ಪುಟ:ವಿದ್ಯಾರ್ಥಿ ಕರಭೂಷಣ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪರಿಚ್ಛೇದ ೩ ೧೬? www ಬಾರದಂತೆ, ಸಹನದಿಂದ ಬೆಳಗ್ಗೆ ಏಳುಗಂಟೆಯಿಂದ ರಾತ್ರಿ ಹನ್ನೆರಡು ಗಂಟೆ ಯವರೆಗೂ ಇವರ ಹಾಗೆ ಕೆಲಸಮಾಡತಕ್ಕವರು ಅಪೂತ್ವವಾಗಿರುವರು. ಈ ಕೆಲಸಗಳ ಮಧ್ಯದಲ್ಲಿ, ಒಂದು ಹೊಸ ಪುಸ್ತಕವನ್ನಾದರೂ ಇವರು ಓದದಿರತಕ್ಕೆ ದಿವಸವೇ ಇರುವುದಿಲ್ಲ, ಓದಿದ ಗ್ರಂಧಗಳಿಂದ ಸ್ವಾರಸ್ಯ ಯುಕ್ತವಾದ ಅಂಶಗಳನ್ನು ಸಂಗ್ರಹಿಸಿ ಒರೆದಿಡದಿರುವದೂ ಅಪೂವ್ವ ಎಷ್ಟು ಕೆಲಸಬಿದ್ದಾಗ್ಯೂ ಬೇಜಾರನ್ನು ಹೊಂದದೆ, ಸದಾ ಸಂತೋಷಚಿತ್ತರಾಗಿ, ಯಾವುದರಲ್ಲಿಯೂ ಸ್ವತ್ವವನ್ನಿಟ್ಟು ಕೊಳ್ಳದೆ ಇವರಂತೆ ಕೆಲಸಮಾಡತಕ್ಕ ವರು ದುರ್ಲಭರು. ಒಂದು ಕೆಲಸದಲ್ಲಿ ಬೇಜಾರಾದರೆ ಮತ್ತೊಂದು ಕೆಲಸದಲ್ಲಿ ವಿಶ್ರಾಂತಿಹೊಂದುವ ಅಭ್ಯಾಸವನ್ನು ಮಾಡಿಕೊಂಡಿರುವುದೇ, ಎಷ್ಟು ಕೆಲಸಗಳು ಬಂದಾಗ ಅದನ್ನು ಲೀಲೆಯಿಂದ ಮಾಡತಕ್ಕೆ ಶಕ್ತಿ ಯನ್ನು ಎಲ್ಲರಿಗೂ ಉಂಟುಮಾಡುವುದು, ಆದರೆ, ಇ೦ಧ ಶಕ್ತಿಯನ್ನು ಅವೇಕಿಸತಕ್ಕವರು, ಆಹಾರ ವಿಹಾರಗಳಲ್ಲಿ ಕೃತ್ಯವಾಗಿದ್ದುಕೊಂಡು, ಜಿತೇಂದ್ರಿಯರಾಗಿ, ಕೂಡಿದ ಮುಟ್ಟಿ ಗೂ ಅರಿಷಡ್ವರ್ಗಗಳನ್ನು ಗೆದ್ದು, ಧರ್ಮಮಾರ್ಗದಲ್ಲಿ ಪರಾಯಣರಾಗಿರಬೇಕು, ಹಾಗಿಲ್ಲದಿದ್ದರೆ, ಈ ರೀತಿಯಲ್ಲಿ ಕೆಲಸಮಾಡುವುದಕ್ಕೆ ಬೇಕಾದ ಶಾಂತಿಯು ಲಭ್ಯವಾಗು ವುದಿಲ್ಲ. +ಣೆ