೫೦೨ ರಾಮಚಂದ್ರ ಚರಿತಪುರಾಣ ೦ ಕೇವಲಬೋಧಮೆಂಬ ಮಣಿ ದರ್ಪಣಮುಜ್ವಲಿಸಿತ್ತು ತೋರ್ಸಿನಂ | ಜೀವಮಜೀವವೆಂಬಖಿಲ ವಸ್ತುಗಳುಂ ಗುಣ ಸರಯಂಗಳುಂ || ೬೮ || ಅ೦ತು ರಾಮಸ್ವಾಮಿಯ ಕೇವಲಬೋಧೋದಯದೊಡನೆ ತನಗಾಸನ ಕಂಪನಪ್ಪುದುಮವಧಿ ಬೋಧದಿಂದ ಅದು – ಉ || ದುಂದುಭಿ ನಾದಮಾನರಿಸೆ ದಿಕ್ಕಟಮಂ ಚಲ ಕೇತನಂ ವಿಯ || ನಂದನ ಶಂಕೆಯಂ ಪಡೆಯ ರತ್ನ ವಿಮಾನ ವಿತಾನದಂಶು ಜಾ || ಲಂ ದಿವಿಜೇಂದ್ರ ಚಾಪದ ವಿಲಾಸಮನೇಳಿಸೆ ಕಣೆ ನಂದದೇಂ || ಬಂದುದೊ ರಾಮಕೇವಲಿಯ ಕೇವಲ ಪೂಜೆಗೆ ದೇವ ಸಂಕುಲಂ 1 ೬೯ || ಚ | ಭವನಾವಾಸದವರ್ ಪದಿಂಬರಮರೇಂದ್ರ ವ್ಯ೦ತರಾವಾಸ ಸಂ | ಭವರೆರ್ ಶಶಿ ಸೂರರಿರ್ವರುದರ್ ಸನ್ನಿರ್ವರಿಂದ್ರ ನಭೋ ! ವಿವರಂ ತಮ್ಮ ಬಲಕ್ಕೆ ಸಾಲದೆನೆ ಮಜುಂಲೋಕವೊಂದಾಗಿ ಬ | ರ್ಪವೊಲೀ೦ ಬಂದರೋ ಮಾ ಕೌತುಕದಿನಾ ಕೈವಲ್ಯ ಮಾಂಗಲ್ಯಮಂ||೭೦! ಅಂತು ಬಂದ ಚತುರ್ನಿಕಾಯ ದೇವನಿಕಾಯದೊಡನೆ ಸೀತೇಂದ್ರನುಂ ರಾಮು ಭಟ್ಟಾರಕರ್ಗೆ ಕೇವಲಜ್ಞಾನ ಪೂಜೆಯಂ ಮಾಡಿ ಪೊಡೆವಟ್ಟು ಲಕ್ಷ್ಮೀಧರಂಗೆ ಧರ ಮಂ ಪ್ರತಿ ಬೋಧಿಸಲೆಂದು ಶರ್ಕರಾಪ್ರಭೆಯೆಂಬ ನರಕಕ್ಕೆ ಪೋಗಿ ನೋಟ್ಸ್ನ ಮಲ್ಲಿ ತಮ್ಮೊಳೋರೊರ್ವರನನೇಕ ವಿಧದಿಂ ಪೀಡಿಸುತ್ತಿರ್ಸ ನಾರಕರುಮಂ ತೀವ್ರ ವೇದನೆಯಿ೦ ನವೆಯುತ್ತುಮಿರ್ದ ರಾವಣನುಮಂ ಲಕ್ಷ್ಮಣನುಮನವರಿರ್ವರಂ ಕಾಡಿಸುತ್ತಿರ್ದ ಶಂಭುಕನುಮಂ ಕಂಡು ಕರುಣದಿನವರ್ಗೆ ಧ ಶ್ರವಣಮು೦ ಗೆಲ್ಲೊ ಡಂಬಡಿಸಿ ಸಮ್ಯಕಮಂ ಮರೆಯದಿರಿಮೆಂದು ಸೇವರ ದುಃಖಕ್ಕೆ ಕರ ಮುಬೈಗಂಬಟ್ಟು ತನ್ನಿ ರ್ಪಚುತ ಕಲ್ಪಕ್ಕೆ ಪೋಗಿ ಮತ್ತೆ ಮೊರ್ಮೆ ರಾಮಭಟ್ಟಾರಕರ ಸಮಾಸಕ್ಕೆ ಬಂದು ಪೂಜಿಸಿ ಪೊಡೆವಟ್ಟು ಧಶ್ರವಣಾನಂತರಂ ದಶರಥಾದಿಗಳ ಗತಿಯಂ ಬೆಸಗೊಳ್ಳುದು ಕಂ 11 ಹಿಮಕರ ಮಂಡಲದಿಂದೊಸ ರ್ವಮರ್ದೆನೆ ನಿಜಭಾಷೆ ಬೆಸಸಿದರ್ ಕೇವಲಿಗ || ಸಮನಿಸಿದತ್ತುತ್ತಮ ಸಂ ಯಮ ಫಲದಿಂ ದಶರಥಂಗೆ ಕಲ್ಲಾವಾಸಂ || ೭೧ || ಮತ್ತಮ ಪರಾಜಿತೆಗಂ ಕೈಕೆಗಂ ಸುಮಿತ್ರೆಗಂ ಸುಪ್ರಭೆಗಂ ಜನಕಂಗಂ ಕರೋಪಶಮದಿಂ ಸುಗತಿ ಸಮನಿಸಿದುದು ಲವಾಂಕುಶರು,ಾ ಭವದೊಳೆ ಮುಕ್ತ
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೯೨
ಗೋಚರ