ಹದಿಮೂರನೆಯ ಪ್ರಕರಣ ರಿಂ# ವುದಕ್ಕೆ ಒಬ್ಬ ದೂತನನ್ನು ಮಾತ್ರ ಮುಕ್ಕಾಂಬೆಯ ಬಳಿಗೆ ಕಳುಹಿಸಿ ಕಡಬೇಕು.! ರಾಮಯ-“ ಈ ಕೆಲಸಕ್ಕೆ ರುದ್ರದೇವನೇ ತಕ್ಕವನು, ಇವನು ಆಗಾಗ ಮುಕ್ತಾಂಬೆಯ ಬಳಿಗೆ ಹೋಗಿ ಬರುತ್ತಿದ್ದರೆ, ಇವನಲ್ಲಿ ಅನುರು ಗವು ಹುಟ್ಟಬಹುದು. ಮುಕ್ತಾಂಬೆಯು ವಿಜಯಸಿಂಹನನ್ನು ವರಿಸಿಬಿಟ್ಟರೆ, ಪೌರುಷದಿಂದ ಉದಯಗಿರಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಂಭವವೇ ಇರಲಾರದು ; ಆದುದರಿಂದ ರುದ್ರದೇವನನ್ನೇ ಕಳುಹಿಸೋಣ.” ಪ್ರಹರೇ-“ ನಿಮ್ಮ ಬುದ್ದಿ ವಿಶೇಷವು ಅಪ್ರತಿಹತವಾದುದು, ಅದ ರಿಂದಲೇ ನಿಮ್ಮ ಪ್ರಭುಪುತ್ರಿಯ ಹಿತವು ಕೈಗೂಡುವುದು. ಆದರೆ ಮುಕಾಂಬೆಯು ನಮ್ಮ ಪ್ರಯತ್ನಗಳಿಗೆ ಅನುಕೂಲಳಾಗಿರಬೇಕು, ನಾನು ಎಷ್ಟು ಹೇಳಿದರೂ ಅವಳು ಸ್ವಲ್ಪ ಮೂರ್ಖತೆಯನ್ನು ತೋರಿಸುತ್ತಿರು ವಳು, ಏನುಮಡೋಣ ?" _ರಾಮಯ-ನನ್ನ ಪ್ರಭುಕುಮಾರಿಯ ಹಿತವೇ ನನಗೆ ಯಾವಾ ಗಲೂ ಮುಖ್ಯವಾಗಿರುವುದರಿಂದ ಆಕೆಯ ಮ ರ್ರತೆಯೇ ಮೊದಲಾದ ಪ್ರತಿಬಂಧಕಗಳಿಂದ ನಾನು ನನ್ನ ಪ್ರಯತ್ನಗಳಲ್ಲಿ ವಿಮುಖನಾಗುವುದಿಲ್ಲ. ಒಂದು ವಿಷಯದಲ್ಲಿ ಮಾತ್ರ ಆಕೆಯು ನನಗೆ ಪ್ರತಿಕೂಲಂಗಿರುವಳು. ನಾನು ರುದ್ರದೇವನನ್ನು ಮದುವೆಯಾಗದರೆ ತಾನು ವಿಜಯಸಿಂಹನನ್ನು ಮದುವೆಯಾಗುವೆನೆಂದು ಯತ್ನಿಸುತ್ತಿರುವಳು, ಆದರೆ ವಿಜಯಸಿಂಹನು ನಾಶವಾಗುವುದರಿಂದ ಇನ್ನು ನನ್ನ ಉದ್ದೇಶವು ನೆರವೇರದೆ ಇರದು. ಒಂದು ವೇಳೆ ವಿಜಯಸಿಂಹನನ್ನು ಉಳಿಸಿಕೊಳ್ಳುವುದಕ್ಕಾಗಿ ಮುಕ್ತಾಂಬೆಯು ಹಲವು ಪ್ರಯತ್ನಗಳನ್ನು ಮಾಡಬಹುದು, ಹೀಗೆ ಮಾಡುವುದು ಸಹ ಅವೇ ತಾನೇ, ರುದ್ರದೇವ ನೀನು ಆಗಾಗ ಮುಕಾಂಬೆಯ ಬಳಿಗೆ ಹೋಗಿ ಬರುತ್ತಾ ನಿನ್ನಲ್ಲಿ ಆಕೆಗೆ ಅನುರಾಗವು ಹುಟ್ಟುವಂತೆ ಪ್ರಯತ್ನಿಸುತ್ತಿರು. ಆದರೆ ನನ್ನ ಗುಟ್ಟುಗಳನ್ನು ಮಾತ್ರ ರಟ್ಟು ಮಾಡದಿರು ” ಹೀಗೆ ಹೇಳಿ ರಮಯನು ಒಬ್ಬರಿಗೂ ಗೊತ್ತಾಗದಂತೆ ಎಲ್ಲಿಗೋ ಹೊರಟುಹೋದನು.
ಪುಟ:ರಾಯಚೂರು ವಿಜಯ ಭಾಗ ೧ .djvu/೧೨೫
ಗೋಚರ