ವಿಷಯಕ್ಕೆ ಹೋಗು

ಪುಟ:ರಾಯಚೂರು ವಿಜಯ ಭಾಗ ೧ .djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

81ರರು ವಿಜಯ

wwwMMAMMwwwwmwwwn ಒwwwx ದ್ದಾಗ ಅಲ್ಲಿಗೆ ಒಬ್ಬನು ಬಂದು ತನ್ನೊಡನೆ ಸೇರಿ ಚಕ್ರವರ್ತಿಗಳ ಮೇಲೆ ಕತ್ತಿಯನ್ನು ಕಟ್ಟೆಂದು ವಿಜಯಸಿಂಹನಿಗೆ ಬಹಳವಾಗಿ ಪ್ರೇರೇಪಿಸಿದನು. ಆದರೆ ವಿಜಯಸಿಂಹನು ಅವನ ಮಾತನ್ನು ಎಳ್ಳಷ್ಟಾದರೂ ಕಿವಿಗೆ ಹಾಕಿ ಕೂಳ್ಳಲಿಲ್ಲ. ಬಿರುಗಾಳಿಯಾದರೂ ಬೆಟ್ಟವನ್ನು ಅಲುಗಿಸಬಲ್ಲುದೇ ? ಕಡೆಗೆ ವಿಜಯಸಿಂಹನಿಗೆ ಕೋಪಬಂದು “ ಇನ್ನು ಪುನಃ ನೀನು ಹೀಗೆ ಮಾತನಾಡಿದರೆ ನನ್ನ ಈ ಕತ್ತಿಯು ನಿನ್ನನ್ನು ವಿಚಾರಿಸಿಕೊಳ್ಳುವುದು » ಎಂದು ಹೇಳಿ ಅವನನ್ನು ಅಟ್ಟಿಬಿಟ್ಟನು. ತಿಮ್ಮ-“ ವಿಜಯಸಿಂಹನ ಸುದ್ದಿ ಹಾಗಿರಲಿ, ಪ್ರಹರೇಶ್ವರನ ಸಮ ಚಾರವನ್ನು ತಿಳಿಸು, ಅವನು ರಾಜದ್ರೋಹಿ ಹೌದೋ ಅಲ್ಲವೋ ? - ರಾಮ-“ ಅವನು ರಾಜದ್ರೋಹಿಗಳಲ್ಲಿ ಸೇರಿಲ್ಲ ; ಅವರುಗ ಳನ್ನು ಹಿಡಿದುಕರುವೆನೆಂದ ವಿಜಯಸಿಂಹನಿಗೆ ಮಾತುಕೊಟ್ಟಿರುವನು. ಆದಿನ ರಾತ್ರಿಯೇ ರಾಜದ್ರೋಹಿಗಳನ್ನು ಹಿಡಿದುಬಿಡಬೇಕೆಂದು ಪ್ರಯತ್ನ ವನ್ನೂ ನಡೆಯಿಸಿದನು, ಆದರೆ ಅವರ ಅದೃಷ್ಟವು ಗಟ್ಟಿಯಾಗಿದ್ದುದರಿಂದ ಅವರು ಆ ದಿನ ತಮ್ಮ ಸಂಕೇತಸ್ಥಳದಲ್ಲಿ ಬಂದು ಸೇರಲಿಲ್ಲ, ಹಾಗೆ ಸೇರಿ ದ್ದರೆ ಅವರು ಇಷ್ಟು ಹೊತ್ತಿಗೆ ಕಾರಾಗೃಹದಲ್ಲಿ ಅತಿಥಿಗಳಾಗಿರುತ್ತಿದ್ದರು.” ತಿಮ್ಮ- ಮತ್ತೇನಾದರೂ ವಿಶೇಷಗಳುಂಟೆ ?' ರಾಮ ಉಂಟುವಿಜಯಸಿಂಹನೂ ಪಹರೇಶ್ವರನೂ ಸ್ವಲ್ಪ ಹೊತ್ತು ಸಂಭಾಸಿಸಿಕೊಳ್ಳುತ್ತಾ ಇದ್ದು ನಿದ್ದೆ ಹೋದಮೇಲೆ, ಯಾರೋ ಕಲವರು ಬಂದು ಅವರಿಬ್ಬರನ್ನೂ ಹೆಡಮುರಿಕಟ್ಟ ಕಡವಿ, ವಿಜಯಸಿಂಹ ನನ್ನು ಶೈವಮಠಕ್ಕೆ ಹೊತ್ತುಕೊಂಡು ಹೋದರು.” ತಿಮ್ಮ- ಪಹರೇಶ್ವರನನ್ನು ಹೊತ್ತುಕೊಂಡು ಹೋಗಲಿಲ್ಲವೋ ?” - ರಾಮು- ಆ ಘಾತುಕರಿಗೆ ವಿಜಯಸಿಂಹನ ಮೇಲೆಯೇ ದ್ವೇಷವಿದ್ದಂ ತಯ, ಅವನನ್ನು ಕಟ್ಟಿ ತೆಗೆದುಕೊಂಡು ಹೋಗುವಾಗ ಪ್ರಹರೇಶ್ವರನು ಅಡ್ಡಿ ಮಾಡದಿರಲೆಂದು ಅವನನ್ನು ಕಟ್ಟಿ ಕೆಡವಿದಂತೆಯ ತೋರುವುದು, ಆದುದರಿಂದಲೇ ವಿಜಯಸಿಂಹನನ್ನು ಹೊತ್ತುಕೊಂಡು ಹೋದರೆಂದು ನನಗೆ ಕಾಣುತ್ತದೆ.'