ಪುಟ:ಶಕ್ತಿಮಾಯಿ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ ಶಕ್ತಿಮಯಿ. ೧೩ ಹನ್ನೆರಡನೆಯ ಪ್ರಕರಣ. >> ಬಾದಶಹನ ಅಂತವ ದಾಜಾ ಗಣೇಶದೇವನೊಡನೆ ಒಡಂಬಡಿಕೆಯ ಮಾತು-ಕಥಗಳ ನಾಡುವ ಸಲುವಾಗಿ ಬಾದಶಹನು ಆಜೀಮಖಾನನನ್ನು ಕಳಿಸಿದನು. ಸನ್ಯಾಸಿನಿಯನ್ನು ಮುಕ್ತ ಮಾಡುವದಲ್ಲದೆ, ದಿನಾಜಪುರ ರಾಜ್ಯದಿಂ ದ ಇಷ್ಟು ದಿವಸಗಳ ವರೆಗೆ ಬಾದಶಹನಿಗೆ ಸಲ್ಲುತ್ತಿದ್ದ ಕಪ್ಪವನ್ನು ಇನ್ನು ಮುಂದೆ ಬಾದಶಹನು ತಕೊಳ್ಳದೆ ಮಾಫಮಾಡಿ ಬಿಡಬೇಕು, ಅಂದರೆ ಬಾದಶಹನ ಪಕ್ಷವನ್ನು ಸ್ವೀಕರಿಸಿ ತಾನು ಗಾಯಸುದ್ದಿನ ನೊಡನೆ ಕಾಳಗಕ್ಕೆ ಬರುವೆನೆ'೦ದು ಗಣೇಶದೇವನು ಅಜೀಮಖಾನ ನಿಗೆ ತಿಳಿಸಿದನು. ಹ್ಯಾಗೇ ಆಗಲಿ, ಈ ಸಂಬಂಧದ ಸಂಧಿ ಪತ್ರವ ನ್ನು ಬಾದಶಹನೇ ಬರೆದು ಕೊಡುವನು. ಆದ್ದರಿಂದ ನೀನು ಅಲ್ಲಿಗೆ ಈಗಲೇ ಹೊರಟು ಬರಬೇಕೆಂದು ಅಜೀಮಖಾನನು ಗಣೇಶದೇವನಿಗೆ ಒತ್ತರಪಡಿಸಹತ್ತಿದನು. ರಾಜ ಸಭೆಯಲ್ಲಿ ತನಗೆ ಬಾದಶಹನಿಂದ ಯಾವ ತರದ ಮೋಸವೂ ಆಗಬಾರದು, ಇದಕ್ಕಾಗಿ ಬಾದಶಹನ ಮೊ ಮ್ಮಗನಾದ ಸಾಹೇಬ ಉದ್ದೀನನ್ನೂ ಆ ವರೆಗೆ ನನ್ನ ರಾಜ್ಯದಲ್ಲಿ ಅಡವು ಇರಿಸಬೇಕೆಂಬ ಗಣೇಶದೇವನ ಹೇಳಿಕೆಯ ಪ್ರಕಾರ ಖಾಷನು ಸಾಹೇಬ ಉದ್ದೀನನ್ನು ದಿನಾಜಪುರದಲ್ಲಿಯೇ ಬಿಟ್ಟು ಗಣೇ ದೇವನೊಡನೆ ಪಾಂಡುಯ ರಾಜಧಾನಿಗೆ ಬಂದನು. ಆದರೆ ಆ ಮುದಿಹುಚ್ಚ ಬಾದಶಹನು ಆಜೀಮಖಾನನ ವಚ ನವನ್ನು ಪಾಲಿಸಲಿಲ್ಲ. ಗಣೇಶದೇವನು ಬಾದಶಹನ ಸಭೆಗೆ ಬರಲು, ಬಾದಶಹನು ಅವನನ್ನು ಮಿತ್ರಭಾವದಿಂದ ನೋಡಲಿಲ್ಲ, ಇಷ್ಟೇ ಅಲ್ಲ, .ಒಬ್ಬ ಅಪರಿಚಿತ ಸಾಧಾರಣ ಗೃಹಸ್ಥನನ್ನು ಮನ್ನಿಸುವಷ್ಟು ಸಹ ಅವನು ಗಣೇಶದೇವನನ್ನು ಮನ್ನಿಸಲಿಲ್ಲ; ಬಾದಶಹನು ದರ್ಬಾ