ಪುಟ:ವಿದ್ಯಾರ್ಥಿ ಕರಭೂಷಣ.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ವಿದ್ಯಾರ್ಥಿ ಕರಭೂಷಣ ದುಶೇಖರ ಮೊದಲಾದ ಗ್ರಂಧಗಳೇ ನಮ್ಮ ಮಕ್ಕಳಲ್ಲವೇ? ಇದು ಹಾಗಿ ರಲಿ; ಇವುಗಳು ಮಾತ್ರವೇ ನಮ್ಮ ಮಕ್ಕಳಲ್ಲ ; ಈ ಗ್ರಂಧಗಳನ್ನು ವ್ಯಾಸಂಗಮಾಡಿ ವಿದ್ವಾಂಸರಾಗತಕ್ಕವರೆಲ್ಲರೂ ನಮ್ಮ ಮಕ್ಕಳು ” ಎಂದು ಹೇಳಿದರು. ಇದನ್ನು ಕೇಳಿ, ಆಕೆಯು ಮಕ್ಕಳಿಲ್ಲದ ಕ್ಷೇಶವನ್ನು ಬಟ್ಟು, ವಿದ್ಯಾರ್ಥಿಗಳ ಯೋಗಕ್ಷೇಮ ಚಿಂತೆಯಲ್ಲಿ ಒದ್ದಾಧರಳಾದಳು. ಈ ದಂಪತಿಗಳಿಬ್ಬರೂ ಕಾಲಾಧೀನರಾದರು, ಆದರೆ, ದೀಕ್ಷಿತರು ಅಪ್ಪಣೆ ಕೊಡಿಸಿದಂತೆ, ಅವರ ಯಶಸ್ಪೂ ಅವರ ಗ್ರಂಧಗಳೂ ಆಚಂದ್ರಾರ್ಕವಾಗಿ ರುವುವು, ವಿದ್ಯಾರ್ಧಿದೆಶೆಯಲ್ಲಿ ವಿಷಯಸುಖಗಳ ಮೇಲೆ ಮನಸ್ಸನ್ನಿಡಗೆ ಜ್ಞಾನಾರ್ಜನೆಗೋಸ್ಕರ ಪ್ರಯತ್ನ ಮೂಡುತ್ತ, ಆ ಪ್ರಯತ್ನಗಳಿಗೆ ಎಷ್ಟು ಭಂಗ ಒಂದಾಗೂ ಹೆದರದೆ, ಹಿಡಿದ ಕೆಲಸವನ್ನು ಸಾಧಿಸುವುದು ಅಸಾಧ್ಯ ವಾದರೆ ಅದನ್ನು ಸಾಧಿಸುವ ಪ್ರಯತ್ನದಲ್ಲಿ ದೇಹತ್ಯಾಗವನ್ನಾದರೂ ಮಾಡುವುದೇ ಸರಿ-ಎಂಬ ಸಂಕಲ್ಪದಿಂದ ಯಾರು ಕೆಲಸಮಾಡುವರೋ, ಅವರ ಇಷ್ಟಾರ್ಧಸಿದ್ದಿಯನ್ನು ಹೊಂದುವರು. ವಿದ್ಯಾವಂತರು ಪ್ರಪಂಚದಲ್ಲಿ ಬೇಕಾದಹಾಗೆ ಸಿಕ್ಕುತ್ತಾರೆ, ವಿದ್ಯೆಗೆ ಎನಯವು ಕಿರೀಟಪ್ರಾಯವಾದುದು, ಧರದಿಂದ ನಡೆಯುವುದು, ಎಂಧ ಕಷ್ಟ ಬಂದಾಗ್ಯೂ ಅಧರಕ್ಕೆ ಬೀಳದಿರುವುದು, ಇವೆರಡೂ ವಜ್ರಕವಚಕ್ಕೆ ಸಮಾನವಾದುವುಗಳು, ವಿದ್ಯೆ ವಿನಯ ಧರ-ಈ ಮೂರೂ ಯಾರಲ್ಲಿ ಸೇರಿರುವುವೋ, ಅವರೇ ತಪಸ್ವಿಗಳು; ಅವರನ್ನು ಯಾರೂ ಗೆಲ್ಲಲಾರರು. ಇದಕ್ಕೆ, ವೇದ ಶಾಸ್ತ್ರ ಪುರಾಣೇತಿಹಾಸಗಳಲ್ಲಿ ಯ, ಸಮಸ್ತ ದೇಶಗಳ ಚರಿತ್ರೆಗಳಲ್ಲಿಯೂ, ಗೊತ್ತಿಲ್ಲದಷ್ಟು ದೃಷ್ಟಾಂತಗಳಿರುತ್ತವೆ, ಭಾಗವತ