ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಆಕರ-ಪಠ್ಯ - ನಿರ್ವಹಣೆ / ೮೭

ಇದು ಯಕ್ಷಗಾನ ಕಲೆಯಲ್ಲಿ ಸ್ವತಸ್ಸಿದ್ದವಾಗಿರುವ ಸ್ಥಿತಿ. ಹಾಗಾಗಿ, ಹಿಂದೆ ಪ್ರಸ್ತಾಪಿಸಿದ ಪರಿಕರ ಸಾಮಗ್ರಿಗಳ ವಿಪುಲವಾದ ಬಳಕೆ ಇಲ್ಲಿ ಸಹಜ. ಜತೆಗೆ ಅದು ಪ್ರಧಾನ ಪಠ್ಯದ ಭಾಗವಾಗಿದ್ದು, ತಾನೇ ಒಂದು ಪಠ್ಯವಾಗುವ ಪ್ರಕ್ರಿಯೆಯನ್ನು ಸಾರ್ಥಕಗೊಳಿಸುತ್ತ ಹೋಗುತ್ತದೆ. ಇಲ್ಲಿ ವಸ್ತುತಃ ಯಾವ ಸಾಮಗ್ರಿಯೂ, ಯಾವ ಅನುಭವವೂ ಒದಗಬಹುದು. ಅರ್ಥಗಾರಿಕೆಯ ಬೆಳವಣಿಗೆಯನ್ನು ಗಮನಿಸಿದಾಗ ಈ ಅಂಶ ಸ್ಪಷ್ಟ ವಾಗುತ್ತದೆ. ಅಂತಹ ಬೆಳವಣಿಗೆಯ ಸಮಸ್ಯೆಗಳೂ, ಅರೆಕೊರೆಗಳೂ ಏನೇ ಇದ್ದರೂ, ಆಕರ ಸಮನ್ವಯದ ಸತತ ಪ್ರಕ್ರಿಯೆಯ ಅದ್ಭುತವನ್ನು ಅಲ್ಲಿ ಕಾಣಬಹುದು.
ಈ ಪ್ರಕ್ರಿಯೆಗೆ ಪುರಾಣ, ಕಾವ್ಯ ಮೊದಲಾದವಷ್ಟೇ ಅಲ್ಲದೆ, ದಾರ್ಶನಿಕ ಸಾಹಿತ್ಯವೂ, ದಾಸಸಾಹಿತ್ಯ, ವಚನಸಾಹಿತ್ಯ, ವಿವಿಧ ಧಾರ್ಮಿಕ ಚಳವಳಿಗಳು ಸಾಮಗ್ರಿ ಒದಗಿಸುವಂತೆ ಆಧುನಿಕ ಸಾಹಿತ್ಯವೂ, ವಿಶೇಷತಃ ಪುರಾಣವಿಮರ್ಶೆ, ವಿವೇಚನೆಗಳೂ ಒದಗಿ ಬರುತ್ತವೆ. ಪ್ರಾಚೀನ ವಸ್ತುಗಳ ಆಧುನಿಕ ಮಹಾಕಾವ್ಯಗಳು (ಕುವೆಂಪುರವರ ರಾಮಾಯಣದರ್ಶನಂ, .ವಿ. ಕೃ. ಗೋಕಾಕರ ಭಾರತ ಸಿಂಧು ರಶ್ಮಿ), ಕಾದಂಬರಿಗಳು (ಪರಶುರಾಮ, ಮಹಾಬ್ರಾಹ್ಮಣ, ಪರ್ವ), ಯಯಾತಿ, ಸತ್ಯಕಾಮರ ಕಾದಂಬರಿಗಳು ಮೊದಲಾದವು ಈಗಾಗಲೇ ಬಳಕೆ ಯಾಗಿದ್ದು, ಅವನ್ನು ಇನ್ನಷ್ಟು ದುಡಿಸಿಕೊಳ್ಳಲು ಸಾಧ್ಯವಿದೆ. ಆದರೆ, ಸಂವಾದದ ಆಧಾರವಾಗುವ ಪ್ರಶ್ನೆ ಬಂದಾಗ, ರಾಮಾಯಣದರ್ಶನದ, ಪರ್ವದಂತಹ ಕೃತಿಗಳ ವಿವರ ಇನ್ನೂ ಅಂಗೀಕೃತವಾಗಿಲ್ಲ. ಅವು ಪರಂಪರೆಯ ಭಾಗವಾಗಿ ಸೇರುವ ಕಾಲ ಬಂದಾಗ, ಆ ಹಂತವೂ ಬರಲಿದೆ.
ಆಧುನಿಕ ಪ್ರಸಂಗ ಸಾಹಿತ್ಯವು ಪೌರಾಣಿಕ ವಸ್ತುವಿನಂತೆ, ನಿಶ್ಚಿತ ಕಾಲದ ಬಂಧನ (ಎಂದರೆ, ಇಂತಹ ಪೌರಾಣಿಕ ಕತೆಯಲ್ಲಿ ಅದರ ನಂತರದ ವಿಚಾರ ಬರಬಾರದು ಎಂಬಂತಹ)ಕ್ಕೆ ಒಳಗಾಗದಿರುವುದರಿಂದ ಯಕ್ಷಗಾನ ಸಂಬಂಧಿಯಾದ ಸಮಸ್ತ ಕಥಾಪ್ರಪಂಚ, ಆಧುನಿಕ ಪ್ರಸಂಗಗಳ ಅರ್ಥಗಾರಿಕೆಗೆ ಆಕರವಾಗುತ್ತಿರುವ ವಿದ್ಯಮಾನ ಗಮ ನಾರ್ಹವಾಗಿದೆ. ತುಳುಭಾಷೆಯ ಅರ್ಥಗಾರಿಕೆಯು, ಭಾರತ ರಾಮಾಯಣಾದಿ ಸಾಮಗ್ರಿಯ ಜತೆಗೆ, ತುಳು ಬದುಕಿನ ಅನುಭವ ಮತ್ತು ಲೌಕಿಕ ಸ್ವರೂಪದ ಸಾಮಗ್ರಿಗಳನ್ನು ಹೆಚ್ಚು ಬಳಸುತ್ತಿದೆ. ಇಲ್ಲಿ