೪೮ ವಿದ್ಯಾರ್ಥಿ ಕರಭೂಷಣ ಒಟ | ಸುಶಿಕ್ಷಿತರನ್ನಾಗಿ ಮಾಡುತ್ತ ಬಂದುದರಿಂದ, ಆ ದ್ವೀಪ ನಿವಾಸಿಗಳು, ಸಕಲ ಭಾಗಗಳಲ್ಲಿಯೂ ಪಾಶ್ಚಾತ್ಯರಿಗೆ ಸಮಾನರಾಗಿ ಪರಿಣಮಿಸಿರು ತ್ತಾರೆ. ಇಂಡಿಯಾ ಗವರ ಮೆಂಟಿನವರೂ, ನೇಟಿವ್ ಪ್ರಭುಗಳೂ, ಈ ವಿಷಯವನ್ನು ಪರಾಲೋಚಿಸಿ, ನಕ» ಲೌಕಿಕ ಶಾಸ್ತ್ರಗಳನ್ನೂ ಈ ಭರತ ಖಂಡದ ದೇಶಭಾಷೆಗಳಲ್ಲಿ ಪಾರಹೇಳುವಂತೆ ಮಾಡಿದರೆ, ಭಾರತೀಯರು ಶೀಘ್ರದಲ್ಲಿಯೇ ಸಮಸ್ತ ಭಾಗಗಳಲ್ಲಿಯೂ ಬ್ರಿಟಿಷ್ ಪ್ರಜೆಗಳೆನ್ನಿಸಿಕೊಳ್ಳು ವುದಕ್ಕೆ ಅರ್ಹರಾಗುತ್ತಾರೆ. ಜನಗಳ ಮನಸ್ಸು, ಅವರು ಜನ್ಮವೆತ್ತಿದಾಗ ಜೇನುಮೇಣದಂತಿರುವು ದೆಂದು, ನಾವು ಪೂತ್ವದಲ್ಲಿಯೇ ಹೇಳಿರುವೆವು, ಚಿನ್ನದಿಂದ ನಾನಾವಿಧ ವಾದ ಆಭರಣಗಳನ್ನು ಮಾಡಬಹುದು, ಬೇಡಿಯ ಮಣ್ಣಿನಿಂದಲೂ, ಇತರ ಲೋಹಗಳಿಂದಲೂ, ಇದೇ ರೀತಿಯಲ್ಲಿ ಬೇಕಾದ ವಸ್ತುಗಳನ್ನು ನಿರ್ಮಾಣ ಮಾಡಬಹುದು, ಹಾಗೆ ನಿರ್ಮಾಣ ಮಾಡಲ್ಪಟ್ಟ ವಸ್ತುಗಳನ್ನು ನಾಶ ಮಾಡಿ, ಪ್ರನಃ ಲೋಹಗಳ ಅವಸ್ಥೆಗೂ ಜೇಡಿಯಮಣ್ಣಿನ ಅವಸ್ಥೆಗೂ ತರು ವುದು ಕೂಡ ಸಾಧ್ಯವಾದುದು, ಜನಗಳ ಮನಸೂ ಕೂಡ, ಮೇಣ ಜೇಡಿ ಮಣ್ಣು ಚಿನ್ನ ಮೊದಲಾದ ವಸ್ತುಗಳಂತೆ, ಇಷ್ಟಾನುಸಾರವಾದ ರೂಪ ವನ್ನು ಹೊಂದುವ ರೀತಿಯಲ್ಲಿ ಮಾಡಲ್ಪಡಬಹುದು, ಅದರಮೇಲೆ ಯಾವ ಮುದ್ರಣವನ್ನು ಮಾಡಿದರೂ ಅದರ ಸ್ವರೂಪವನ್ನು ಅದು ಹೊಂದು ವಂತೆಯೂ ಮಾಡಬಹುದು. ಬಾಲ್ಯದಲ್ಲಿ ಎಲ್ಲರ ಮನಸೂ ಸ್ವರೂಪ ಸ್ವೀಕಾರವನ್ನು ಹೊಂದುವ ಸ್ಥಿತಿಯಲ್ಲಿರುವುದು. ಆಗ ತಾಯಿತಂದೆಗಳೂ ಪಾಠಕರೂ ಪೂಹ್ವಾಪರ ಯೋಚನೆಯನ್ನು ಮಾಡಿ, ಒಳ್ಳೆಯ ವಿಷಯಗಳು
ಪುಟ:ವಿದ್ಯಾರ್ಥಿ ಕರಭೂಷಣ.djvu/೫೬
ಗೋಚರ