ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ೧೬೬ ಕರಭೂಷಣ ರಾದಾಗ, ಬಹಳ ಮನೋಹರವಾಗಿ ಒಂದೆರಡು ವಾಕ್ಯಗಳನ್ನು ಹೇಳಿ ಜನಗಳು ಚಪ್ಪಾಳೆ ತಟ್ಟುತಿರುವಾಗ ಯಾರನ್ನಾದರೂ ಮರೆಮಾಡಿ ಕೊಂಡು ಗೊರಕೆಯನ್ನು ಹೊಡೆಯುತಿದ್ದು, ಹೆಪ್ಪಾಳೆಗಳ ಧ್ವನಿಯು ನಿಂತಕೂಡಲೆ ಪುನಃ ಮಾತನಾಡುವುದನ್ನು ಸಕ್ರಮಿಸುತಿದ್ದರು ಡಾಕ್ಟರ್‌ ಗುಡ್ ಎಂಬಾತನು, ಚಿಕಿತ್ಸಕರಲ್ಲಿ ಅದ್ವಿತೀಯನಾಗಿದ್ದನು. ನಾಲ್ವತ್ತು ವರುಷ ಕಾಲ ಈತನು ಊಟಕ್ಕೂ ನಿದ್ದೆಗೂ ವಿರಾಮವಿಲ್ಲದೆ ಕೆಲಸಮಾಡಿದನು ಇಷ್ಟು ಕೆಲಸಗಳಲ್ಲಿಯ, ಮಧ್ಯೆ ವಿರಾಮವನ್ನು ಮಾಡಿಕೊಂಡು ಹನ್ನೊಂದು ಭಾಷೆಗಳನ್ನು ಅಭ್ಯಾಸಮಾಡಿ, ಅವುಗಳಲ್ಲಿ ಅನೇಕ ಗ್ರಂಧಗ ಳನ್ನು ಬರೆದಿರುತ್ತಾನೆ. ಆತನು ಬರೆದಿರುವ “ ಬುಕ್ ಆಫ್ ನೇಚರ್' ' ಎಂಬ ಪುಸ್ತಕವನ್ನು ಅವಲೋಕಿಸಿದರೆ, ಅವನ ಪಾಂಡಿತ್ಯವು ಎಷ್ಟು ಅದ್ಭು ತವಾಗಿದ್ದಿತೋ ಅದು ಗೊತ್ತಾಗುವುದು ಅಪಾರವಾದ ಕೆಲಸಗಳಿ ದ್ದಾಗ್ಯೂ, ಸಾವಧಾನವಾಗಿ ಎಲ್ಲಾ ಕೆಲಸಗಳನ್ನೂ ಮಾಡಿ, ಆ ಕೆಲಸ ಗಳೇ ಒಂದಾಗುತ್ತಲೂ ಒಂದು ವಿಶ್ರಾಂತಿಯಾಗಿ ಪಣವಿಸುವಂತೆ ಮಾಡಿಕೊಂಡಿದ್ದನು. ನಮ್ಮ ಒಂದನೆಯ ರ್ಕೌಸಿಲರಾದ ಮೆ!! ಎಚ್. ವಿ, ನಂಜುಂಡಯ್ಯನವರು, ಹೀಗೆ ಶತಾವಧಾನ ಮಾಡುವುದನ್ನು ಅಭ್ಯಾಸ ಮಾಡಿರುತ್ತಾರೆ. ಈ ಸಂಸ್ಥಾನದ ಅಧಿಕಾರಿಗಳಲ್ಲಿ, ಪ್ರಾಯಕವಾಗಿ ಎಲ್ಲ ಇಲಾಖೆಗಳ ಕೆಲಸಗಳನ್ನೂ ಸಾವಧಾನವಾಗಿ ಮಾಡುವ ಶಕ್ತಿಯು, ಇವರಿಗಿರುವಷ್ಟು ಇನ್ನಾರಿಗೂ ಇರುವುದಿಲ್ಲ. ಕೆಲಸಮಾಡುವಾಗ ಯಾರು ಬಂದಾಗ್ಯೂ ವಿರಾಮವಿಲ್ಲ ವೆಂದು ಸಿಡುಗುಟ್ಟಿದೆ, ಬಂದವರೊ ಡನೆ ವಿರಾಮವಾಗಿ ಮಾತನಾಡಿಕಳುಹಿಸುತ, ತಮ್ಮ ಕಲಸಗಳಿಗೆ ನ್ಯೂನತೆ