ಪುಟ:ರಾಯಚೂರು ವಿಜಯ ಭಾಗ ೧ .djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಿಲೆ యేడి రేపిజయ Wwwwಸಿ ರಿಂದ, ಅವರು ನನ್ನ ಆಪ್ತರೇ ಅಲ್ಲವೇ ? ದೈವಾನುಗ್ರಹದಿಂದ ನನ್ನ ರಾಜ್ಯವು ನನಗೆ ದೊರೆತರೆ ರಾಮಯಾದಿಗಳು ರಾಜ್ಯ ಪ್ರಕೃತಿಗಳ ಆಗುವ ರಲ್ಲವೇ ? ರಾಜನೂ ಮಂತ್ರಿಯ, ಬೇರೆಬೇರೆ ಪಕ್ಷಗಳಲ್ಲಿ ಸೇರಿರುವು ದನ್ನು ಎಲ್ಲಿಯಾದರೂ ಕಂಡಿರುವವೇ ? ಅವರಿಬ್ಬರೂ ಒಟ್ಟುಗೂಡಿ ಕೆಲಸ ಗಳನ್ನು ನಡೆಯಿಸಿದರೆ ಶತ್ರುಗಳು ವಶರಾಗುವುದರಲ್ಲಿ ಸಂದೇಹವೇ ಇಲ್ಲ. ಇದು ನನಗೆ ತಿಳಿಯದ ಮಾತಲ್ಲ, ಕೃಷ್ಣ ದೇವರಾಯನು ನನಗೆ ವಿರೋಧಿ. ಆತನಿಗೆ ಪ್ರಿಯಕೃತ್ಯನಾದ ವಿಜಯಸಿಂಹನು ನನ್ನ ಅನುರಾಗಕ್ಕೆ ಹೇಗೆ ತಾನೇ ಪುತ್ರನಾದನು ? ಅದನ್ನಾದರೂ ನೀನು ಯೋಚಿಸಬೇಡವೇ ? ಎಂದಳು. ಈ ಮೊದಲೇ ಮೋಹಾಂಧನಾಗಿದ್ದ ರುದ್ರದೇವನು ಈ ಬೆಡಗಿನ ಮಾತುಗಳಿಗೆ ಬೆರಗಾಗಿ, ವಿಜಯಸಿಂಹನಲ್ಲಿ ಮುಕ್ಕಾಂಬೆಗೆ ಅನುರಾಗವಿಲ್ಲ ಎಂದು ದೃಢಮಾಡಿಕೊಂಡರೇ ಹೊರತು, ತನ್ನಿಂದ ಗುಟ್ಟನ್ನು ಹೊರಡಿಸು ವುದಕ್ಕಾಗಿ ಹಾಗೆ ಮಾತಾಡಿದಳಂದು ತಿಳಿದುಕೊಳ್ಳಲಿಲ್ಲ. ಆದುದರಿಂದ<< ಸ್ಥಿರತ್ನವೇ ! ವಿಜಯಸಿಂಹನು ನಮಗೆ ಪ್ರತಿಕಕ್ಷಿಯೆಂದು ತಿಳಿದಿರುವಿ ಯಾದರೆ, ಈಗ ನಾವು ಅವನಿಗೆ ತಂದಿರುವ ವಿಪತ್ತು ಅವನ ಅವತಾರವನ್ನು ಪೂರಿ ಮಾಡಿಬಿಡುವುದೆಂದು ತಿಳಿಯಲು ನೀನು ಬಹಳ ಸಂತೋಷಪಡುವುದ ರಲ್ಲಿ ಸಂದೇಹವಿಲ್ಲ” ಎಂದನು. ಮುಕಾಂಬೆ-“ ಅದೇನು ! ಅಂತಹ ಶುಭವರ್ತಮಾನ ? ಅಷ್ಟು ಒಳ್ಳಯ ಸಮಾಚಾರವನ್ನು ಏಕೆ ಮಾಜಿ ಮುಚ್ಚಿ ಹೇಳುವೆ ? ನನಗೆ ಸಂತಾಪಕರನಾದ ವಿಜಯಸಿಂಹನು ಕಾಲದರವನ್ನು ಹೊಂದಿದನೋ ಇನ್ನೂ ಇಲ್ಲವೋ ? ಬೇಗ ತಿಳಸು "

  • ರುದ್ರ- ವಿಜಯಸಿಂಹನು ಇನ್ನೇನು ಸಾಯುವುದರಲ್ಲಿ ರುವನು. ಈಹೊತ್ತೂ ನಾಳೆಯೋ ಅವನು ಯಮಧರರಾಯನನ್ನು ನೋಡುವುದು ಖಂಡಿತ, ವಿಜಯಸಿಂಹನು ಸತ್ತಕೂಡಲೆ ನಾನೇ ಎಂದು ತಿಳಿಸುವೆನು.”

ಮುಕ್ಕಾಂಬೆ-“ ಕುಭವ-ಮಾನವನ್ನು ಸಾಮಾನ್ಯರು ತಂಡರೂ ವಿಶೇಶವಾಗಿ ಬಹುಮಾನಮಾಡುವಲ್ಲಿ, ರಾಜಪುತ್ರನಾದ ನೀನೇ ಈ ಸಂತೋ ಪಕರವಾದ ಸಮಾಚಾರವನ್ನು ತಿಳಿಸಿದಾಗ ನಿನ್ನನ್ನು ಹೇಗೆ ಸತ್ಕರಿಸಲಿ ಎಂದು ಯೋಚಿಸುತ್ತಿರುವೆನು, ಆದರೆ ಆ ವಿಜಯಸಿಂಹಸು ಮಹಾಸಾಹಸಿ;