ಪುಟ:ರಾಯಚೂರು ವಿಜಯ ಭಾಗ ೧ .djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೬ ಕರ್ನಾ ಟಕ ಗ್ರಂಥಮಾಲೆ •n vry - erv • • • •v / • • • • • •v • s rw txt +1 ಭ ತಮ್ಮ ಮುಖ್ಯಮಂತ್ರಿಯನ್ನು ಅವ : ಇಲ್ಲಿಗೆ ಕಳುಹಿಸಿರುವರು. ಇದರಿಂದ ತಮ್ಮಿಬ್ಬರಿಗೂ ಇದ್ದ ವೈಮನಸ್ಯವು ದೂರವಾಯಿತೆಂದು ವ್ಯಕ್ತವಾಯಿತು ಅಲ್ಲವೆ ? ಇಷ್ಟ್ರ ರಾಜ್ಯಗಳೂ ಒಟ್ಟುಗೂಡಿದರೆ ವಿಜಯನಗರವನ್ನು ಧ್ವಂಸ ಮಾಡಬಹುದೆಂದು ನನಗೆ ಚೆನ್ನಾಗಿ ನಂಬಿಕೆ ಇದೆ. ಈ ಪ್ರಬಲರಾಜ್ಯವು ನಶಿಸಿದರೆ ಅದರಿಂದ ತಮಗೆ ಉಂಟಾಗುವ ಲಾಭಾಲಾಭಗಳನ್ನು ನಾನು ವಿವ ರಿಸಬೇಕಾದುದಿಲ್ಲ? ಈ ಮಾತುಗಳನ್ನು ಕೇಳಿ ಅದಿಲ್‌ಪಹನು ಬಗೆಬಗೆಯಾಗಿ ಯೋಚಿ ಸಲಾರಂಭಿಸಿದನು. ವಿಮರ್ಶನಾ ಸಮರ್ಥನಾದ ಆತನು ರಾಮಯಮಂತ್ರಿ ಯ ಮಾತುಗಳು ಮುಕ್ತವೆಂದು ಭಾವಿಸಿದನು. ಮದೀಯ ರಾಜ್ಯ ಗಳಲ್ಲಿ ಐಕಮತ್ಯವುಂಟಾದರಿಂದ ಬಹಳ ಸಂತೆ.ಇಷಪಟ್ಟನು. ಮಹ ಮೈ ದೀಯ ರಾಜ್ಯಗಳ ಪುರೋಭಿವೃದ್ಧಿಗೆ ಕಂಟಕಪ್ರಾಯವಾಗಿದ್ದ ವಿಜಯ ನಗರ ಸಾಮ್ರಾಜ್ಯವನ್ನು ಧ್ವಂಸವಾಡಿದರೆ, ತನ್ನ ಪ)ಖ್ಯಾತಿಯ ಅಭ್ಯು ದಯವೂ ಹೆಚ್ಚು ವುವು ಎಂದೂ, ಆ ಕಾಲದಲ್ಲಿ ವಿಜಯನಗರಕ್ಕೂ ಬಿಜಾ ಪುರಕ್ಕೂ ಸ್ನೇಹವಿದ್ದುದು ಒಂದು ಪ್ರಯೋಜನವೇ ಎಂದೂ ಭಾವಿಸಿದನು. ಇದ್ದುದಕ್ಕೆ ಇದ್ದ ಹಾಗೆಯೇ, ಇತರ ಮಹಮ್ಮದೀಯ ರಾಜ್ಯಗಳ ಸಹಾಯ ವನ್ನು ಪಡೆದು ವಿಜಯನಗರದಮೇಲೆ ಬಿದ್ದರೆ, ಆ ರಾಜ್ಯವು ನಾಶವಾಗದೇ ಇರಲಾರದೆಂದು ನಿರ್ಧರಿಸಿದನು. ಆಗ ರಾಮೆಯನನ್ನು ಕುರಿತು 6 ಮಂತ್ರಿ, ಶ್ರೇಷ್ಟರೇ, ನಿಮ್ಮ ಸಾಹಸಗಳನ್ನು ನೋಡಿ ಬಹಳ ಸಂತೋಷವಾಯಿತು. ನಾವುಗಳೆಲ್ಲರೂ ಸೇರಿ ವಿಜಯನಗರದ ರಾಜ್ಯವನ್ನು ಮುನ್ನೋಳಿ, ನಮಗೆ ಜಯವಾದರೆ ಕೃಷ್ಣದೇವರಾಯರು ನಿಮ್ಮಿಂದ ತೆಗೆದುಕೊಂಡಿರುವ ರಾಜ್ಯ ವನ್ನು ನಿಮ್ಮ ರಾಜಪುತ್ರರಿಗೆ ಅಗತ್ಯವಾಗಿ ಕೊಡುವೆವು. ಮಿಕ್ಕ ಭಾಗ ಗಳನ್ನು ಉಳಿದವರು ಹಂಚಿಕೊಳ್ಳಿ ಈ ವಿಷಯದಲ್ಲಿ ಮಿಕ್ಕೆ ರಾಜ್ಯ ಗಳ ಪ್ರತಿನಿಧಿಗಳ ಅಭಿಪ್ರಾಯವೇನು ? ೨” ಎಂದು ಹೇಳಿದನು.