ವಿಷಯಕ್ಕೆ ಹೋಗು

ಪುಟ:ಶಕ್ತಿಮಾಯಿ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆL ಶಕ್ತಿಮ. ೧೩೧ ಬುದ್ದೀನನಿಗೆ ಆಶ್ರಯ ಕೊಟ್ಟರೆ, ಈವತಿ ಗಾಯಸುದ್ದೀನನೊಡನೆ ಕಾದಲಿಕ್ಕೆ ನಾವು ಸಿದ್ಧರಾಗಬೇಕಾಗುತ್ತದೆ. ಈ ಪ್ರಕಾರದ ಇಕ್ಕ ಟೈನ ಸಂಕಟದಲ್ಲಿ ನಾವು ಯಾವ ಮಾರ್ಗದಿಂದ ನಡೆಯಬೇಕು? ಈ ಬಗ್ಗೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು;”ಎಂ ದು ಕೇಳಿದನು. “ಮಹಾರಾಜರು ಅಪ್ಪಣೆ ಕೊಡಿಸಿದಂತೆ ನಡೆಯಲಿಕ್ಕೆ ನಾವು ಬದ್ಧ ಕಂಕಣರಾಗಿ ನಿಂತಿದ್ದೇವೆ. ಮಹಾರಾಜರೆ ನಮ್ಮ ತಂದೆ-ತಾ ಯಿಗಳು; ನಾವು ತಮ್ಮ ಮಕ್ಕಳ ದಾಸರೂ ಆಗಿರುತ್ತೇವೆ. ಅ೦ ದಮೇಲೆ ತಾವು ಅಪ್ಪಣೆ ಕೊಟ್ಟ ಹಾಗೆ ನಡೆಯುವದು ಮಾತ್ರ ನಮ್ಮ ಕರ್ತವ್ಯವು' ಎಂದು ಸಭಿಕರೆಲ್ಲರೂ ಒಕ್ಕಟ್ಟಿನಿಂದ ಗಣೇಶದೇವರಾ ಜನಿಗೆ ತಿಳಿಸಿದರು, ಸಭಿಕರಲ್ಲಿಯ ಬಹು ಜನರು ಈ ಪ್ರಕಾರ ಸುಸ್ಪಷ್ಟವಾಗಿ ತಿಳಿಸಿದ ಬಳಿಕ ಕಡೆಗೆ ಒಬ್ಬ ಧೀರನು ಗಣೇಶವನನ್ನು ಕುರಿತು “ಮಹಾರಾಜ, ತಾವು ಅಭಯವನ್ನು ಕೊಟ್ಟಿದ್ದರಿಂದ ನಾನು ಈ ಸಂಬಂಧದಲ್ಲಿ ನನಗೆ ತೋರಿ ಬರುವ ವಿಚಾರಗಳನ್ನು ತಮ್ಮೆದುರಿಗೆ ಇ ಡುತ್ತೇನೆ. ಸಾಹೇಬುದ್ದೀನನು ವಿನನ್ನ ಗ್ರಸ್ತನ, ಅಸಹಾಯನೂ ಆ ಗಿರುವದರಿಂದ ಅವನನ್ನು ರಕ್ಷಿಸುವದು ತಮ್ಮ ಕರ್ತವ್ಯವೇ ಸರಿ; ಆದರೆ ತಮ್ಮ ಪ್ರಜಾಗಣಗಳ-ಮಕ್ಕಳ ಕಲ್ಯಾಣದ ಕಡೆಗೆ ಲಕ್ಷ್ಯ ಗೊಡುವದು ಅದಕ್ಕಿಂತಲೂ ಹೆಚ್ಚು ಮಹತ್ವದ ಕರ್ತವ್ಯವು ತಮ್ಮ ಪಾಲಿಗಿರುವದೆಂಬದನ್ನು ನಾವು ಮರೆಯಲಾಗದು. ಈ ಪ್ರಸಂಗ ದಲ್ಲಿ ತಾವು ಆತನನ್ನು ಸಂರಕ್ಷಿಸಬೇಕಾದರೆ, ತಮ್ಮ ಪ್ರಜಗಳನ್ನು ಕೊಲ್ಲಿಸಬೇಕಾಗುತ್ತದೆ. ಕೆಲವು ದಿವಸಗಳ ಮುಂಚೆ ಆದ ಯುದ್ಧದ ಹಾನಿಯೇ ಇನ್ನೂ ನಮ್ಮ ರಾಷ್ಟ್ರದಲ್ಲಿ ತುಂಬಿಬಂದಿರುವದಿಲ್ಲ. ಆದ್ದ ರಿಂದ ಇಂಥ ಈ ಕಾಲದಲ್ಲಿ ಪುನಃ ಯುದ್ಧಕ್ಕೆ ಅಣಿಯಾಗುವದೆಂದರೆ