ಪುಟ:ರಾಯಚೂರು ವಿಜಯ ಭಾಗ ೧ .djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

wwwmwwwmvwwwwvww Mwwwmwww ಹನ್ನೊಂದನೆಯ ಪ್ರಕರಣ no ಯು ತನ್ನನ್ನು ಬಿಟ್ಟಿತೆಂದು ತಿಳಿದಕೂಡಲೆ ಅನಂಗಸೇನೆಗೆ ಭೂಮಿಯು ನನ್ನ ಕಾಲಕೆಳಗಿನಿಂದ ಜಾರಿಹೋಯಿತೋ ಎಂಬಂತೆ ಭಯವೂ ನಿಂತ ಯ ತಲೆದೋರಿದುವು; ತಡೆಯಲಾರದಷ್ಟು ದುಃಖವು ಹುಟ್ಟಿ ಬಿಕ್ಕಿಬಿಕ್ಕಿ ಅವಳು ಅಳಲಾರಂಭಿಸಿದಳು ; ತಾನು ಧರಿಸಿದ್ದ ಆಭರಣಗಳೆಲ್ಲವನ್ನೂ ಒಂದೊಂದನ್ನಾಗಿ ಕಳಚಿ ಎಸೆಯುತ್ತ ಬಂದಳು. ಕೆಲವು ಕಾಲ ಹೀಗೆ ಕಳೆದ ಮೇಲೆ ದುಃಖವು ಸ್ವಲ್ಪಮಟ್ಟಿಗೆ ಶಮನವಾಯಿತೆಂದು ತಿಳಿದು, ಮಾಲತಿಯು ಆಕೆಗೆ ದುಃಖೋಪಶಮನಮಾಡಬೇಕೆಂದು ಹೀಗೆ ಸಂಭಾವಿಸಿದಳು:- ಮಾಲತಿ- ತಾಯಿ ! ಹೀಗೇಕೆ ದುಃಖಿಸುವಿ ? ಈ ಆಭರಣಗಳ ಮೇಲೆ ಏಕೆ ಸಿಟ್ಟು ಮಾಡಿಕೊಂಡು ಅದಮಾಡುತ್ತಿರುವಿ ? ಅವುಗಳಿಂದ ನಿನಗೆ ಏನು ಅಪರಾಧವಾಗಿದೆ ? 99 “ ನನಗೆ ಇನ್ನು ಆಭರಣಗಳಕ ? ೩೨ ಎಂದು ಹೇಳಿ ಪುನಃ ಆನಂಗ ಸೇನೆಯು ಅಳಲಾರಂಭಿಸಿದಳು. - ಮಾಲತಿ-ಅಮ್ಮಾ ! ಹೀಗೆ ಅಳುವುದರಿಂದ ಆಗುವ ಪುರುಷಾರ್ಥ ವೇನು ? ಒಂದುವೇಳೆ ಮಹಾರಾಜರಿವರ ಮೇಲೆ ಕೋಪಮಾಡಿಕೊಂಡು ನೀನು ಹೀಗೆ ಮಾಡುತ್ತಿರುವೆಯಾದರೆ ಯಾರಿಗೆ ನಷ್ಟವೆಂಬುದನ್ನು ಆಲೋ ಸು, ರಾಜರ ಚಿತ್ತವು ಈಗ ನಿಗ್ರಹಪ್ರವೃತ್ತಿಯುಳ್ಳುದಾಗಿದ್ದರೆ ಮರು ಕ್ಷಣದಲ್ಲಿ ಅನುಗ್ರಹಪ್ರವೃತ್ತಿಗೆ ಒಳಗಾಗಬಹುದು. ಸ್ಥಿರಮಲವಾದ ವೃಕ್ಷರಾಜನೊಂದಿದ್ದರೆ ಬಹುಲತೆಗಳು ಅದನ್ನು ಆಶ್ರಯಿಸಿಕೊಳ್ಳುವುವು. ಲತೆಯೊಂದು ಮೈಮನಸ್ಯವನ್ನು ಹೊಂದಿದರೆ ವೃಕ್ಷಕ್ಕೆ ಎಂದಿಗೂ ನಷ್ಟ ವಿಲ್ಲ, ಆದುದರಿಂದ ನೀನು ಹೀಗೆ ಕೋಪಹೊಂದುವುದಾಗಲಿ ದುಃಖಪಡುವು ದಾಗಲಿ ಎಷ್ಟು ಮಾತ್ರಕ್ಕೂ ಪ್ರಯೋಜನಕಾರಿಯಲ್ಲ. ೨೨ ಅನಂಗ- ಮಾಲತಿ ನೀನು ಹೇಳುವುದು ಸರಿಯೆಂದು ಕಾಣು ವುದು. ಆದರೆ ನನ್ನ ಮೇಲೆ ಅಷ್ಟು ಪ್ರೀತಿಯಿಂದಿದ್ದ ಮಹಾರಾಜರವರು ಕ್ಷಣಮಾತ್ರದಲ್ಲಿ ರೋಪಾವಿಷ್ಟರಾದರಲ್ಲಾ ! ಹೀಗೆ ಆಗುವುದಕ್ಕೆ ಕಾರಣ ವೇನಿರಬಹುದು ? ಹೇಗಾದರೂ ಮಾಡಿ ಈ ಕೋಪಕ್ಕೆ ಕಾರಣವನ್ನು ಕಂಡುಹಿಡಿದು ನನಗೆ ತಿಳಿಸುವಿರಾ ? ?”

  • ಅಮ್ಮಾ ! ಪ್ರಯತ್ನಿಸಿ ನೋಡುವೆನು, ನಾನು ಬರುವವರೆಗೂ ಮನಸ್ಸನ್ನು ಬಿಗಿಹಿಡಿದಿರು. ಬೇಗ ಬಂದುಬಿಡುವೆನು ೨' ಎಂದು ಹೇಳಿ