ಪುಟ:ವಿದ್ಯಾರ್ಥಿ ಕರಭೂಷಣ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಚ ದ ೨ ೧೨೫ ಧೀನವಾಗುವುವು. ಮಹಾ ಕಾವ್ಯಗಳನ್ನು ಬರೆಯತಕ್ಕವರು ಹೇಗೆ ಸಾವ ಧಾನವಾಗಿ ಕೆಲಸಮಾಡಿ ಆಚಂದ್ರಾರ್ಕವಾದ ಕೀರ್ತಿಯನ್ನು ಪಡೆಯು ವರೋ, ಹಾಗೆಯೇ ಈ ಪ್ರಪಂಚದಲ್ಲರತಕ್ಕೆ ಲಕ್ಷಾಂತರ ವೃತ್ತಿಗಳಲ್ಲಿ ಯಾವುದನ್ನ ವಲಂಬಿಸಿದಾಗ ಅದರಲ್ಲಿ ಬೇಕರನ್ನು ಹೊಂದದೆ ಸಾವಧಾನ ವಾಗಿಯೂ ಶ್ರದ್ಧೆಯಿಂದ ಕೆಲಸಮಾಡಿ ಆತುರಕ್ಕೆ ಅವಕಾಶ ಕೊಡ ದಿರತಕ್ಕವರು, ಆ ಕೆಲಸದಲ್ಲಿ ಪರಮಾವಧಿಯಾದ ಶಕ್ತಿಯನ್ನು ಹೊಂದಿ, ದಿಗಂತವಿಶ್ರಾಂತವಾಗೆ ಕ೦ಮಹಿಮೆಯನ್ನೂ ಅಸಾಧಾರಣವಾದ ಸಂವತ್ತನ್ನೂ ಪಡೆಯುವರು ಧರ್ಮಬೋಧನೆಯಲ್ಲಿ ವ್ಯಾಸ ಮೊದಲಾ ದವರೂ, ರಾಜ್ಯಭಾರಕ್ರಮದಲ್ಲಿ ರ್ಭಷ್ಟ ಮೊದಲಾದವರೂ, ರಾಜ್ಯ ತಂತ್ರ ಗಳಲ್ಲಿ ಚಾಣಕ್ಯ ಮೊದಲಾದವ, ಮಹಾಕವಿಗಳಲ್ಲಿ ಕಾಳಿದಾಸ ಮೊದಲಾದವರೂ, ಸಕಲ ಶಾಸ್ತ್ರಿ.ಶಾರದರಲ್ಲಿ ಜೈಮಿನಿ ಮೊದಲಾದವರೂ, ರಾಜರ್ಷಿಗಳಲ್ಲಿ ಜನಕ ಮೊದಲಾದವು ಅದ್ವಿತೀಯರಾಗುವುದಕ್ಕೆ, ತಾವು ಹಿಡಿದ ಕೆಲಸಗಳಲ್ಲಿ ಅವರು ತೋರಿಸಿದ ಶ್ರದ್ದೆಯ, ಸಾವಧಾನ ವಾಗಿ ಕೆಲಸಮಾಡತಕ್ಕೆ ಶಕ್ತಿಯ ಮುಖ್ಯ ಕಾರಣಗಳು. ಈ ಶಕ್ತಿ ಗಳನ್ನು ಸಂಪಾದಿಸಿಕೊಳ್ಳತಕ್ಕವರು, ಅವರಂತೆಯೇ ಅತ್ಯುತ್ತಮವಾದ ಸ್ಥಿತಿಗೆ ಬರುವುದರಲ್ಲಿ ಯಾವ ಸಂದೇಹವೂ ಇರುವುದಿಲ್ಲ. ಪಾಶ್ಚಾತ್ಯರಲ್ಲಿ ಯೂರಿಪಿಡೀಸ್ ಎಂಬ ಮಹಾಕವಿಯ, ರ್ಚಾರ್ಸ ಎಂಬ ಮಹಾ ಕವಿಯೂ, ಅಮೆರಿಕಾ ಖಂಡದವರಲ್ಲಿ ಎಡಿರ್ಸ ಎಂಬ ಅದ್ವಿತೀಯನಾದ ಶಾಸ್ತ್ರಜ್ಞನೂ, ಅನನ್ಯಸಾಧಾರಣವಾದ ಐಕಾಗ್ರದಿಂದಲೂ ಶ್ರದ್ದೆ ಯಿಂದಲೂ ಶಾಶ್ವತವಾದ ಕೀರ್ತಿಯನ್ನು ಸಂಪಾದಿಸಿರುವರು. ಒಬ್ಬ ನಿ