ಕಾದುರುವಿಜಯ ಕಾಠ್ಯಗಳಲ್ಲಿ ಪ್ರವೃತ್ತರಾಗುವರೆಂದೂ ಕೆಲವರು ತಮ್ಮ ತಮ್ಮಲ್ಲೇ ಪಿಸು ಗುಟ್ಟಿಕೊಂಡರು. ಆಗ ರಾಮಯಮಂತ್ರಿಯು ಎದ್ದು “ ಮಂತ್ರಶ್ರೇಷ್ಠರೇ ! ನಿಮ್ಮ ಪ್ರತಿಭಾಪೂರ ತೇಜಸ್ಸಿನ ಮುಂದೆ ನಮ್ಮಂತಹವರ ಬುದ್ಧಿಯು ಮಿಣುಕು ಹುಳದ ಬೆಳಕಿನಂತೆ ಇರುವುದು, ಈ ಲೋಕದಲ್ಲಿ ನಿಮ್ಮ ಸಮನ ರಾದ ಬುದ್ಧಿಶಾಲಿಗಳಾಗಲಿ ನಿಮ್ಮ ಸದ್ಗುಣಗಳನ್ನು ಚೆನ್ನಾಗಿ ತಿಳಿದುಕೊಂಡಿ ರುವರಾಗಲಿ ಇಲ್ಲವೆಂದು ಧೈಯ್ಯದಿಂದ ಹೇಳಬಲ್ಲೆನು, ನಿಮ್ಮನ್ನು ಕೊಲ್ಲ ಬೇಕೆಂದೆಣಿಸಿ ಕೊಲ್ಲಲಾರದೇ ಹೋದೆನು, ಆದರೆ ನನ್ನನ್ನು ನೀವು ನಿಶ್ಚಯ ವಾಗಿಯ ಕೊಂದಿರುವಿರಿ, ನನ್ನ ಮನಸ್ಸಿನಲ್ಲಿ ನಾಡಿದ್ದ ಶತ್ರುತ್ವವನ್ನು ಬೇರು ಸಹಿತ ಕಿತ್ತು ನನ್ನನ್ನು ಬೇರೊಬ್ಬ ರಾಮಯಮಂತ್ರಿಯನ್ನಾಗಿ ಮಾಡಿರುವಿರಿ, ನನ್ನ ಕರೀರವು ನಿಮ್ಮ ಪಕವಾದರೂ ನನ್ನ ಮನಸ್ಸು ನಿಮಗೆ ಅಧೀನವಾಗಲಾರದು, ಆದುದರಿಂದ ನಿಮ್ಮ ಆಜ್ಞೆಯನ್ನು ಮಾರಬೇಕು ಗಿರುವುದು, ಮಂತ್ರಿತ್ವವನ್ನು ಮಾಡಬೇಕಾದರೆ ನಮ್ಮ ಪ್ರಭುಕುಟುಂಬದ ಸಮೀ೩'ದಲ್ಲೇ ಮಾಡಬೇಕಾಗಿತ್ತು, ನನ್ನ ಪ್ರಭುರಾಜ್ಯವನ್ನು ಪುನರುಜ್ಜಿ ವನ ಮಾಡಲಾರದೇ ಹೋದುದರಿಂದ ನನ್ನಂತಹವನಿಗೆ ವಾನಪ್ರಸ್ಥಾಶ್ರಮವೇ ಯೋಗ್ಯವಾದುದು ” ಎಂದು ಹೇಳಿದನು. ಈ ಮಾತುಗಳನ್ನು ತಿಮ್ಮರಸನು ಕೇಳಿ ಸಂತೋಷಿಸಿ ಅಲ್ಲಿದ್ದ ವಿಜಯಸಿಂಹನನ್ನು ನೋಡಿ ವೀರಶ್ರೇಷ್ಠನೇ ನೀನು ದೃಢತರರಾಜಭಕ್ತಿಯುತವಾಗಿ ನಮಗೆ ಅನೇಕ ಉಪಕಾರಗಳನ್ನು ಮಾಡಿ ರಣರಂಗದಲ್ಲಿ ಹಲವುವಿಧವಾಗಿ ಸಹಾಯವಾಗಿರುವ ನಿನಗೆ ನಮ್ಮ ವಕ ವಾಗಿರುವ ಮುಕ್ಕಾಂಬೆಯನ್ನು ಬಹುಮತಿಯಾಗಿ ರಾಯರು ಕೊಟ್ಟಿರುವರು. ಇನ್ನೂ ಒಂದು ವರವನ್ನು ಕೊಡುವವೆಂದು ಮಹಾಸ್ವಾಮಿಯವರ ಅಪ್ಪನ ಯಾಗಿರುವುದು, ಬೇಕಾದುದನ್ನು ಕೇಳಿಕೊಳ್ಳಬಹುದು' ಎಂದು ಹೇಳಿದನು. ಆಗ ವಿಜಯಸಿಂಹನು ತಿಮ್ಮರಸರನ್ನು ಕುರಿತು “ ಮಂತ್ರಿ ಶ್ರೇಷ್ಠರೇ! ತಾವುಮಾಡಿದ ಉಪಕಾರಕ್ಕಾಗಿ ಬಹಳ ಕೃತಜ್ಞನಾಗಿರುವನು,
ಪುಟ:ರಾಯಚೂರು ವಿಜಯ ಭಾಗ ೧ .djvu/೩೩೫
ಗೋಚರ