ಪುಟ:ರಾಯಚೂರು ವಿಜಯ ಭಾಗ ೧ .djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಕರ್ಣಾಟಕ ಗ್ರಂಥಮಾಲೆ MMwwm ಮಹಮ್ಮದೀಯ ರಾಜ್ಯಗಳು ಪುನಃ ಬೇರ್ಪಟ್ಟು ಹೋದುವು. ಅದು ಹೇಗಾ ದರೂ ಆಗಲಿ, ಅನಂಗಸೇನೆಯು ನನಗೆ ದಕ್ಕಿದಂತೆಯೇ ಸರಿ. ಅವಳು ಸಂಪೂರ್ಣವಾಗಿ ನನಗೆ ವಶವಾದ ಮೇಲೆ ಆ ನೀಚನನ್ನು ಸೆರೆಯಲ್ಲಿಟ್ಟು ಕೊಲ್ಲಿಸುವೆನು ಎಂದು ಖಾನನು ಹೇಳಿದನು. ಇವರು ಹೀಗೆ ಮಾತನಾಡುತ್ತಿದ್ದಾಗ ಝಂಝಾ ಮಾರುತದಂತೆಯ ಬಿರುಗಾಳಿಯಿಂದ ಉಲ್ಲೋಲ ಕಲ್ಲೋಲವಾದ ಸಮುದ್ರದ ಘೋಪದಂತೆ ಯ ರಭಸವಾಗಿದ್ದ ಒಂದು ಧ್ವನಿಯು ಕೇಳಿಸಿತು. ಹಾಗೆಯೇ ಅದನ್ನು ಆಲಿಸಿ ಕೇಳುತ್ತಿರಲು ಆ ಧ್ವನಿಯು ಹತ್ತಿರಹತ್ತಿರಕ್ಕೆ ಬರುವಂತಿತ್ತು. ಅದನ್ನು ಕೇಳಿ ಪುರಜನರು ಭೀತರಾದರು, ದುರ್ಗರಕ್ಷಕ ಭಟರಲ್ಲಿ ಕೆಲ ವರು ದುರ್ಗದ್ವಾರವನ್ನು ಬಂಧಿಸಿ ತಮ್ಮ ತಮ್ಮ ಆಯುಧಗಳನ್ನು ಉಪ ಯೋಗಿಸುವುದಕ್ಕೆ ಸಿದ್ಧಪಡಿಸಿಕೊಳ್ಳುತ್ತಿದ್ದರು. ಒಬ್ಬರಿಬ್ಬರು ಭಟರು ಖಾನರ ಬಳಿಗೆ ಓಡುತ್ತಾ ಹೋಗಿ, “ ನಮ್ಮ ದುರ್ಗವನ್ನು ಮುತ್ತುವುದಕ್ಕೆ ಒಂದು ದೊಡ್ಡ ಸೈನ್ಯವು ಬರುತ್ತಿದೆ' ಎಂದು ಹೇಳಿದರು. ಆಗ ಬಾನನು ಜಗ್ಗನೆ ಎದ್ದು ದುರ್ಗದ ಗೋಪುರವನ್ನು ತಾನೇ ಹತ್ತಿ ನೋಡಲು, ಸೈನ್ಯವು ಕಂಡುಬಂತು. ಮೊದಲು ಅದು ತನ್ನ ಪ್ರಭುವಾದ ಆದಿಲ್‌ಪಹನ ಸೈನ್ಯ ವೆಂದು ಭಾವಿಸಿದನು. ಆದರೆ ಆಸೈನ್ಯದಲ್ಲಿ ಬಹಳ ಎತ್ತರವಾದ ಧ್ವಜವು ಕಾಣುತ್ತಿದ್ದ ಕಾರಣ ಆ ಸೈನ್ಯವು ವಿಜಯನಗರದಿಂದ ಬಂದಿರಬೇಕೆಂದು ನಿರ್ಧರಿಸಿದನು. ತನ್ನ ದುರ್ಗವನು ೩ ಶತ್ರುಗಳು ಮುತ್ತಿದ ಸಂಗತಿಯನ್ನು ತನ್ನ ಪ್ರಭುವಿಗೆ ತಿಳಿಸುವುದು ಒಳ್ಳೆಯದೆಂದು ಭಾವಿಸಿ, ಇಬ್ಬರು ಭಟ ರನ್ನು ಕರೆದು ಅವರ ಕೈಯಲ್ಲಿ ಎರಡು ಕಾಗದಗಳನ್ನು ಕೊಟ್ಟು ಬಿಜಾ ಪುರಕ್ಕೆ ಕಳುಸಿದನು. ಬಳಿಕ ಅವನು ಬಹಳ ಎಚ್ಚರಿಕೆಯಿಂದ ದುರ್ಗ ದಲ್ಲಿ ಎಲ್ಲೆಲ್ಲೂ ಸಂಚರಿಸುತ್ತಾ ಭಟರನ್ನು ಪ್ರೊತ್ಸಾಹಿಸುತ್ತಾ ಸುತ್ತು ತಿದ್ದನು. ಎಂತಹ ಸೈನ್ಯ ಬಂದರೂ ದುರ್ಗವನ್ನು ಹಿಡಿದುಕೊಳ್ಳ