ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ೧೫೫ ಕಾಣಬಹುದು ; ಕ್ರಮಕ್ರಮವಾಗಿ ವ್ಯಾಸಂಗವು ವಿಶೇಷವಾಗಿ ನಡೆಯು ವುದಕ್ಕೆ ಇದು ಅತ್ಯಂತಸಾಧಕವಾಗುವುದು. ಹೀಗೆ ವ್ಯಾಸಂಗಮಾಡತಕ್ಕ ವರು, ಬಹು ಸ್ವಲ್ಪ ಕಾಲದಲ್ಲಿಯೇ, ಪಾಠಕರ ಸಹಾಯವೂ ಇಲ್ಲದೆ ಸ್ವಶಕ್ತಿಯಿಂದ ವ್ಯಾಸಂಗಮಾಡುವುದಕ್ಕೆ ಅರ್ಹತೆಯನ್ನು ಸಂಪಾದಿಸಿ ಕೊಳ್ಳುವರು. ಈ ಅರ್ಹತೆ ಬರಬೇಕಾದರೆ, ಆದಿಭಾಗದಲ್ಲುಂಟಾಗತಕ್ಕ ಬೇಸರಿಕೆಯನ್ನು ಗೆಲ್ಲಬೇಕು, ಈ ಬೇಸರು ಹೋಗುವವರೆಗೂ ಹಿಂದೆಗೆ ಯದೆ ವ್ಯಾಸಂಗಮಾಡತಕ್ಕವರು, ಶೀಘ್ರದಲ್ಲಿಯೇ ಆ ಜುಗುಪ್ಪೆಯನ್ನು ಜಯಿಸುವರು. ವಿಷಯಗಳು ತಿಳಿದಕೂಡಲೆ, ವ್ಯಾಸಂಗದಲ್ಲಿ ಸಂತೋಷ ಹುಟ್ಟುವುದು ; ತರುವಾಯ ಆ ವ್ಯಾಸಂಗವನ್ನು ಬಿಡುವುದೇ ಕಷ್ಟವಾಗು ವುದು ; ಅನಂತರ ಲೀಲೆಯಿಂದ ಪಾಂಡಿತ್ಯವು ಲಭ್ಯವಾಗುವುದು, ಚೆನ್ನಾಗಿ ಇಲಿಯಲ್ಪಟ್ಟ ಒಂದು ಪಾಠವೂ, ಚೆನ್ನಾಗಿ ಜೀರ್ಣಿಸಿಕೊಳ್ಳಲ್ಪಟ್ಟ ಒಂದು ಗ್ರಂಧವೂ, ಕೂಲಂಕಷವಾಗಿ ತಿಳಿದುಕೊಳ್ಳಲ್ಪಡದಿರತಕ್ಕ ನೂರಾರು ಪಾರಗಳಿಗಿಂತಲೂ ಸಾವಿರಾರು ಗ್ರಂಧಗಳಿಗಿಂತಲೂ ಹೆಚ್ಚು ಪ್ರಯೋಜನ ವನ್ನುಂಟುಮಾಡುವುವು. ಹೃದ್ಗತವಾದ ವಿದ್ಯೆಯು ಬೇಕಾದಾಗ ಉಪ ಯೋಗಿಸುವುದಕ್ಕೆ ಅನುಕೂಲವಾಗುವುದು, ಸೇವಿಂಗ್ಸ್ ಬ್ಯಾಂಕಿನಲ್ಲಿಟ್ಟಿ ರತಕ್ಕ ಹಣವನ್ನು ಬೇಕಾದಾಗ ಹೇಗೆ ಉಪಯೋಗಿಸಿಕೊಳ್ಳಬಹುದೋ, ಹಾಗೆ ಸಮಗ್ರವಾಗಿ ವ್ಯಾಸಂಗಮಾಡಲ್ಪಟ್ಟ ಪಾರಗಳೂ ಗ್ರಂಧಗಳೂ ಉಪಯೋಗಕ್ಕೆ ಬರುವುವು, ಸ್ವಪ್ನದಲ್ಲಿ ಕಂಡ ಹಣದ ಗಂಟು, ಚೆನ್ನಾಗಿ ಗಟ್ಟಿಮಾಡಲ್ಪಡದಿರತಕ್ಕ ಪಾರ, ಇವೆರಡೂ ಸಮವಾದುವುಗಳು ; ಇವೆ ರಡೂ ಕೆಲಸಕ್ಕೊದಗುವುದಿಲ್ಲ. ವಿದ್ಯಾರ್ಥಿಗಳು ಈ ವಿಷಯವನ್ನು