ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ವಿದ್ಯಾರ್ಥಿ ಕರಭೂಷಣ MMMmmmmmmmmmmmm ದೇಶಗಳನ್ನು ಜಯಿಸಲು ಪ್ರಯತ್ನ ಮಾಡುವುದಿಲ್ಲ, ವಿದ್ಯಾಭ್ಯಾಸವೂ ಕೂಡ ದಿಗ್ವಿಜಯಕ್ಕೆ ಸಮಾನವಾದುದು, ವಿದ್ಯಾರ್ಥಿಗಳು, ತಾವು ಓದಿದ ವಿಷಯಗಳನ್ನು ಚೆನ್ನಾಗಿ ಚಿಂತನೆಮಾಡಿ ಸ್ವಾಧೀನ ಪಡಿಸಿಕೊಂಡು, ಶಲಾಕಾಪರೀಕ್ಷೆಯನ್ನು ಮಾಡಿದರೂ ಅದರಲ್ಲಿ ತಪ್ಪದಿರುವಂತೆ ಮಾಡಿ ಕೊಂಡು, ಅನಂತರ ಮುಂದಕ್ಕೆ ಹೋಗಬೇಕು, ಹಾಗಿಲ್ಲದೆ ಉಪರಿಪ್ಲವ ವಾಗಿ ವ್ಯಾಸಂಗಮಾಡತಕ್ಕವರು, ಒಳ್ಳೆಯ ವಿದ್ಯಾರ್ಥಿಗಳಾಗುವುದಿಲ್ಲ. ಅಂಧವರು ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಕಷ್ಟ, ಅವರು ವಂಡಿತ ರಾಗುವ ಸಂಭವವೇ ಇರುವುದಿಲ್ಲ. ಈ ವಿಷಯಕ್ಕೆ ಸಂಪೂರ್ಣವಾದ ಗಮನವು ಕೊಡಲ್ಪಡಬೇಕು. ಚೆನ್ನಾಗಿ ಕಲಿಯಲ್ಪಟ್ಟ ಒಂದು ವಿದ್ಯೆಯ ಕೂಲಂಕಷವಾಗಿ ತಿಳಿದುಕೊಳ್ಳಲ್ಪಟ್ಟ ಒಂದು ಕೆಲಸವೂ, ನೂರಾರು ವಿದ್ಯೆ ಗಳಿಗಿಂತಲೂ ನೂರಾರು ಕೆಲಸಗಳಿಗಿಂತಲೂ ವಿಶೇಷ ಪ್ರಯೋಜನಕಾ ರಿಯಾಗುವುವು. ಇದನ್ನು ಪರಾಲೋಚಿಸಿ, ಎಲ್ಲ ವಿದ್ಯಾರ್ಥಿಗಳ ಒಂದೊಂದನ್ನಾದರೂ ಕೂಲಂಕಷವಾಗಿ ತಿಳಿದುಕೊಳ್ಳುವುದು ಅತ್ಯಂತ ಆವಶ್ಯಕವು. ವ್ಯಾಸಂಗಮಾಡತಕ್ಕವರು, ಆತುರವುಳ್ಳವರಾಗಬಾರದು ; ಅನೇಕ ಗ್ರಂಧಗಳನ್ನು ಒಂದೇ ಆವೃತ್ತಿ ಸ್ವಾಧೀನಪಡಿಸಿಕೊಳ್ಳಬೇಕೆಂದು, ಆತುರ ದಿಂದ ಪ್ರವರ್ತಿಸಬಾರದು ; ಸಾವಧಾನವಾಗಿ ವ್ಯಾಸಂಗಕ್ಕೆ ಉಪಕ್ರಮ ಮಾಡಬೇಕು, ಪ್ರತಿಯೊಂದು ಶಬ್ದ ಕ್ಕೂ ಪ್ರತಿಯೊಂದು ವಾಕ್ಯಕ್ಕೂ ಸರಿಯಾದ ಅರ್ಥವಾದ ಹೊರತ್ತು, ಮುಂದಕ್ಕೆ ಹೊರಡಬಾರದು. ಹೀಗೆ ಮಾಡುವುದರಿಂದ, ಆರಂಭದಲ್ಲಿ ವ್ಯಾಸಂಗವು ಬಹಳ ಸ್ವಲ್ಪವಾಗಿರುವಂತೆ