ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨ ರಾಮಚಂದ್ರಚರಿತಪುರಾಣಂ ಕುಶಧ್ವಜನೆಂಬ ಪಾರ್ವ೦ಗನಾತನ ಪಾರ್ವಿತಿಗಂ ಭಾಸಕುಂಡಲನೆಂಬ ಮಗನಾಗಿ ಚಿತ್ರಸೇನ ಮುನಿ ಸಮೀಪದೊಳ್ ಜಾತರೂಪ ಧರವಾಗಿ ನಿಷ್ಠೆಯಿಂ ನೆಗಡಿತ್ತು೦ ವಂದನಾನಿಮಿತ್ತಂ ಸಮ್ಮೇದ ಗಿರೀಂದ್ರದ ಜಿನೇಂದ್ರ ಭವನಂಗಕ್ಕೆ ಪೋಗುತ್ತು೦ ಕನಕನೆಂಬ ವಿದ್ಯಾಧರನ ವಿಭೂತಿಯಂ ಕಂಡು ವಿಸ್ಮಿತನಾಗಿ ಮದೀಯ ತಪಃಫಲದಿ ನೆನಗಲೂಾ ವಿಭೂತಿ ಸಮನಿಸುವುದಕ್ಕೆಂದು ನಿಧಾನ ಪೂರ್ವಕಂ ತಪಂಗೆಯು ಕಾಲ ಪ್ರಾಪ್ತನಾಗಿ ಸನತ್ಕುಮಾರ ಕಲ್ಪಕ್ಕೆ ಪೋಗಿ ಬಂದೀಗಲ್ ತ್ರಿಖಂಡ ಮಂಡಲಾಧಿ ಪತಿಯಪ್ಪ ರಾವಣನಾದಂ ಕಂ || ಎಂದಜಿಪಿ ದಶಾಸ್ಯನ ಭವ ಸಂದೋಹಮನಖಿಲ ಭುವನ ವಂದ್ಯಂ ಸೀತಾ | ಸುಂದರಿಯ ಭವಮನಆಪಲ್ ಮಂದರ ಧೈರಂ ಮುನೀಂದ್ರನಂದಿಂತೆಂದಂ | ೩೯ || ಈ ಭರತದ ಯಕ್ಷಪುರದ ಸಾಗರದತ್ತನೆಂಬ ಪರದಂಗನಾತನ ಸರದಿತಿ ರತ್ನ ಪ್ರಭೆಗಂ ಗುಣವತಿಯೆಂಬ ಮಗಳಾಗಿ ಮಿಥ್ಯಾ ಭಾವನೆಯಿಂ ಕಾಲಂಗೆಯ್ದೆ ನಿತಾನುಂ ಕಾಲಂ ತಿರಗತಿಯೊಳ್ ತಿರಿತಂದು ಕಡೆಯೊಳ್ ಸಿಡಿಯಾಗಿ ಪುಟ್ಟ ತೊಅಲುತ್ತು೦ ಗಂಗೆಯ ತಡಿಯೊಳೊರ್ಮೆ ತಣ್ಣೀರುಣಲ್ ಪೋಗಿ ಕೆಸರೊಳ್ ಬಿಟ್ಟು ಪೊಅಮಡ ಲಾಆದಿರ್ದ ಸಮಯದೊಳ್ ನಭೋಂಗಣದೊಳ್ ಪೋಗುತ್ತು೦ ತರಂಗತಮನೆಂಬ ವಿದ್ಯಾಧರಂ ಕಂಡು ಸವಿಾಪಕ್ಕೆ ಬಂದು ಪಂಚ 'ನಮಸ್ಕಾರಮಂ ಪೇಳ್ಳು ದುಮುಪ ಶನ ಚಿತ್ತದಿಂ ಸತ್ತು ಶ್ರೀಭೂತಿ ಪುರೋಹಿತ೦ಗನಾತನ ಭಾರೈ ಸರಸ್ವತಿಗಂ ವೇದ ವತಿಯೆಂಬ ಮಗಳಾಗಿ ತಮ್ಮ ಮನೆಗೆ ಚಾಮಾರ್ಗದಿಂ ಬ೦ದ ಋಷಿಯರಂ ದೂಷಿಸಿ ನುಡಿಯೆ ತಂದೆ ಬಾರಿಸಿ ಜಿನಧರ ಸ್ವರೂಪಮಂ ತಿಳಿಯ ಪೇಲೆ ಕೇಳು ಜೈನಮಾರ್ಗದಿಂ ನಡೆಯುತ್ತು ಮಿರಲಾಕೆಯಂ ಮೂರನೆಯ ಭವದೊಳ್ ರಾವಣ ನಾಗಿ ಪುಟ್ಟುವ ಶಂಭು ಕಂಡು ಕಣ್ಣಲ್ಲು ಬೇಡಿಯಟ್ಟುವುದು ಶ್ರೀಭೂತಿ ಮಿಥ್ಯಾ ದೃಷ್ಟಿಯೆಂದು ಕೂಸುಗುಡಲೊಲ್ಲದಿರೆ ಮುಳಿದಾತನಂ ಕೊಲಿಸಿ ಮಗುಟ್ಟು ಮಾ ಶಂಭುವಾಕೆಯಂ ಬೇಡುವುದು ಮೊಡಂಬಡದೆ ಜನಕ ಶೋಕ ವೇಗದಿನಾತಂಗೆ ಮಲು ಮೆಯ್ಯೋಳಾದೊಡಂ ವಿನಾಶ ಹೇತುವಾಗಿ ಜನಿಯಿಸುವೆನಕ್ಕೆಂದು ನಿಧಾನಪೂರ್ವಕಂ ತಪಂಗೆಯು ಕುಸಿದು 'ಬ್ರಹ್ಮಕಲ್ಪದೊಳ್ ಪುಟ್ಟಿ ಬಂದು ಚಿತ್ರೋತ್ಸವೆಯೆಂಬಳಾಗಿ ಪುಟ್ಟ ಕ್ರಮದಿಗಳ್ ಸೀತೆಯಾದಳೆಂದು ಬೆಸಸಿ ಪ್ರಭಾಮಂಡಲನ ಭವಾವಳಿಯ ನಿಂತೆಂದು ಬೆಸಸಿದ‌ ಗುಣವರ್ಮನೆಂಬ ಸರದನಾಗಿ ಕುಂಡಲ ಮಂಡಿತನಂ ಬರಸನಾಗಿ ಬಟಿಯಂ ಪ್ರಭಾಮಂಡಲನಾದಂ ವಸುದತ್ತನಾದಂದಿನ ಕೆಳೆಯನಪ್ಪ 1. ಬ್ರಹ್ಮಾರ, ೩