ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ಕರಭೂಷಣ ಚೆನ್ನಾಗಿ ಮನಸ್ಸಿನಲ್ಲಿಟ್ಟು ಕೊಂಡಿರಬೇಕು. ಉದಾಸೀನವಾದ ವ್ಯಾಸಂಗ ಕ್ಕಿಂತ, ವ್ಯಾಸಂಗಮಾಡದಿರುವುದೇ ಉತ್ತಮ. ಕಷ್ಟ ಪಟ್ಟು ವ್ಯಾಸಂಗ ಮಾಡುವುದನ್ನು ಅಭ್ಯಾಸಮಾಡಬೇಕು, ಆದಿಭಾಗದಲ್ಲಿ, ಸಾಮಾನ್ಯ ವಾದ ಕೆಲಸವೂ ಕೂಡ ಕಷ್ಟವಾಗಿ ತೋರುವುದು ಅಭ್ಯಾಸವಾದ ಹಾಗೆಲ್ಲ, ಕಷ್ಟ ತೋರುವುದಿಲ್ಲ. ವ್ಯಾಸಂಗದಮೇಲೆ ಮನಸ್ಸಿಡದಿದ್ದರೆ ಅದು ಕಷ್ಟವಾಗಿ ಪರಿಣಮಿಸುವುದು, ವ್ಯಾಸಂಗವು ತೃಪ್ತಿಕರವಾಗಿ ಆಗಬೇಕಾದರೆ, ದೇಹಸ್ಥಿತಿಯು ಅನುಕೂಲವಾಗಿರಬೇಕು ; ಮನಸ್ಸಿನ ಸ್ಥಿತಿಯ ಅನುಕೂಲವಾಗಿರಬೇಕು, ಕಾಲಸ್ಸಿತಿಯಲ್ಲಿಯ ಆಹಾರ ವಿಹಾರಗಳಲ್ಲಿಯ ವ್ಯತ್ಯಾಸಗಳು, ತಾಪತ್ರಯಗಳು, ಇವುಗಳೆಲ್ಲ ಸರಿ ಯಾದ ವ್ಯಾಸಂಗಕ್ಕೆ ಪ್ರತಿಬಂಧಕ ಸಾಮಗ್ರಿಗಳಾಗಿ ಪರಿಣಮಿಸುವುವು ಕೂಡಿದಮಟ್ಟಿಗೂ ಈ ಪ್ರತಿಬಂಧಕಗಳಿಗೆ ಅವಕಾಶವನ್ನು ಕಡಮೆಮಾಡಿ ಕೊಳ್ಳಬೇಕು. ಮನಃಪೂರ್ವಕವಾಗಿ ವ್ಯಾಸಂಗಮಾಡಿದ ಹೊರತು ವ್ಯಾಸಂಗವು ಫಲಕಾರಿಯಾಗುವುದಿಲ್ಲವಾದುದರಿಂದ ವ್ಯಾಸಂಗಮಾಡ ತಕ್ಕ ಕಾಲದಲ್ಲಿ ಇತರವಾದ ಯಾವ ವಿಷಯಗಳಿಗೂ ಮನಸ್ಸು ಹೋಗ ದಂತೆ ಮಾಡಿಕೊಳ್ಳು ವದಾವಶ್ಯಕವೆಂದು, ವಿದ್ಯುಚ್ಛಕ್ತಿಯನ್ನು ಕಂಡು ಹಿಡಿದ ಬೆಂಜರ್ಮಿ ರ್ಫಾರ್ಕ್ಸಿರವರೂ, ಸಿದ್ದಾಂತಿಗಳಲ್ಲಿ ಅಗ್ರಗಣ್ಯರಾದ ನ್ಯೂರ್ಟ ರವರ, ನ್ಯಾಯಾಧಿಪತಿಗಳಲ್ಲಿ ಅಗ್ರಗಣ್ಯರಾದ ಬ್ರಹಂರವರೂ ಹೇಳಿರುತ್ತಾರೆ. ಪ್ರೆಸಿಡೆಂಟ್‌ ಡೌಟ್‌ರವರಿಗೆ, ಕಣ್ಣುಗಳೆರಡೂ ಹೋದಮೇಲೆ, ಉದ್ದಿ ಷ್ಟವಾದ ಕೆಲಸಗಳ ಪೂರಾಸರಗಳನ್ನು ಯೋಚಿಸುವುದರಲ್ಲಿ ಮನಸ್ಸು