆಯನೆ 'ಹಸ್ಯತ್ವ ರಥ ಪದಾತಿ ಬಲಮನೊಡ್ಡಿ ಲವಾಂಕುಶರ್ ಸಿಂಧುರಾ ರೂಢರಾಗಿ ಬಹಿಃಪುರದೊಳ್ ಬೀಡಂ ಬಿಡುವುದುಮಿ, ಸಿದ್ದಾರ್ಥ ಕ್ಷುಲ್ಲಕ ನಾರದಂ ಪ್ರಭಾಮಂಡಲನಲ್ಲಿಗೆ ಪೋಗಿ ಲವಾ೦ಕುಶರ ತೆಅನನೆಲ್ಲಮನ ಪುವುದುಮಾತಂ ವ್ಯಾಕುಲ ಚಿತ್ತನಾಗಿ ಜನಕ ವಿದೇಹಿಗಳ್ವೆರಸು ಪುಂಡರೀಕಿಣೀಪುರಕ್ಕೆ ವರ್ಪುದುಂ ಸೀತಾದೇವಿ ಕಂಡಿದಿರೆಟ್ಟು ತಂದೆಗಂ ತಾಯ್ದ ಮಣ್ಣಂಗಮೆಜಿಗಿ ಪೊಡೆವಟ್ಟು ಮನ್ಯುಮಿಕ್ಕು ದುಃಖಂಗೆಯಿ೦ಬಲಿಯಂ ಪ್ರಭಾಮಂಡಲಂ ರಾಮಲಕ್ಷ್ಮಣರ ದೆಸೆಯಿಂ ಕೂಸುಗಳೆ ಪ್ರಮಾದವಕ್ಕುಮದ ಅ೦ದಯೋಧ್ಯೆಗೆ ಪೋಪಂ ಬಿಜಯಂ ಗೆಲ್ಯೂಮೆಂದು ಸೀತಾದೇವಿಯಂ ಲವಾ೦ಕುಶರರಸಿಯರಂ ತನ್ನ ವಿಮಾನವ 1, ಬೀಡಂಬಿಟ್ಟು ರಾಮಲಕ್ಷ್ಮಣರಲ್ಲಿಗೆ ದೂತರನಟ್ಟ ಸಮಸ್ತ ನಾಡ ಬೀಡುವನೊಪ್ಪಿಸಿ ಪೋಪು ದಲ್ಲದೊಡೆ ಬಂದು ಕಾಣ್ಣುದೆಂದು ನುಡಿಯಿವೆಂಬುದುವಾ ದೂತರ್ ಬಂದು ರಾಮಲಕ್ಷ್ಮಣರ ಕಂಡು ತತ್ಕಾಂತಮಂ ಬಿನ್ನ ವಿಸೆ ರಾಮಲಕ್ಷ್ಮಣರಾಕ್ಷೇಪಿಸಿ ಪರ ಚಕ್ರಮನೆ ಆಗಿಸುವನಲ್ಲದಾಗುವುದೆಂಬ ಮಾತಂ ನುಡಿವ ನಿಮ್ಮ ದುರ್ವೃತ್ರಿಕಯೊ ಮಣೆ ನಿಮ್ಮಾಳ್ವರ ಪ್ರಾಪ್ತಿಯೊ ಪೇಟಿ ಮೆ೦ದು ಬ೦ದ ದೂತರ ಪರಿಭವಿಸಿ ಕಳೆವುದುಮವರ್‌ ಬಂದು ಅವಾಂಕುಶರ್ಗೆ ಬಿನ್ನಪಂಗೆಯ್ಯ ಕದನ ಕರ್ಕಶರ್ ಹಸ್ಯತ್ವ ರಥ ಪದಾತಿ ಬಲಮನೊಡ್ಡಿ ಲವಕುಶರ್ ಸಿ೦ಧುರಾರೂಢರಾಗಿ ಬಹಿಃಪುರದೊಳ್ ನಿಲ್ಲುದು; ಎಂದು ಕ ಖ ಗ ಘ ಪುಸ್ತಕಗಳಲ್ಲಿದೆ.