ಪುಟ:ಶಂಕರ ಕಥಾಸಾರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಶಂಕರಕಥಾಸಾರ

೪೫

ಅದನ್ನು ಕೇಳಿ ಆಚಾರ್ಯರು "ಒಂದಾನೊಂದು ಕಾಲದಲ್ಲಿ ಓರ್ವಸ್ತ್ರೀಯು ತನ್ನ
ಎಳೆಯ ಹುಡುಗನನ್ನು ನೋಡಿಕೊಳ್ಳುತ್ತಿರುವಂತೆ ಯಮುನಾನದಿಯ ದಡದಮೇಲೆ
ಕುಳಿತಿದ್ದ ಒಬ್ಬ ಯೋಗಿಯ ವಶಕ್ಕೆ ಕೊಟ್ಟು ತಾನು ತನ್ನ ಗೆಳತಿಯರೊಡನೆ ಎಲ್ಲಿಗೋ
ಹೋಗಿ ಬರುವಷ್ಟರಲ್ಲಿ ತನ್ನ ಮಗನು ಮೃತನಾಗಿರುವುದನ್ನು ನೋಡಿ ಆಕೆಯು ವ್ಯಸ
ನಾಕ್ರಾಂತಳಾಗುತ್ತಿರಲು ಆ ಯೋಗಿಯು ಪರಕಾಯಪ್ರವೇಶವಿದ್ಯಾಬಲದಿಂದ ತನ್ನ
ಆತ್ಮವನ್ನು ಆ ಮಗುವಿನ ದೇಹದೊಳಕ್ಕೆ ನುಗ್ಗಿಸಿದ ಪ್ರಯುಕ್ತ ಅವಳ ಮಗುವು ನಿದ್ರೆ
ಯಿಂದೆದ್ದವನಂತೆ ಎದ್ದು ಪ್ರಸಿದ್ಧನಾದೀ ಹಸ್ತಾಮಲಕಾಚಾರ್ಯ ನಾಗಿರುವನು ; ಇವನು
ಸಕಲ ಶಾಸ್ತ್ರಜ್ಞನಾದರೂ ಅವಿಚ್ಛಿನ್ನ ಸಮಾಧಿನಿಷ್ಟನಾಗಿರುವುದರಿಂದ ಅವನು ವೃತ್ತಿಯ
ಅರಚನೆಗೆ ಅರ್ಹನಲ್ಲ. ಸನಂದನನು ಭಾಷ್ಯಕ್ಕೊಂದು ವ್ಯಾಖ್ಯಾನವಂ ಬರೆಯಲಿ”
ಎಂದು ಹೇಳಿ "ನೀನು ವಾರ್ತಿಕವಂ ಮಾಡಬೇಡ ; ನಿನ್ನ ಸಿದ್ಧಾಂತ ಜ್ಞಾನಪ್ರಕಾಶಗ
ಳಾದ ಸ್ವತಂತ್ರಗ್ರಂಥಗಳಂ ರಚಿಸು ”ಎಂದು ಸುರೇಶ್ವರರಿಗೆ ರಹಸ್ಯದಲ್ಲಿ ಹೇಳಲು
ಅವರು ಅದರಂತೆ ' ನೈಷ್ಕರ್ಮ್ಯಸಿದ್ಧಿ ' ಯೆಂಬ ಸ್ವತಂತ್ರ್ಯ ಗ್ರಂಥವನ್ನು ರಚಿಸಿ ಗುರುಗಳಿ
ಗರ್ಪಿಸಲು ಅವರು ಮತ್ತು ಶಿಷ್ಯ ರೂ ಅದನ್ನು ನೋಡಿ ಸಂತುಷ್ಟರಾದರು. ಬಳಿಕ
ಸುರೇಶ್ವರರು "ಈ ಭಾಷ್ಯ ಕ್ಕೆ ಇನ್ನು ಯಾರು ವಾರ್ತಿಕವನ್ನು ಬರೆದರೂ ಅದು ಪ್ರಚಾ
ರಕ್ಕೆ ಬಾರದೇಹೋಗಲಿ ” ಎಂದು ಶಾಪವಿತ್ತರು.
ಅನಂತರ ಶಂಕರದೇಶಿಕರು “ ನನ್ನದು ಯಜುಶ್ಶಾಖೆ ; ನಿನ್ನದು ಕಣ್ವಶಾಖೆ ;
ಆ ಎರಡರ ಭಾಷ್ಯಕ್ಕೂ ವಿವರಣ, ವಾರ್ತಿಕ' ಗಳೆಂಬ ಗ್ರಂಥಗಳನ್ನು ರಚಿಸು ” ಎಂದು
ಸುರೇಶ್ವರರಿಗೆ ಹೇಳಲು ಅವರು ಅದರಂತೆ ಗ್ರಂಥಗಳಂ ರಚಿಸಿ ಆಚಾರ್ಯರಿಗರ್ಪಿಸಿದರು.
“ಪದ್ಮಪಾದರು ಆಚಾರ್ಯರ ಅಪ್ಪಣೆಯಂತೆಯೇ ಭಾಷ್ಯಕ್ಕೆ ಎರಡು ಭಾಗಗಳುಳ್ಳ
ಟೀಕೆಯಂ ಬರೆದರು. ಅದರಲ್ಲಿ ಪೂರ್ವಭಾಗವು ಪಂಚಪಾದಿಕೆಯೆಂತಲೂ ಉತ್ತರ
ಭಾಗವು ವೃತ್ತಿಯಂತಲೂ ಹೆಸರುಹೊಂದಿ ವಿಜಯಡಿಂಡಿಮವೆನಿಸಿದವು.
ಆಚಾರ್ಯರು ಎರಡು ಭಾಗಗಳನ್ನೂ ಕೇಳಿ ಪೂರ್ವಭಾಗವಾದ ಪಂಚಪಾದಿ
ಕೆಯೇ ಚೆನ್ನಾಗಿದೆ ; ಮತ್ತು ಅದೇ ಪ್ರಪಂಚದಲ್ಲಿ ಪ್ರಖ್ಯಾತವಾಗಿ ನಿಲ್ಲುವುದು.
ಮುಂದೆ ನೀನು ವಾಚಸ್ಪತಿಯೆಂಬ ಹೆಸರಿನಿಂದ ಭೂಮಿಯಲ್ಲಿವತರಿಸಿ ನನ್ನ ಭಾಷ್ಯಕ್ಕೆ
ಟೀಕೆಯನ್ನು ರಚಿಸುವೆ ; ಅದು ಶಾಶ್ವತವಾಗಿ ನಿಲ್ಲುವುದು ” ಎಂದು ಹೇಳಿದರು.
ಬಳಿಕ ದೇಶಿಕರು ಉಳಿದ ತಮ್ಮ ಶಿಷ್ಯರಂ ಕರೆದು “ ನಿಮ್ಮ ನಿಮ್ಮ ಯೋಗ್ಯ
ತಾನುಸಾರವಾಗಿ ಅದ್ವೈತಗ್ರಂಥಗಳಂ ರಚಿಸಿರಿ” ಎಂದಾಜ್ಞಾಪಿಸಲು ಅವರು ಅದ
ರಂತೆ ಗ್ರಂಥಗಳಂ ರಚಿಸಿ ಗುರುವಿಗರ್ಪಿಸಿದರು.
ಈ ಪ್ರಕಾರವಾಗಿ ಆಚಾರ್ಯರು ಜ್ಞಾನಮಾರ್ಗ ಪ್ರಚಾರಮಾಡುತ್ತಿದ್ದರು.