ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ರಾಮಚಂದ್ರಚರಿತಪುರಾಣಂ ಮ || ದಶ ದಿಂಡಲಮಂ ಪಳಂಚಲೆಯೆ ಬೇರೀನಿಸ್ವನಂ ರಾಜ ಲೋ | ಕ ಶಿರೋಭೂಷಣ ಪಂಚರತ್ನ ರುಚಿ ಲೇಖಾನೀಕದಿಂ ಶಕ್ರ ಚಾ !! ಸ ಶತಂಗಳ ನೆಲೆವೆರ್ಚೆ ಲಕ್ಷ್ಮಣ ಸಮೇತಂ ರಾಮದೇವಂ ಲಾಂ | ಕುಶ ವಕ್ತಾಂಬುಜ ದತ್ತ ದೃಷ್ಟಿ ಪುರಮಂ ಪೊಕ್ಕಂ ಮಹೋತ್ಸಾಹದಿಂ ೪೨|| ಅಂತಯೋಧ್ಯಾ ಪುರಮಂ ಪೊಕ್ಕು ಸುಖದಿಂ ಕೆಲವು ಕಾಲಮಿರ್ಪುದುಮುತ್ತ ಸೀತಾರ್ಯಿಕೆ ಪಲವುಕಾಲಂ ತಪಂಗೆಯು ಮೂವತ್ತಾಯ ದಿವಸಂ ಸಂನ್ಯಸನಮಂ ಕೈಕೊಂಡಚ್ಯುತ ಕಲ್ಪದೊಳ್ ಸ್ವಯಂಪ್ರಭನೆಂಬ ವ್ರತೀಂದ್ರನಾಗಿ ಪುಟ್ಟದಳ ಮತ್ತ ಮಿತ್ತ ಕಾಂಚನಪುರಮನಾಳ್ವ ಕಾಂಚನ ರಥಂಗಂ ವಿದ್ಯುನ್ಮಾಲೆಗಂ ಪುಟ್ಟಿದ ಮಂದಾ ಕಿನಿಯುಂ ಚ೦ದ್ರ ವಕ್ತಯುಮೆಂಬ ಕನ್ನೆಯರ್ ಸ್ವಯಂವರಕ್ಕೆ ನೆರೆದರಸುಮಕ್ಕ ಳೊಳೊಲ್ವರುಮಂ ಮೆಚ್ಚದೆ ಲವಂಗೆ ಮಂದಾಕಿನಿ ಮಾಲೆಯಂ ಸೋಡಿದಳ೦ಕುಶಂಗೆ ಚಂದ್ರವಕ್ಕೆ ಮಾಲೆಯಂ ಸೋಡಿದಳಾ ಸಭೆಯೊಳಿರ್ದ ಲಕ್ಷ್ಮಣನೆಣ್ಣ‌ ಕುಮಾರರು ಮದಂ ಕಂಡು ನಿರ್ವಗ ಪರಾಯಣರಾಗಿ ಮಹಾಬಲ ಭಟ್ಟಾರಕರ ಪಕ್ಕದೆ ದೀಕ್ಷೆಯಂ ಕೈಕೊ೦ಡರಿತ್ತ ವಿದ್ಯಾಧರ ರಾಜ್ಯ ಸುಖಮನೆನಿತಾನುಂ ಕಾಲಂ ಪ್ರಭಾಮಂಡಲ ನನುಭವಿಸಿ ಕರುಮಾಡದೇಲಿನೆಯ ನೆಲೆಯೊಳಿರ್ದಲ್ಲಿ ಸಿಡಿಲ್ ಪೊಡೆಯೆ ಸತ್ತು ದೇವ ಕರುವಿನೊಳ್ ಪುಟ್ಟಿ ದನಿತ್ತ ಹನುಮಂ ಕರ್ಣಕುಂಡಲಪುರದೊಳಗರಸು ಗೆಯ್ಯುತ್ತುಂ ಪಲಕಾಲಮಿರ್ದೊ೦ದು ದಿವಸಂ ಕೃಷ್ಣ ಪಕ್ಷದಿರುಳ್ ಮಣಿಮಾಡದೆ ಳಿರ್ದು ಗಗನ ತಲದಿಂ ಬೀರ್ಪುಮಂ ಕಂಡು ಸಂಸಾರಿಗಳ ಧನಮುಂ ಜೀವನ ಮುಂ ಚೌವನಮುಮಿಂತೆ ಕ್ಷಣದಿಂದಧ್ರುವಂಗಳೆಂದು ಬಗೆದು ನಿರ್ವರ ಪರನಾಗಿ 'ಸುಶ್ರುತನೆಂಬ ತನ್ನ ವಗಂಗೆ ರಾಜಮಂ ಕೊಟ್ಟು ವಿದ್ಯುದ್ಯುತಿ ಮೊದಲಾಗೇಜಾ ಅಯ್ಯದಿಂಬರ್ ವಿದ್ಯಾಧರ ವಲ್ಲಭರ್ವೆರಸು ಧಾಭರಣರೆಂಬ ಚಾರಣಋಷಿಯರ ಸಮಕ್ಷದೊಳಕ್ ದೀಕ್ಷೆಯಂ ಕೊಂಡಂ ಹನುಮನರಸಿಯರೆಲ್ಲಂ ಸುಮತಿ ಗಂತಿಯರ ಸಕ್ಕದೊಳ್ ತಪಸ್ಟ್ಯರಾದ‌ ಹನುಮಮುನಿ ಘಾತಿಯುಮನಘಾತಿಯುಮಂ ಕಿಡಿಸಿ ನಿರ್ವಾಣ ಪ್ರಾಪ್ತನಾದಂ ಕಂ|| ಇತ್ತ ಬಲದೇವನುಂ ಪುರು ಷೋತ್ತಮನುಮನೇಕ ವತ್ಸರರಾಜ್ಯ ಸುಖಾ !! ಯತ್ತ ಮುನರ್‌ ನಿರವಧಿ ಸಂ ಸತ್ತಿಗೆ ನೆಲೆಯೆನಿಸಿ ನಾಡೆ ನಲಿಯುತ್ತಿರ್ದರ್ || ೪೩ 1) ಅ೦ತಿ ರ್ಪುದುಮುತ್ತಲೂರ್ಮೆ ಸುರ ಪರಿಷನ್ಮಧ್ಯವರ್ತಿ ಸೌಧಕ್ಕೇ೦ದ್ರಂ ಧರ ನಿರೂಪಣ ಪ್ರವಣನಿಂತೆಂದಂ 1. ಸವ್ರತ. ಸ.