ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ೧೫೩ ಸ್ವಶಕ್ತಿಯಿಂದಲೂ ಸ್ವಕೀಯವಾದ ಚಿಂತನೆಯಿಂದಲೂ ಪರಾಲೋಚಿಸಿ ವಿಷಯಗಳ ಪೂರಾಸರಗಳನ್ನು ಗೊತ್ತು ಮಾಡಿಕೊಳ್ಳುವುದಕ್ಕೆ, ಏಕಾಂತ ವಾಗಿ ಏಕಾಗ್ರದಿಂದ ಯೋಚನೆಮಾಡುವುದು ಅತ್ಯಾವಶ್ಯಕವು. ಇದಕ್ಕೆ ಪ್ರತಿಬಂಧಕವನ್ನುಂಟುಮಾಡಿಕೊಳ್ಳಬಾರದು ಹಾಗೆ ಉಂಟುಮಾಡಿ ಕೊಂ ಡರೆ, ವಿದ್ಯೆಯೆಂದಿಗೂ ಸ್ವಾಧೀನವಾಗುವುದಿಲ್ಲ. ಕೆಲವುಜನ ವಿದ್ಯಾರ್ಥಿಗಳು, ಪಾರಗಳನ್ನು ಗಟ್ಟಿ ಯಾಗಿ ಓದು ತಾರೆ ಹೀಗೆ ಓದುವುದು, ಶಬ್ದಗಳ ಉಚ್ಚಾರಣೆಗೆ ಸಹಾಯವಾದರೂ ಆಗಬಹುದು , ಆದರೆ, ವಿಷಯಜ್ಞಾನಕ್ಕೂ ತತ್ವಾರ್ಧ ಗ್ರಹಣ ಕ್ಕೂ, ಗಟ್ಟಿಯಾಗಿ ಓದುವುದೊಂದು ಮಾತ್ರವೇ ಸಾಲದು, ಚಿಂತನೆಯ ಕೂಡ ಆವಶ್ಯಕವು ಅನೇಕರು, ಗಟ್ಟಿಯಾಗಿ ಓದುತ್ತ, ಪುಸ್ತಕದಮೇಲೆ ದೃಷ್ಟಿ ಯನ್ನಿಟ್ಟು, ನಾಲಗೆಗೆ ಕೆಲಸವನ್ನು ಕೊಟ್ಟು, ಮನಸ್ಸು ಮಾತ್ರ ವಿಷಯಾಂ ತರಗಳಿಗೆ ಹೋಗುವಂತೆ ಮಾಡಿ ಕೊಳ್ಳುವರು. ಅಂಧವರ ವ್ಯಾಸಂಗವು ಪರಿಪೂರ್ಣವಾಗುವುದಿಲ್ಲ, ಗಟ್ಟಿಯಾಗಿ ಓದತಕ್ಕವರಲ್ಲಿ ಪ್ರಾಯಕವಾಗಿ ಏಕಾಗ್ರಚಿತ್ರವುಳ್ಳವರು ಅಪೂರ್ವ ವಾಚನಶಕ್ತಿಯುಂಟಾಗುವುದಕ್ಕೆ ಗಟ್ಟಿಯಾಗಿ ಓದುವುದು ಆವಶ್ಯಕ ; ಆದರೆ, ವಿಷಯಗ್ರಹಣವು ಗಟ್ಟಿ ಯಾಗಿ ಓದುವುದೊಂದರಿಂದ ಮಾತ್ರವೇ ಉಂಟಾಗುವುದಿಲ್ಲ, ವಿಚಾರ ಪೂರ್ವಕವಾಗಿ ಚಿಂತನೆ ಮಾಡಲ್ಪಟ್ಟ ಹೊರತು, ಕೂಲಂಕಷವಾಗಿ ವಸ್ತು ತತ್ವ ಗೊತ್ತಾಗುವುದಿಲ್ಲ, ರಾಜತಂತ್ರ ವಿಶಾರದರಾದ ಜಯಶಾಲಿಗಳು, ತಾವು ಜಯಿಸಿದ ದೇಶಗಳ ರಕ್ಷಣೆಗೆ ಸರಿಯಾದ ಏರ್ಪಾಡುಗಳನ್ನು ಮಾಡಿ- ಅವುಗಳಿಗೆ ಚ್ಯುತಿಯೇನೂ ಬಾರದಂತೆ ಏರ್ಪಡಿಸುವವರೆಗೂ, ಬೇರೆ 20