೧೦೪ ಕಾಯುವಿಜಯ ಮಾಲತಿಯು ಹೊರಟುಹೋದಳು, ಬಳಿಕ ಅನಂಗಸೇನೆಯು ರಾಯರಿಗೆ ಒಂದು ಕಾಗದವನ್ನು ಬರೆದುಕೊಳ್ಳಬೇಕೆಂದು ಯೋಚಿಸಿದಳು, ಆದರೆ ಮರುಕ್ಷಣದಲ್ಲಿಯೇ ಇಂತಹ ಸಮಯದಲ್ಲಿ ಕಾಗದಬರೆಯುವುದರಿಂದ ಕೇಡಾಗಬಹುದೆಂದು ತಿಳಿದು ತನ್ನ ಮೊದಲಿನ ಉದ್ದೇಶವನ್ನು ಬಿಟ್ಟು ಬಿಟ್ಟಳು. ಹೀಗೆಯೇ ಹಲವುಬಗೆಗಳಲ್ಲಿ ತರ್ಕವಿತರ್ಕಗಳನ್ನು ಮಾಡಿಕೊ ಳ್ಳುತ್ಯ, ರಾಯರ ಮನಸ್ಸನ್ನು ಪುನಃ ಒಲಿಸಿಕೊಳ್ಳುವುದಕ್ಕಾಗಿ ಹಲವು ಉಪಾಯಗಳನ್ನು ಯೋಚಿಸಿಕೊಳ್ಳುತ್ತ, ಯಾವ ಪ್ರಯತ್ನದಿಂದ ಏನು ವಿಪರೀತಫಲವಾದೀತೋ ಎಂದು ಹೆದರುತ್ತ ಡೋಲಾಯಮಾನಮಾನಸಳಾಗಿ ಕುಳಿತುಕೊಂಡಿದ್ದಳು. ಈ) . 9 " ಹನ್ನೆರಡನೆಯ ಪ್ರಕರಣ. ಕೊಂಡಪಲ್ಲಿಯ ಪರಿಚಯ ಮರಣದಂಡನೆ. ಶುಚಿರಶುಚಿಃ ಪಟುರಪಟು 8 ಶರೋಭೀರ.8 ಚಿರಾಯರಾಯಃ || ಕುಲಜಃ ಕುಲೇನಹೀನಃ ಭವತಿ ನರೋ ನರಪತೇರತಿ ಧಾತ್ || ಇತ್ತ ಚಕ್ರವರ್ತಿಯವರು ತಮ್ಮ ಕೊಟಡಿಗೆ ಹೋಗಿ ಅತ್ಯಂತ ಗಾಢವಾದ ಯೋಚನೆಗೆ ಒಳಗಾಗಿ, ಕಡೆಗೆ ಅನಂಗಸೇನೆಯನ್ನು ಅರಮನೆ ಯಿಂದ ಹೊರಡಿಸಿಬಿಡಬೇಕೆಂದು ನಿರ್ಧರಿಸಿದರು, ಉನ್ನತವಂಶಸಂಭೂತ ನಂದೂ, ಮಹಾಪರಾಕ್ರಮಶಾಲಿಯೆಂದೂ, ಸದ್ದು ಗಣೋಪೇತನೆಂದೂ ಭಾವಿಸಿ, ವಿಜಯಸಿಂಹನಿಗೆ ತನ್ನಲ್ಲಿ ಆಸರೆಯನ್ನು ಕೊಟ್ಟರೆ, ಅವನು ಅಕ್ಷಮ್ಯವಾದ ಕೃತಷ್ಟು ತೆಯಿಂದ ತಿಂದಮನೆಗೆರಡನ್ನು ಬಗೆದನೆಂ , ಅವ ನ ಅಪರಾಧಕ್ಕೆ ಮರಣದಂಡನೆಯೇ ತಕ್ಕ ಶಿಕ್ಷೆಯೆಂದೂ ನಿಶ್ಚಯಮಾಡಿ ಕೊಂಡು, ಅಪ್ಪಾಜಿಯವರನ್ನು ಬರಹೇಳಲು ಅವರು ದೂತನನ್ನು ಅಟ್ಟಿದರು. ತಿಮ್ಮರಸನು ತಡಮಾಡದೆ ಅರಮನೆಗೆ ಬಂದು ರಾಯರಿಗೆ ಕಾಣಿಸಿ ಕೊಂಡು ಅವರ ಅಪ್ಪಣೆಯ ಮೇರೆಗೆ ಉಜತಾಸನಾಸೀನನಾದನು. ಇಂಗಿತ
ಪುಟ:ರಾಯಚೂರು ವಿಜಯ ಭಾಗ ೧ .djvu/೧೧೪
ಗೋಚರ