ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷಡಶಾಶ್ವಾಸಂ ೪೧ ಈ ಭರತದ ಯಕ್ಷಪುರದ ನಯದತ್ತನೆಂಬ ಪರದಂಗವಾತನ ಪರದಿತಿ ಸುನಂದೆಗಂ ಪ್ರಥಮ ಜನ್ಮದೊಳ್ ಧನದತ್ತನೆಂಬ ತನೂಜನಾಗಿ ಜಿನಧರ್ಮಮಂ ಬಿಡದೆ ನಡೆದು ಜೀವಿತಾವಧಿಯೊಳ್ ಸೌಧರಕಲ್ಪ ಗತನಾಗಿ ತದಾಯುರವಸಾನ ದೊಳ್ ಶ್ರಾವಸ್ತಿ ಪುರದ ಪರದಂ ಸಮ್ಯಕ್ಷ್ಯಷ್ಟಿ ಮೇರುವೆಂಬಂಗಮಾತನ ಪರದಿತಿ ಧಾರಿಣಿಗಂ ಪದ್ಮರುಚಿವೆಸರ ಮಗನಾಗಿ ಜಿನಮಾರ್ಗದೊಳಗೆ ನಡೆದು ಕಡೆಯೊ ಈಶಾನಕಲ್ಪದೊಳ್ ಪುಟ್ಟ ತದಾಯುರಬ್ಬಿಯಂ ತವೆ ಸೀರ್ದಲ್ಲಿಂ ಬಂದವರ ವಿದೇಹದ ವಿಜಯಾರ್ಧ ನಗದ ನಂದ್ಯಾವರ್ತಪುರಮನಾಳ್ವ ನಂದೀಶ್ವರನೆಂಬ ವಿದ್ಯಾಧರಂಗಮಾತನರಸಿ ಕನಕಾಭಗಂ ನಯನಾನ೦ದನೆಂಬ ನಂದನನಾಗಿ ವಿದ್ಯಾಧರರಾಜ್ಯ ಸುಖಮನನುಭವಿಸಿ ಭೋಗ ನಿರ್ವಗದಿಂ ತಪಸ್ಸನಾಗಿ ಪಲ ಕಾಲಂ ತಪಂಗೆಯ್ದು ಸಮಾಧಿಯಂ ಮುಡಿಸಿ ಮಾಹೇಂದ್ರ ಕಲ್ಪಕ್ಕೆ ಪೋಗಿ ಸುರ ಲೋಕ ಸುಖಮನನುಭವಿಸಿ ತದನಂತರದಲ್ಲಿ ಬಂದು ಪೂರ್ವ ವಿದೇಹದ ಕ್ಷೇಮ ಪುರಮನಾಳ್ಯ ವಿಮಲವಾಹನ ಮಹೀಭುಜಂಗಮಾತನಂತಃಪುರ ಪ್ರಧಾನ ಪದ್ಯಾ ವತಿಗಂ 'ಶ್ರೀಚಂದ್ರನೆಂಬ ಕುಮಾರನಾಗಿ ರಾಜ್ಯದೊಳ್ ನಿ೦ದು ಬಹುಸಹಸ್ರ ಸಂವತ್ಸರಂ ರಾಜ್ಯಂಗೆಯ್ದು ಸಮಾಧಿಗುಪ್ತರೆಂಬಾಚಾರರ ಸಮಕ್ಷದೊಳ್ ದೀಕ್ಷೆ ಗೊಂಡು ಗೋಗ್ರ ತಪಂಗೆಯ್ದು ಬ್ರಹ್ಮಕಲ್ಪಕ್ಕೆ ಪೋಗಿ ಬಂದೀಗಲ್ ರಾಮದೇವನಾದ ನೆಂಬುದುಂ ಕಂ || ಬಲಭದ್ರರಾಮ ಜನ್ಮಾ ವಲಿಯಂ ತಿಳಿವಂತು ಪೇಟ್ಟು ಲಕ್ಷಣನ ಭವಾ | ವಲಿಯನಮೃತಾಬ್ಬಿ ವೀಚೀ ಕಲ ಸ್ವರಂ ನೆಗಟತೆ ಭುವನ ಗುರುವಿಂತೆಂದಂ 11 ೩೮ || ಮುನ್ನಂ ಪೇಟ್ಟಿ ಯಕ್ಷಪುರದ ನಯದತ್ತನೆಂಬ ಪರದಂಗೆ ವಸುದತ್ತನೆಂಬ ಮಗನಾಗಿ ಕಾಲಂಗೆಯು ಮೃಣಾಳಕುಂಡಲ ಪುರಮನಾಳ್ವ ವಿಜಯಸೇನ ಮಹೀ ನಾಥನ ಮಗಂ ಶಂಭುವೆಂಬಂಗೆ ಶ್ರೀಭೂತಿಯೆಂಬ ಪುರೋಹಿತನಾಗಿ ಸನ್ಮಾರ್ಗ ದೊಳ್ ನಡೆದು ನಿಜಸ್ವಾಮಿಯಪ್ಪ ಶಂಭುವಿನ ಕೈಯೊಳ್ ಕನ್ಯಾನಿಮಿತ್ತಂ ಸತ್ತು ದೇವಗತಿವಡೆದಲ್ಲಿಂ ಬ೦ದು ಪ್ರತಿಷ್ಠಾ ಪುರದೊಳ್ ಪುನರ್ವಸುವಸರ ವಿದ್ಯಾಧರನಾಗಿ ತಪಂಗೆಯ್ದು ದೇವಗತಿಯನಪ್ಪು ಕಯ್ಯಲ್ಲಿಂ ಬಂದೀಗಲ್ ಲಕ್ಷ್ಮಣನಾದನೆಂದು ಬೆಸಸಿ ಬಜಯಂ ರಾವಣನ ಭವಾವಳಿಯನಿಂತಂದು ಬೆಸಸಿದರಾ ಮೃಣಾಳಕುಂಡಲ ಪುರಮನಾಳ್ವ ವಿಜಯಸೇನಂಗಂ ರತ್ನಮಾಲೆಗಂ ಪುಟ್ಟ ಶಂಭುವೆಂಬ ದಾರಕನುಂ ಜಿನಧರ್ಮ ನಿರ್ಧಾರಕನುವಾಗಿ ಮದ್ಯ ಮಧು ಮಾಂಸ ಸೇವನೆಗೆಯ್ದು ನರಕ ತಿರ ಗಾದಿ ಗತಿಗಳೊಳ್ ಪಲಕಾಲಂ ತಿರಿತಂದೆತಾನುಂ ಪಾಪೋಪಶಮಮಪ್ಪುದುಂ 1, ಬಯ್ಯ, ಚ. 2. ಚ೦ದ್ರಾಭ. ಚ.