ಗಿರಿ! ರಾಯರು ವಿಜಯ ಇಷ್ಟರಲ್ಲಿ ಮಾಲತಿಯು ಹೂವಿನ ದಂಡೆಯನ್ನು ತಂದು ಒಪ್ಪಿಸಿದಳು. ಅತ್ಯಂತ ನಿಪುಣತೆಯನ್ನು ಪ್ರಯೋಗಿಸಿ ಕಟ್ಟಿದ್ದ ಆ ಹಾರವನ್ನು ಕಂಡು ರಸ ಜ್ಞರಾದ ಕೃಷ್ಣ ದೇವರಾಯರು ಅದನ್ನು ತಮ್ಮ ಕೈಗೆ ತೆಗೆದುಕೊಂಡು ಅದರ ರಚನೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸತೊಡಗಿದರು. ಹೀಗೆ ಪರೀ ಕ್ಷಿಸುತ್ತಿದ್ದಾಗ ಚಕ್ರವರ್ತಿಯವರಿಗೆ ಬಂದು ವಸ್ತುವು ಗೋಚರವಾಯಿತು. ಅದನ್ನು ಹೊರಕ್ಕೆ ತೆಗೆದು ಪರೀಕಿ ಸಿದಕೂಡಲೆ ಚಕ್ರವರ್ತಿಯವರಿಗೆ ಉಂಟಾದ ಕೋಪವು ಇದುವರೆಗೆ ಕಾಣಬರುತ್ತಿದ್ದ ಅವರ ಅನುರಾಗರಸ ವನ್ನು ಹೀರಿಬಿಟ್ಟಿತು. ಕೂಡಲೆ ಚಕ್ರವರ್ತಿಯವರ ಬಲಗೈಯು ಕತ್ತಿಯ ಕಡೆಗೆ ತಾನಾಗಿಯೇ ಚಲಿಸಿತು ; ಪಂದಗಳು ಗಡಗಡನೆ ನಡುಗಲಾರಂಭಿಸಿ ದುವು. ಅವರು ಅಲ್ಲಿ ನಿಲ್ಲಲಾರದೆ ತನ್ನ ಮಹಲಿನ ಕಡೆಗೆ ಹೊರಟರು. ಅಲ್ಲಿಗೆ ಹೋದಕೂಡಲೆ ಅನಂಗಸೇನೆಯನ್ನು ಕೊಲ್ಲಿಸಿಬಿಡಬೇಕೆಂಬ ಪ್ರಬ ಲೇಚ್ಛೆಯು ಹುಟ್ಟಿತು ; ಆದರೆ ಉತ್ತರಕ್ಷಣದಲ್ಲಿಯೇ ವಿವೇಕವು ಅವರಿಗೆ ತಲೆದೋರಿ, ಚೆನ್ನಾಗಿ ಪರೀಕ್ಷಿಸಿದಮೇಲೆ ಮುಂದಿನ ಕೆಲಸವನ್ನು ನಡೆಯಿಸ ಬೇಕೆಂಬ ಬುದ್ಧಿಯುಂಟಾಯಿತು. ಇತ್ತ ಕಡೆ, ಮಹಾರಾಜರವರು ಇದ್ದುದಕ್ಕೆ ಇದ್ದಂತೆಯೇ ಹೊರಟು ಹೋದುದನ್ನು ಕಂಡು ಅನಂಗಸೇನೆಗೆ ದಿಗ್ದಮೆ ಹಿಡಿಯಿತು. ಇದು ವರೆಗೂ ಮಹಾರಾಜರವರು ಯಾವಾಗಲೂ ಪ್ರಸನ್ನರಾಗಿಯೇ ಇದ್ದು ಈದಿನ ಹೀಗೆ ರೌದ್ರಾವತಾರವನ್ನು ಹೊಂದಿದುದಕ್ಕೆ ಕಾರಣವೇನಿರಬಹುದೆಂದು ಬಹಳವಾಗಿ ಆಕೆಯು ಯೋಚಿಸಿದಳು. ಹಲವು ತರ್ಕಗಳನ್ನು ಮಾಡಿ ಕೊಂಚುದಾಯಿತು ; ಹಲವು ವಿತರ್ಕಗಳನ್ನೂ ಮಾಡಿಕೊಡುದಾಯಿತ , ಆದರೂ ಅನಂಗಸೇನೆಗೆ ಸಮಾಧಾನವಾಗಲಿಲ್ಲ, ಅಷ್ಟರಲ್ಲಿ ಮಹಾರಾಜ ರವರು ಅನಂಗಸೇನೆಯು ಇದ್ದ ಕೊಟಡಿಗೆ ಬಂದು “ ನೀಚಳ 1 ನಿನ್ನನ್ನು ನನ್ನ ಈ ಕತ್ತಿಗೆ ಬಲಿಕೊಟ್ಟರೂ ಪಾಪವು ಬರಲಾರದು, ಆದರೆ ಕತ್ತು ಪುರುಷರ ರುಧಿರವನ್ನು ಕುಡಿದಿರುವ ಈ ಕತ್ತಿಗೆ ನಿನ್ನ ರಕ್ತವು ರುಚಿ ಸದು, ೨) ಎಂದು ಹೇಳಿ ಪುನಃ ಹೊರಟುಹೋದರು. ಈಗ, ಮಹಾರಾಜ ರವರಿಗೆ ತನ್ನ ಮೇಲೆ ಏನೋ ಕಾರಣದಿಂದ ಕೋಪಬಂದಿರುವುದೆಂದ ಅನಂಗಸೇನೆಯ ಮನಸ್ಸಿಗೆ ಹೊಳೆಯಿತು, ಹೀಗೆ ಮಹಾರಾಜರನರ ದಿಯು
ಪುಟ:ರಾಯಚೂರು ವಿಜಯ ಭಾಗ ೧ .djvu/೧೧೨
ಗೋಚರ