ಅವನು ತನ್ನ ಭಾಷ್ಯವನ್ನು ಬಿಟ್ಟು ಹರದನೇ ಮೊದಲಾದ ಶಿಷ್ಯರೊಡನೆ ಶರಣಾಗತ
ನಾದನು.
ಅಲ್ಲಿಂದ ಆಚಾರರು ಸೌರಾಷ್ಟ್ರಕ್ಕೆ ಹೋಗಿ, ಅಲ್ಲಿದ್ದ ದುರ್ಮತದವರನ್ನು
ಸೋಲಿಸಿ, ದ್ವಾರಕಿಗೆ ಬಂದು ಪಾಂಚರಾತ್ರರನ್ನೂ ,ಅವರ ಗುರುವಾದ ಭಟ್ಟಭಾಸ್ಕರ
ರನ್ನೂ ವಾದದಲ್ಲಿ ಗೆದ್ದು ಅವಂತಿಗೆ ಹೋಗಿ ಅಲ್ಲಿದ್ದ ಬಾಣನೇ ಮೊದಲಾದವರನ್ನು
ತಮ್ಮ ವಜ್ರಾಯುಧದಂತಿರುವ
ಸಪ್ರಾಮಾಣ್ಯಗಳಾದ ವಾಕ್ಸಮೂಹಗಳಿಂದ ಹತಗರ್ವರ
ನ್ನಾಗಿಮಾಡಿ ಸ್ವಭಾಷ್ಯವಂ ಖಂಡಿಸಬೇಕೆಂದು ಬಂದ ಶ್ರೀಹರ್ಷನೇ ಮೊದಲಾದವರನ್ನು
ಸೋಲಿಸಿ, ಅನಂತರ ದರದ, ಭರತ, ಶೂರಸೇನ, ಕುರು, ಪಾಂಚಾಲದೇಶಗಳಲ್ಲಿದ್ದ
ವಾದಿಗಳಂ ನಿಗರ್ವಿಗಳನ್ನಾಗಿಮಾಡಿ, ಅಲ್ಲಿಂದ ಕಾಮರೂಪಕ್ಕೆ ಹೋಗಿ ಶಾಸ್ತ್ರಭಾಷ್ಯ
ಕರ್ತನಾದ ಅಭಿನವಗುಪ್ತನಂ ಗೆದ್ದು, ಗೌಡಪದದೇಶಕ್ಕೆ ಹೋಗಿ ಮುರಾರಿಮಿಶ್ರರಂ
ಸೋಲಿಸಿ, ಯುದ್ಧಕ್ಕೆ ಬಂದ ಬೌದ್ಧರನ್ನೂ, ನ್ಯಾಯಸಿದ್ದಾಂತಜ್ಞಾನದಿಂದಲೇ ಮೋಕ್ಷ
ಬರುವುದೆಂದು ಹೇಳುತ್ತಿದ್ದ ಗೌತಮ ಮತಾನು ಸಿದ್ಧಾಂತಾನಯಾಯಿಗಳಾದ
ತಾರ್ಕಿಕರನ್ನೂ, ಕೇವಲ: ಜ್ಞಾನದಿಂದಲೇ ಮೋಕ್ಷ ಬರುವುದೆಂದು ವಾದಿಸುತ್ತಿದ್ದ
ಕಾಪಿಲಮತಾನುಯಾಯಿಗಳನ್ನೂ, ಶಬ್ಧ ಬ್ರಹ್ಮವಾದಿಗಳಾದ ಪಾತಂಜಲ ಮತಾನು
ಯಾಯಿಗಳನ್ನೂ, ಮತ್ತು ವೈಶೇಷಿಕ ಮತಾವಲಂಬಿಗಳನ್ನೂ ವಾದದಲ್ಲಿ ಗೆದ್ದು
ಅದ್ವೈತಸ್ಥಾಪನೆಯಂಗೈದರು.
ಆವರಿವಿಗೆ ಈ ಭರತಖಂಡದಲ್ಲಿದ್ದ ೮೬ ದುರ್ಮತಗಳು ಶಾಂತವಾಗಿ ಅಡಗಿದವು
ವಾದದಲ್ಲಿ ಸೋತ ಪಂಡಿತರು ವಿಧೇಯರಾದರು. ಮಹಿಮೆಯನ್ನು ಕಂಡ ಭಕ್ತರು
ಸೇವಿಸುತ್ತಾ ಬಂದರು. ಮೂರ್ಖರಾಗಿ ಹಠದಿಂದ ಜಗಳಕ್ಕೆ ನಿಂತವರು ರಾಜನಿಗ್ರಹ
ದಿಂದ ಸತ್ವಗುಣವನ್ನು ಅನುಸರಿಸಿದರು. ಮೋಸತನದಿಂದ ಗುರುಗಳನ್ನು ದ್ವೇಷಿಸಿದವರು
ಆಚಾರರ ತಪಃಶಕ್ತಿಯಿಂದ ನಷ್ಟರಾದರು. ಕೋಟ್ಯಾನುಕೋಟಿ ಬ್ರಾಹ್ಮಣರು ದುರಾ
ಚಾರಗಳಂ ಬಿಟ್ಟು ವೈದಿಕಮತವನ್ನನುಸರಿಸಿ ಪಂಚಾಯತನ ಪೂಜಾರತರಾಗಿ ಆತ್ಮ
ಭೇದಾನುಸಂಧಾನದಿಂದ ಪರಮೇಶ್ವರನನ್ನು ಕರ್ಮಮಾರ್ಗಪ್ರಕಾರವೇ ಆರಾಧಿಸುತ್ತಾ
ಭಕ್ತಿಯೋಗ, ಕರ್ಮಯೋಗ, ಹಠಯೋಗ, ಸಾಂಖ್ಯಯೋಗ, ಮುಂತಾದ ಸರ್ವ
ಮಾರ್ಗದಲ್ಲಿಯೂ ದೋಷಮಾರ್ಗವಂ ಬಿಟ್ಟು, ಶ್ರುತಿಯುಕ್ತವಾದ ಬ್ರಹ್ಮಾತ್ಮೈಕ್ಯಾ
ನುಸಂಧಾನದಿಂದಲೇ ಪ್ರವರ್ತಿಸುತ್ತ, ಸರ್ವ ಮಾರ್ಗವನ್ನೂ ಜ್ಞಾನದಲ್ಲಿ ಮುಗಿಯಿಸಿ,
ಕಾಮಕ್ರೋಧಾದಿಗಳಂ ತ್ಯಜಿಸಿ ಅಸ್ತೇಯಾಹಿಂಸಾಸತ್ಯ ಶೌಚದಯಾದಿ ಷಡ್ಗುಣಗಳಂ
ಪಡೆದು ತಪಸ್ವಿಗಳಾಗಿ ಪೂಜ್ಯರೆನಿಸಿದರು. ಬ್ರಾಹ್ಮಣರೆಲ್ಲರೂ ಪರಮಾದ್ವೈತ
ಪುಟ:ಶಂಕರ ಕಥಾಸಾರ.djvu/೮೦
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೬೪
ಕಾದಂಬರೀಸಂಗ್ರಹ