రియు విజయ ಹದಿನಾಲ್ಕನೆಯ ಪ್ರಕರಣ. ಮುಂತ್ರಭೇದ. ಯೋ ಮಹತ್ ಮನ್ಯತೇ ಮಧೋ ರಕ್ತಯಂ ಮಮ ಕಾಮಿನೀ || ಸ ಶಾ ವಶಗೊ ಭೂತ್ಯು ನೃತ್ಯಕ್ ಕ್ರೀಡಶಕುಂತವಃ || ರಾಮಯಾದಿಗಳು ತಪ್ಪದೆ ವಿಜಯಸಿಂಹನನ್ನು ಕೊಲ್ಲಿಸಬೇಕೆಂದು ನಿರ್ಧರಿಸಿದಾಗ, ಮುಕ್ಕಾಂಬೆಯು ತನ್ನ ದೆಸೆಯಿಂದ ವಿಜಯಸಿಂಹನಿಗೆ. ಆಪತ್ತು ಒದಗಿತಲ್ಲಾ ಎಂದು ವಿಷಾದಶಟ್ಟಳಾದರೂ ರಾಜಸಹಾಯವನ್ನು ಪಡೆದಿದ್ದ ಆತನಿಗೆ ಭಯವಿಲ್ಲ ಎಂದು ಒಂದುಸಾರಿ ಸಮಾಧಾನಮಾಡಿಕೊಂಡಿ ದ್ದಳು, ಆದರೆ ಈಗ ತನ್ನ ಪ್ರಿಯನು ಆಕಸ್ಮಿಕವಾಗಿ ರಾಜದೇಶಕ್ಕೆ ಗುರಿಯಾದನೆಂದು ಕೇಳದಕೂಡ ಇದಕ್ಕೆ ರಾಮಯಾದಿಗಳು ನಡೆಯಿಸಿದೆ ಯಾವುದೇ ಕುತಂತ್ರವೇ ಕಾರಣವಾಗಿರಬೇಕೆಂದು ದೃಢಮಾಡಿಕೊಂಡಳು. ತಾನು ಇದ್ದದು ಆನೆಗೊಂದಿಯಲ್ಲಿ, ಅಹಿತರಮಧ್ಯದಲ್ಲಿ ; ವಿಜಯಸಿಂಹನು ಇದ್ದುದು ವಿಜಯನಗರದ ಕಾರಾಗೃಹದಲ್ಲಿ, ಹೀಗಿರಲು ರಾಮಯಾದಿಗಳ ಕಪಟೋಪಾಯವನ್ನು ಕಂಡುಹಿಡಿಯಲು ಅವಳಿಗೆ ಅವಕಾಶವೇ ಇರಲಿಲ್ಲ ಎದುದರಿಂದ ಸ್ವಲ್ಪಮಟ್ಟಿಗೆ ಅವಳು ಕಾತರಳಾಗಿದ್ದಳು ; ಆದರೆ ಈ ವಿಷಮಸಮಯದಲ್ಲಿ ದೈವವು ಮುಕ್ಕಾಂಬೆಗೆ ಸಹಾಯಮಾಡಿತು. ನಯಭಯದಿಂದ ಮುಕ್ತಾಂಬೆಯ ಅನುರಾಗವನ್ನು ಸಂಶಂದಿಸಿ ಕೃಳು ಇದೇ ತಕ್ಕ ಸಮಯವೆಂದು ಭಾವಿಸಿ ರುದ್ರದೇವನು, ಆಕೆಯು ಇದ್ದಲ್ಲಿಗೆ ಬಂದನು, ಮುಕ್ಕಾಂಬೆಯು ಬಹಳ ಆದರದಿಂದ ಅವನನ್ನು ಬರಿಮಾಡಿಕೊಂಡಳು. ಯೋಗಕ್ಷೇಮಸಮಾಚಾರವು ನಡೆದ ಬಳಿಕ ಮುಕ್ಕಾಂಬೆಯು “ ರಾಮಯಾವಾತನ ಉಪಾಯಕ್ಕೆ ಅಡ್ಡಿಯೇನೂ ಬಂದಿಲ್ಲವಷ್ಟೆ ? " ಎಂದು ಪ್ರಶ್ನಿಸಿದಳು. ಮುಕ್ಕಾಂಬೆಯ ನಯವಾದ ನಡೆನುಡಿಗಳಿ೦ದಲೂ, ಆಕರು ಹಾಜ ಭಾವವಿಲಾಸದಿಂದಲೂ ಮುಗ್ಧನಾಗಿಹೋಗಿದ್ದ ರುದ್ರದೇವನು ಇನ್ನು ಆಕೆಯು ತನ್ನ ಸುಧೀನಕ್ಕೆ ಸಿಕ್ಕಿದಳಂದು ನಂಬಿಕೊಂಡು ವಿರೇಳbಸ ನಾಗಿ “ ರಾಮಯಮಂತ್ರಿಯ ಉದಯಕ್ಕೆ ಅಡ್ಡಿ ಬರುವುದು ಎಂದರೇನು?
- ದಿ