೧೩೨ ವಿದ್ಯಾರ್ಥಿ ಕರಭೂಷಣ ಮಾಡಿದವನು ಯಾವ ಲಾಭದ ಮೇಲೆ ದೃಷ್ಟಿಯಿಟ್ಟು ಸ್ತುತಿಸಿರುವನೋಅದನ್ನು ಪರೀಕ್ಷಿಸಬೇಕು. ಆ ಲಾಭಕ್ಕೆ ಅವನು ಅರ್ಹನೇ ಅಲ್ಲವೇ ಎಂಬುದನ್ನು ನಿಷ್ಕರ್ಷಿಸಬೇಕು, ಅದಕ್ಕೆ ಅವನು ಅರ್ಹನಾಗಿದ್ದರೆ, ಅವನು ಸ್ತೋತ್ರಮಾಡಿದ್ದ ಕ್ಕೋಸ್ಕರ ಕೋಪಮಾಡಿಕೊಳ್ಳದೆ, ಅವನ ಕೆಲಸವನ್ನು ಮಾಡಿಕೊಡಬೇಕು ; ಅವನು ಅನರ್ಹನಾಗಿದ್ದರೆ, ತಾನು ಆ ಕೆಲಸವನ್ನು ಮಾಡುವುದಿಲ್ಲ ಎಂಬುದಾಗಿ ಖಂಡಿತವಾಗಿ ಹೇಳಿಬಿಡ ಬೇಕು, ಎಲ್ಲ ಕೆಲಸಗಳಲ್ಲಿಯ, ಸಮಗ್ರವಾಗಿ ಪೂರಾಸರಗಳನ್ನು ಯೋಚಿಸಿ ಮಾಡುವುದು ಅತ್ಯಾವಶ್ಯಕವು, ಹೀಗೆ ಯೋಚನೆಮಾಡುವುದ ರಲ್ಲಿ, ಬೇಜಾರನ್ನು ಹೊಂದಬಾರದು. ಒಬ್ಬ ಗಡಿಯಾರುಪೇರಿಮಾಡುವವನ ಬಳಿಗೆ, ಅತ್ಯುತ್ಕೃಷ್ಟವಾದ ಒಂದು ಗಡಿಯಾರವು ಸೇರಿಗಾಗಿ ತರಲ್ಪಟ್ಟಿತು. ಅದು ಬಹಳಬೆಲೆ ಯುಳ್ಳುದಾಗಿದ್ದಿತು , ಕಾಲವನ್ನು ಮಾತ್ರ ಕೃಪ್ತವಾಗಿ ತೋರಿಸುತ್ತಿರ ಅಲ್ಲ, ಗಡಿಯಾರುಪೇರಿಮಾಡತಕ್ಕವನು, ಅದನ್ನು ಇಪ್ಪತ್ತು ಮುವ್ವತ್ತು ಸಲ ಬಿಚ್ಚಿ, ಪ್ರತಿಯೊಂದುಸಲವೂ ಚೆಾಗರೂಕತೆಯಿಂದ ಜೋಡಿಸಿದನು. ಯಾವ ಭಾಗದಲ್ಲಿಯೂ ಯಾವ ನ್ಯೂನತೆಯ ಇರುವಂತೆ ಅವನಿಗೆ ಕಾಣಬರಲಿಲ್ಲ, ಇದಕ್ಕೇನು ಕಾರಣವಿರಬಹುದೆಂದು, ಅವನು ಏಕಾಗ್ರ ಚಿತ್ತದಿಂದ ಪರಾಲೋಚಿಸಿದನು. ಇಂಧ ಒಳ್ಳೆಯ ಗಡಿಯಾರವು ನಡೆ ಯುವುದರಲ್ಲಿ ವ್ಯತ್ಯಾಸ ಬರಬೇಕಾದರೆ, ಉಕ್ಕಿನ ೩ಂಗು- ಅಧವಾ ತಂತಿಯು ತನ್ನ ಕೆಲಸವನ್ನು ಸರಿಯಾಗಿ ಮಾಡುವುದಕ್ಕೆ ಏನೋ ಒಂದ ಪ್ರತಿಬಂಧಕ ಪಿರಬಹುದೆಂದು, ಅವನ ಮನಸ್ಸಿಗೆ ತೋರಿತು. ಅದನ್ನು
ಪುಟ:ವಿದ್ಯಾರ್ಥಿ ಕರಭೂಷಣ.djvu/೧೪೦
ಗೋಚರ