wwwmwwwxrwxrwx ಏಳನೆಯ ಪ್ರಕರಣ ಸಂಶಯಪಡುವುದು ಪಾಪಕರವಲ್ಲವೆ? ಆದುದರಿಂದ ಆತನ ಕೋರಿಕೆ ಯನ್ನು ನೆರವೇರಿಸುವುದು ನಿನ್ನ ಕರ್ತವ್ಯ " ಎಂದು ಪರಿಸತೊಡಗಿತು. ಸುಬುದ್ಧಿ-“ ವಿಜಯಸಿಂಹ ! C ಅತಿವಿನಯಂ ಧತಲಕ್ಷdo! ಎಂಬ ಲೋಕೋಕ್ಕಿಯನ್ನು ಜ್ಞಾಪಿಸಿಕೊ, ಪ್ರಹರೇಶ ರನು ಗೋಮುಖ ವ್ಯಾಘುನಂದೇ ತಿ೪, ಅವನ ಮಾತನ್ನು ನಂಬಿ ಅವನೊಡನೆ ಹೋದುದೇ ಆದರೆ ತಪ್ಪದೆ ಕೆಟ್ಟು ಹೋಗುವೆ ! ನೋಡಿಕೋ! ಹೀಗೆ ಜೇನುತುಪ್ಪದ ಮಾತುಗಳನ್ನಾಡಿ, ಮನೆಗೆ ಕರೆದುಕೊಂಡುಹೋಗಿ ಕಲ್ಲಿಸಿದರೆ ನೀನು ಏನು ಮಾಡುವೆ? ನೀನೇನೋ ಅಪ್ರತಿಮಪ್ರತಾಪಶಾಲಿಯೇ ಹೌದು, ಆದರೆ ಕಪಟದಮೇಲೆ ಪ್ರತಾಪವು ಕಂದುವುದೇ ? ನೀನು ಇಲ್ಲಿ ನಿಲ್ಲುವುದು ಸುರಕ್ಷಿತವಾಗಿದ್ದಿದ್ದರೆ, ಹಲವುಕಾಲದವರೆಗೂ ನಿನ್ನನ್ನು ನೋಡುವುದಕ್ಕೆ ಅವಕಾಶವೇ ಇಲ್ಲದಿದ್ದ ನಿನ್ನ ಪ್ರಿಯೆಯು ನಿನ್ನನ್ನು ಇಲ್ಲಿಯೇ ಉಳಿಸಿಕ ಳ್ಳದೆ, ಇಲ್ಲದ ಸಲ್ಲದ ಭಯಗಳನ್ನು ಕಲ್ಪಿಸಿಕೊಂಡು ನಿನ್ನನ್ನು ಹೀಗೆ ಕಳುಹಿಸಿಬಿಡುತ್ತಿದ್ದಳೇ ? ಪಹರೇಶ್ವರಪುತ್ರನು ಸ್ವಲ್ಪವೂ ವಿಶ್ವಾಸ ಪಾತ್ರನಲ್ಲ, ಬೆಣ್ಣೆ ಮಾತಿಗೆ ಬೆರಗಾಗಿ ಕೆಡಬೇಡ ” ಎಂದು ಸುಬುದ್ಧಿಯು ಅವನಿಗೆ ಬೋಧಿಸತೊಡಗಿತು. # “ ವಿಜಯಸಿಂಹ ! ಸುಬುದ್ದಿಯ ಮಾತುಗಳನ್ನು ಕೇಳಿ ಮೋಸಹೋ ಗಬೇಡ, ನಾನು ಹೇಳುವ ಮಾತುಮಾತಿಗೂ ಪ್ರತಿ ಹೇಳುವುದು ಸುಬುದ್ಧಿಯ ಸಭಾವ, ಪ್ರಹರೇಶ್ವರನು ಆಡಿದಮಾತುಗಳನ್ನು ಮತ್ತೊಂದುಬಾರಿ ಯೋಚಿಸಿನೋಡು, ಪಾಪ ! ಸ್ವಲ್ಪವಾದರೂ ಸಂಶಯಕ್ಕೆ ಅವಕಾಶವಿಲ್ಲ ವಲ್ಲಾ ! ಎಂತಹವನಾದರೂ ತನ್ನ ಪ್ರಾಣವನ್ನು ಎಂತಹ ಕಾಲದಲ್ಲಾದರೂ ಉಳಿಸಿಕೊಳ್ಳಲು ಯತ್ನಿಸುವನಲ್ಲವೆ? ಚಕ್ರವರ್ತಿಯವರಿಗೆ ಪ್ರೀತಿಪಾತ್ರ ನಾಗಿರುವ ನಿನ್ನನ್ನು ಒಂದುವೇಳೆ ಪ್ರಹರೇಕ್ಷರನಾಗಲಿ, ಅವನ ಕಡೆಯವ ರಾಗಲಿ ಕೊಂದರೆ, ಪ್ರಹರೇಶ್ವರನ ಗತಿಯೇನಾಗುವುದು, ಯೋಚಿಸಿನೋಡು. ಈಗಲೇ ಪಹರೇಕ್ಷರನು ಚಕ್ರವರ್ತಿಯವರ ಪಂಜರದ ಗಿಳಿಯಾಗಿರುವನು. ಹೀಗಿರುವಲ್ಲಿ ಪ್ರಬಲನೂ, ಬಂಧುವೂ, ಆಪ್ತ ಮಿತ್ರನ ಮಗನೂ ಆದ ನಿನಗೆ ದೊಹಚಿಂತೆಯನ್ನು ಮಾಡಿ ದೌರಾತ್ಮಕ್ಕಾಗಿ ಇಹಲೋಕದಲ್ಲಿ ರಾಜ ದಂಡನೆಯನ್ನೂ, ಮಿತ್ರಹಕ್ಕಾಗಿ ಪರಲೋಕದಲ್ಲಿ ಯಮದಂಡನೆ
ಪುಟ:ರಾಯಚೂರು ವಿಜಯ ಭಾಗ ೧ .djvu/೭೮
ಗೋಚರ