ವಿಷಯಕ್ಕೆ ಹೋಗು

ಪುಟ:ವಿದ್ಯಾರ್ಥಿ ಕರಭೂಷಣ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ವಿದ್ಯಾರ್ಥಿ ಕರಭೂಷಣ ತ ಅಮೂಲ್ಯವಾದ ಗಣಿಗಳನ್ನು ಹೋಲುವವ, ರತ್ನಗಳನ್ನು ಅಪೇಕ್ಷಿಸಿ ತಕ್ಕವರು ಹೇಗೆ ಪಾತಾಳದವರೆಗೂ ಅಗೆದು ಶೋಧಿಸಿ ರತ್ನಗಳನ್ನು ತೆಗೆದು ಶಿರೋಮಣಿಗಳನ್ನು ಮಾಡಿ ಉಪಯೋಗಿಸಿಕೊಳ್ಳುವರೋ, ಹಾಗೆಯೇ ಶಬ್ದ ರೂಪವಾಗಿಯೂ ವಾಕ್ಯರೂಪವಾಗಿಯೂ ಅಭಿಪ್ರಾಯ ರೂಪವಾಗಿಯೂ ಇರುವ ಮಹಾಕವಿಸ್ಸಸೀತವಾದ ರತ್ನಗಳು ಬೇಚಾರಿ ಲ್ಲದೆ ಮಾಡಲ್ಪಟ್ಟ ವ್ಯಾಸಂಗದಿಂದಲೂ ಶೋಧನೆಯಿಂದಲೂ ನಿರಂತರವಾದ ಪಾರಾಯಣದಿಂದಲೂ ಸ್ವಾಧೀನವಾಗುವುವು, ಶೋಧನೆಯ ಶಕ್ತಿ ಕಡಮೆಯಾಗಿದ್ದಾಗ, ನಿರಂತರವಾಗಿ ಮಹಾ ಕಾವ್ಯಗಳನ್ನು ಸಾರಾ ಯಣಮಾಡತಕ್ಕ ಜನಗಳ ವಾ ಕ್ಯೂ ಕೂಡ ಸಂಸ್ಕರಿಸಲ್ಪಟ್ಟು, ಹಾಗೆ ವ್ಯಾಸಂಗಮಾಡದಿರತಕ್ಕವರ ವಾಕ್ಕಿಗಿಂತ ಅತಿ ವಿಶೇಷವಾಗಿ ಗಂಭೀರ ಸ್ಥಿತಿಗೆ ಬರುತ್ತದೆ. ಇದಲ್ಲದೆ ಇನ್ನೊಂದು ಅಸಾಧಾರಣವಾದ ಪ್ರಯೋ ಜನವು, ಇಂಧ ಗ್ರಂಧಗಳ ಅವಲೋಕನದಿಂದ ಲಭ್ಯವಾಗುವುದು ಮಹಾ ಕವಿಗಳಿಂದ ರಚಿಸಲ್ಪಟ್ಟ ಗ್ರಂಧಗಳಲ್ಲಿ, ಪ್ರತಿಯೊಂದು ವಾಕ್ಯವೂ ಧರ್ಮ ಪ್ರತಿಪಾದಕವಾಗಿರುವುದು, ವಾಲ್ಮೀಕಿಯಿಂದ ಬರೆಯಲ್ಪಟ್ಟ ಶ್ರೀಮದ್ರಾ ಮಾಯಣವೇ ಇದಕ್ಕೆ ಉದಾಹರಣೆ ಪ್ರಕ್ಷಿಪ್ರವಾದ ಕೆಲವು ವಿಷಯ ಗಳನ್ನು ಬಿಟ್ಟರೆ, ಈ ಗ್ರಂಧವು ಮೊದಲಿನಿಂದ ಕೊನೆಯವರೆಗೂ ಧರ್ಮ ಪುಂಜವಾಗಿರುವುದು. ಶ್ರೀರಾಮನ ಚರಿತ್ರೆಯನ್ನು ಪ್ರತಿನಿತ್ಯವೂ ಪಾರಾ ಯಣಮಾಡತಕ್ಕವರು, ಮನೋವಾಕ್ಕರಗಳಲ್ಲಿ ಪರಿಶುದ್ಧರಾಗುವರು. ಪ್ರಪಂಚಕ್ಕೆ ಸಂಬಂಧಪಟ್ಟ ಸಕಲ ವ್ಯಾಪಾರಗಳಲ್ಲಿಯ-ಸದಿಷ್ಟಾರ್ಧ ಪ್ರಾಪ್ತಿಗೆ ಸತ್ಸಂಕಲ್ಪಗಳೂ ಸತ್ಯವಾದ ಮಾತೂ ಸತ್ಕಮ್ಮಗಳೂ ಮುಖ್ಯ