hn* ಕಾಯುವಿಜಯ • • • • ರಾಮಯ-“ ನಾವು ಮಾಡಬೇಕಾದ ಕೆಲಸಗಳು ಅನೇಕವಿರುವುವು. ವಿಜಯಸಿಂಹನು ಸತ್ತನೆಂದು ಕೇಳಿದಮೇಲೆ ಅವುಗಳನ್ನು ತಿಳಿಸುವನು. ಸದ್ಯದಲ್ಲಿ ಈ ಪುರದಿಂದ ಯಾರೂ ಅರಿಯದಂತೆ ಮುಕಾಂಬೆಯನ್ನು ಕರೆದುಕೊಂಡು ಹೋಗುವ ಯತ್ನವನ್ನು ಮಾಡಬೇಕಾಗಿದೆ.' ಪ್ರಹರೇ-“ ನಾವು ರಾಜದ್ರೋಹಿಗಳೊಡನೆ ಸೇರಿಕೊಂಡು ಒಳ ಸಂಚನ್ನು ನಡೆಯಿಸುತ್ತಿರುವೆವೆಂದು ಸಂಶಯಪಟ್ಟು, ಈಗ ತಿಮ್ಮರಸನು ನಮ್ಮ ಕಾವಲಿಗಾಗಿ ಹೆಚ್ಚು ಮಂದಿ ಭಟರನ್ನು ನೇಮಿಸಿರುವನು. ತಾವು ನಾನಾವೇಷಗಳನ್ನು ಧರಿಸುತ್ತಿರುವುದರಿಂದಲೇ ಪ್ರವೇಶವು ತಮಗೆ ಸಾಧ್ಯ ವಾಗಿರುವುದು, ಹೀಗಿರುವಲ್ಲಿ, ಬಲುಎಚ್ಚರಿಕೆಯುಳ್ಳ ಆ ಭಟರಿಗೆ ಮಂಕು ಬೂದಿಯನ್ನು ಚೆಲ್ಲಿ ಮುಕ್ತಾಂಬೆಯನ್ನು ಬಿಡಿಸಿಕೊಂಡು ಹೋಗುವುದು ಹೇಗೋ ನನಗೆ ತಿಳಿಯದು. ರಾಮದು-“ ಇದರ ವಿಷಯವನ್ನು ಕುರಿತು ಯೋಚನೆಯನ್ನು ಬಿಡು. ನೂರುಮಂದಿ ಭಟರಿದ್ದರೂ ಈ ಕೆಲಸವನ್ನು ಸಾಧಿಸುವೆನು. ಮುಕ್ಕಾಂಬೆಯು ವಿಜಾ: 4ಗಕ್ಕೆ ಹೋಗಲು ಅಡ್ಡಿ ಮಾಡಲಾರಳ ಪೈ ? ಒಂದು ವೇಳ ಅವಳು ಅಡ್ಡಿ ಮಾಡಿದರೆ ನಮ್ಮ ಪ್ರಯಾಸವೆಲ್ಲವೂ ಮಣ್ಣುಪಾಲಾ ಗುವುದು :) ಪ್ರಹರೇ-“ ಮುಕ್ಕಾಂಬೆಯು ನಿಮ್ಮ ಮಾತುಗಳನ್ನು ಮೀರಲು ರಳು, ಚಿರುಪದಿಂದಲೇ ರಾಜ್ಯವನ್ನು ಸಂಪಾದಿಸಿಕೊಳ್ಳಬೇಕೆಂದು ಆಕೆಗೂ ಇಪ್ಪ, ತನ್ನ ಪ್ರಿಯನಾದ ವಿಜಯಸಿಂಹನು ಸತ್ಯವೆಂದರೆ ಈ ರಾಜ್ಯದಲ್ಲಿ ರಲು ಅವಳಿಗೆ ಮನಸ್ಸಿರಲಾರದು, ಇದೂ ಅಲ್ಲದೆ ರಾಜಮಂತ್ರಿಗಳು ಅನೇಕ ಕ್ರೂರ ಕೃತ್ಯಗಳನ್ನು ಮಾಡುವರೆಂದು ಸುದ್ದಿಯನ್ನು ಹುಟ್ಟಿಸಿದರೆ ಅವಳು ಬಂದು ನಿಮಿಷಕಾಲವಾದರೂ ಇಲ್ಲಿ ಇರಲು ಒಪ್ಪಲಾರಳು. ಇಲ್ಲಿ ಇದ್ದರೆ ನನಗೆ ರಾಜದ್ರೋಹಕ್ಕಾಗಿ ಮರಣದಂಡನೆಯಾಗುವ ಸಂಭವವಿರು ವುದೆಂದೂ, ಇಲ್ಲಿಂದ ತಪ್ಪಿಸಿಕೊಂಡುಹೋಗುವುದು ಅತ್ಯಾವಶ್ಯಕವೆಂದೂ ತಿಳಿಸಿದರೆ, ನನ್ನ ಮೇಲೆ ಆಕೆಗೆ ಬಹಳ ಪ್ರೀತಿಯಿರುವುದರಿಂದ ಅವಳು ನನ್ನೊಡನೆ ಬಂದುಬಿಡಲು ಒಪ್ಪುವಳು, ಆದರೆ ಹೀಗೆಲ್ಲಾ ಬೋಧಿಸು
ಪುಟ:ರಾಯಚೂರು ವಿಜಯ ಭಾಗ ೧ .djvu/೧೨೪
ಗೋಚರ